ಸಿನಿಮಾ ಸುದ್ದಿ

ಖ್ಯಾತ ಚಿತ್ರಕಥೆಗಾರ, ನಿರ್ದೇಶಕ ಮತ್ತು ನಟ ವಿಯೆಟ್ನಾಂ ವೀಡು ಸುಂದರಂ ನಿಧನ

Guruprasad Narayana
ಚೆನ್ನೈ: 350 ಕ್ಕೂ ಹೆಚ್ಚು ತಮಿಳು, ತೆಲುಗು ಮತ್ತು ಹಿಂದಿ ಸಿನೆಮಾಗಳಲ್ಲಿ ಕೆಲಸ ಮಾಡಿರುವ ಖ್ಯಾತ ಸ್ಕ್ರಿಪ್ಟ್ ರಚನಕಾರ, ನಿರ್ದೇಶಕ ಮತ್ತು ನಟ ವಿಯೆಟ್ನಾಂ ವೀಡು ಸುಂದರಂ ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಪತ್ನಿ ಚೆಲ್ಲ (74) ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. 
1970 ರ 'ವಿಯೆಟ್ನಾಂ ವೀಡು' ಸಿನಿಮಾಗಾಗಿ ತಮಿಳುನಾಡಿನ ರಾಜ್ಯ ಪ್ರಶಸ್ತಿಯನ್ನು ಸುಂದರಂ ತಮ್ಮದಾಗಿಸಿಕೊಂಡಿದ್ದರು. ಹಾಗೆಯೇ ಅವರು ಆರಿಗ್ನೇರ್ ಅಣ್ಣ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. 
ಭಾವನಾತ್ಮಕ ಕಥೆ ಮತ್ತು ಶಿವಾಜಿ ಗಣೇಶನ್ ಅವರ ಅಧ್ಭುತ ನಟನೆ ಹೊಂದಿದ್ದ 'ವಿಯೆಟ್ನಾಂ ವೀಡು' ಸಿನೆಮಾ ತಮಿಳುನಾಡಿನಾದ್ಯಂತ ಯಶಸ್ವಿ ಪ್ರದರ್ಶನ ಕಂಡಿತ್ತು. ಆಗಿನಿಂದ ಸುಂದರಂ ಅವರು ವಿಯೆಟ್ನಾಂ ವೀಡು ಸುಂದರಂ ಎಂದೇ ಪ್ರಖ್ಯಾತರಾಗಿದ್ದರು. ರಜನಿಕಾಂತ್ ಅವರ 'ಅಂಧ ಕಾನೂನ್' ಸೇರಿದಂತೆ ನೂರಾರು ಸಿನೆಮಾಗಳಿಗೆ ಅವರು ಸ್ಕ್ರಿಪ್ಟ್ ಬರೆದಿದ್ದಾರೆ. 
ಹಾಗೆಯೇ ಸುಂದರಂ ಅವರು ಶಿವಾಜಿ ಗಣೇಶನ್ ಅವರ ಗೌರವಂ (1973), 'ದೇವಿ ಕರುಮಾರಿ ಅಮ್ಮನ್'(1974), 'ಜ್ಞಾನ ಪರವಿ' ಮುಂತಾದ ಸಿನೆಮಾಗಳನ್ನು ನಿರ್ದೇಶಿಸಿದ್ದರು. ಎಂ ಜಿ ರಾಮಚಂದ್ರನ್, ಶಿವಾಜಿ ಗಣೇಶನ್, ರಜನಿಕಾಂತ್, ಕಮಲಹಾಸನ್, ಕೆ ಆರ್ ವಿಜಯ, ಸತ್ಯರಾಜ್, ಕಾರ್ತಿಕ್ ಮುಂತಾದ ಜನಪ್ರಿಯ ನಂತರ ಸಿನೆಮಾಗಳಲ್ಲಿ ಸುಂದರಂ ಕೆಲಸ ಮಾಡಿದ್ದರು. 
SCROLL FOR NEXT