ಹೈದರಾಬಾದ್: ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅವರ ಬಹು ನಿರೀಕ್ಷಿತ 150ನೇ ಚಿತ್ರಕ್ಕೆ ಅಂತೂ ಟೈಟಲ್ ಫಿಕ್ಸ್ ಆಗಿದೆ. ಹೌದು ಚಿತ್ರಕ್ಕೆ ಕತ್ತಿಲಾಂಟೊಡು ಎಂದು ಹೆಸರಿಡಲಾಗಿದ್ದು, ಚಿತ್ರದ ಫಸ್ಟ್ ಲುಕ್ ಸಹ ಬಿಡುಗಡೆಯಾಗಿದೆ.
ತಮಿಳಿನಲ್ಲಿ ವಿಜಯ್ ನಟಿಸಿದ್ದ ಕತ್ತಿ ಚಿತ್ರವನ್ನೇ ತೆಲುಗಿಗೆ ರಿಮೇಕ್ ಮಾಡಲಾಗುತ್ತಿದ್ದು, ಚಿತ್ರಕ್ಕೆ ಕತ್ತಿಲಾಂಟೊಡು ಎಂದು ಹೆಸರಿಡಲಾಗಿದೆ. ಚಿತ್ರವನ್ನು ವಿವಿ ವಿನಾಯಕ್ ನಿರ್ದೇಶಿಸುತ್ತಿದ್ದಾರೆ.
ಎಲ್ ವೈಸಿಎ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಚಿರಂಜೀವಿ ಪುತ್ರ ರಾಮ್ ಚರಣ್ ಸಹ ನಿರ್ಮಾಪಕರಾಗಿದ್ದಾರೆ. ಚಿರಂಜೀವಿ ದ್ವಿಪಾತ್ರದಲ್ಲಿ ಅಭಿನಯಿಸುತ್ತಿದ್ದು, ಈಗಾಗಲೇ ವರ್ಕೌಟ್ ಶುರು ಮಾಡಿದ್ದಾರೆ.