ಸಿನಿಮಾ ಸುದ್ದಿ

ಪ್ರತ್ಯೂಷ ಆತ್ಮಹತ್ಯೆ ವಿಚಾರ ರಾಹುಲ್'ಗೆ ತಿಳಿದಿತ್ತು: ಪಬ್ಲಿಕ್ ಪ್ರಾಸಿಕ್ಯೂಟರ್

Manjula VN

ನವದೆಹಲಿ: ಕಿರುತೆರೆ ನಟಿ ಪ್ರತ್ಯೂಷ ಬ್ಯಾನರ್ಜಿ ತಾನು ಸಾಯುವುದಕ್ಕೂ ಮುನ್ನ ರಾಹುಲ್ ಕರೆ ಮಾಡಿ ಮಾತನಾಡಿದ್ದಳು. ಅಲ್ಲದೆ, ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರವನ್ನು ರಾಹುಲ್ ಗೆ ತಿಳಿಸಿದ್ದಳು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಸೋಮವಾರ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಪ್ರತ್ಯೂಷ ಆತ್ಮಹತ್ಯೆ ವಿಚಾರ ಸಂಬಂಧ ಇಂದು ಮುಂಬೈ ಹೈ ಕೋರ್ಟ್ ನಲ್ಲಿ ವಿಚಾರಣೆ ನಡೆಸಲಾಗಿತ್ತು. ವಿಚಾರಣೆ ವೇಳೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅವರು, ಪ್ರತ್ಯೂಷ ಸಾಯುವುದಕ್ಕೂ ಮುನ್ನ ಕೊನೆಯದಾಗಿ ಮಾತನಾಡಿದ್ದ ಕಾಲ್ ರೆಕಾರ್ಡಿಂಗ್ ನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಅಲ್ಲದೆ, ಪ್ರತ್ಯೂಷ ಸಾಯುವುದಕ್ಕೂ ಮುನ್ನ ಕೊನೆಯದಾಗಿ ರಾಹುಲ್ ಬಳಿ ಮಾತನಾಡಿದ್ದು, ಮಾತುಕತೆ ವೇಳೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿಚಾರವನ್ನು ರಾಹುಲ್ ತಿಳಿಸಿದ್ದಾಳೆಂದು ಹೇಳಿದ್ದಾರೆ.

ಇನ್ನು ಪ್ರತ್ಯೂಷ ಸಾಯುವುದಕ್ಕೂ ಮುನ್ನ 3 ನಿಮಿಷಗಳ ಕಾಲ ರಾಹುಲ್ ಜೊತೆ ಮಾತನಾಡಿದ್ದು, ಈ ಕಾಲ್ ರೆಕಾರ್ಡಿಂಗ್ ನ್ನು ನ್ಯಾಯಾಧೀಶರಾದ ಮೃದುಲಾ ಭಟ್ಕಳ್ ಅವರು ಕೇಳಿದ್ದಾರೆಂದು ಹೇಳಲಾಗುತ್ತಿದೆ.

ಬಾಲಿಕಾ ವಧು ಧಾರಾವಾಹಿ ಮೂಲಕ ಕಿರುತೆರೆಗೆ ಹೆಜ್ಜೆಯಿಟ್ಟಿದ್ದ ಪ್ರತ್ಯೂಷ ಬ್ಯಾನರ್ಜಿಯವರು ನಂತರ ಸಾಕಷ್ಟು ಖ್ಯಾತಿ ಗಳಿಸಿದ್ದರು. ಏ.1 ರಂದು ನೇಣಿಗೆ ಶರಣಾಗುವ ಮೂಲಕ ಪ್ರತ್ಯೂಷ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರತ್ಯೂಷ ಇದ್ದಕ್ಕಿದ್ದಂತೆ ಆತ್ಮಹತ್ಯೆಗೆ ಕಿರುತೆರೆ ಸೇರಿದಂತೆ ಹಿರಿತೆರೆ ನಟ-ನಟಿಯರು ಆಘಾತ ವ್ಯಕ್ತಪಡಿಸಿದ್ದರು.

ಅಲ್ಲದೆ, ಆತ್ಮಹತ್ಯೆ ಕುರಿತಂತೆ ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಇದರಂತೆ ಹಲವರು ರಾಹುಲ್ ಬಗ್ಗೆ ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಪ್ರಸ್ತುತ ರಾಹುಲ್ ನನ್ನು ಮುಂಬೈ ಪೊಲೀಸರು ಬಂಧನಕ್ಕೊಳಪಡಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

SCROLL FOR NEXT