ಯಶ್, ರಾಧಿಕಾ ಪಂಡಿತ್ 
ಸಿನಿಮಾ ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ನಿಶ್ಚಿತಾರ್ಥ

ಗೋವಾದ ಸುಂದರ ಬೀಚ್ ನಲ್ಲಿ ಹಾಕಲಾಗಿದ್ದ ಸೆಟ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ವಿವಾಹ ನಿಶ್ಚಿತಾರ್ಥ ಅದ್ದೂರಿಯಾಗಿ ನೆರವೇರಿತು...

ಗೋವಾ: ಗೋವಾದ ಸುಂದರ ಬೀಚ್ ನಲ್ಲಿ ಹಾಕಲಾಗಿದ್ದ ಸೆಟ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ವಿವಾಹ ನಿಶ್ಚಿತಾರ್ಥ ಅದ್ದೂರಿಯಾಗಿ ನೆರವೇರಿತು.

ಗೋವಾದ ವಿವಂತ್ ನಲ್ಲಿ ಕಲಾ ನಿರ್ದೇಶಕ ಅರುಣ್ ಸಾಗರ್ ನಿರ್ಮಿಸಿದ್ದ ಅದ್ಧೂರಿ ಸೆಟ್ ನಲ್ಲಿ ಯಶ್ ಮತ್ತು ರಾಧಿಕ ಉಂಗುರ ಬದಲಾಯಿಸಿಕೊಂಡರು.

ಯಶ್ ನಿಶ್ಚಿತಾರ್ಥಕ್ಕೆ ಸ್ಯಾಂಡಲ್ವುಡ್ ನ ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತ ಅವರು ತೆರಳಿದ್ದು ಇವರ ಕಾಲಿಗೆ ಬಿದ್ದು ಯಶ್ ಮತ್ತು ರಾಧಿಕ ಪಂಡಿತ್ ಆಶೀರ್ವಾದ ಪಡೆದರು. ಕ್ರೇಜಿಸ್ಚಾರ್ ರವಿಚಂದ್ರನ್, ಪುನೀತ್ ರಾಜ್ ಕುಮಾರ್, ನಿರ್ಮಾಪಕ ಕೆ ಮಂಜು, ನಿರ್ದೇಶಕ ಮಹೇಶ್ ರಾವ್, ಪವನ್ ಒಡೆಯರ್, ಯೋಗರಾಜ್ ಭಟ್, ಚಿಕ್ಕಣ್ಣ, ಸಾಧುಕೋಕಿಲ ಸೇರಿದಂತೆ ಚಿತ್ರರಂಗದ 150ಕ್ಕೂ ಹೆಚ್ಚು ಮಂದಿ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗವಹಿಸಿದ್ದಾರೆ.

ಈ ಜೋಡಿ ಡಿಸೆಂಬರ್ ನಲ್ಲಿ ಹಸೆಮಣೆ ಏರಲಿದ್ದಾರೆ. ಇನ್ನು ಅರಮನೆ ಮೈದಾನದಲ್ಲಿ 3 ದಿನಗಳ ಕಾಲ ಅದ್ಧೂರಿ ವಿವಾಹ ನಡೆಯಲಿದೆ ಎನ್ನಲಾಗಿದೆ.

ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ನಿಶ್ಚಿತಾರ್ಥ ಚಿತ್ರಗಳು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ, ಶಾ ಭಯಗೊಂಡಿದ್ದು ನಮ್ಮ ಹೋರಾಟದಲ್ಲಿ ಅರ್ಧ ಗೆದ್ದಿದ್ದೇವೆ, CEC ರಾಜೀನಾಮೆ ನೀಡುವವರೆಗೆ ಹಿಂಜರಿಯುವುದಿಲ್ಲ': ಇಂದು CJP ಪ್ರತಿಭಟನೆ ಮುಂದುವರಿಕೆ

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

CJP ಪ್ರತಿಭಟನೆಗೆ ದೇಶವಿರೋಧಿ ಶಕ್ತಿಗಳ ಸಾಥ್‌: ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ..!

ಬರದಿಂದ ರೈತರು ಕಂಗಾಲಾಗಿದ್ದರೂ ಸಿಎಂ ಡಿಕೆಶಿಗೆ ಮಾತ್ರ ಸ್ಟಿಂಗ್ ಆಪರೇಷನ್'ನದ್ದೇ ಚಿಂತೆ: HDK ವ್ಯಂಗ್ಯ