ಖ್ಯಾತ-ಹಿರಿಯ ನಿರ್ದೇಶಕ ನಾಗಾಭರಣ ಅವರ ಪುತ್ರ ಪನ್ನಗಾಭರಣ
ಬೆಂಗಳೂರು: ಖ್ಯಾತ-ಹಿರಿಯ ನಿರ್ದೇಶಕ ನಾಗಾಭರಣ ಅವರ ಪುತ್ರನಾಗಿಯೂ, ಪನ್ನಗಾಭರಣ ಪೂರ್ಣಪ್ರಮಾಣದ ಸ್ವತಂತ್ರ ನಿರ್ದೇಶಕನಾಗಲು ಸುದೀರ್ಘ ಕಾಲದವರೆಗೆ ಕಾದವರು.
2009 ರಲ್ಲಿ ನ್ಯೂಯಾರ್ಕ್ ಫಿಲಂ ಅಕಾಡೆಮಿಯಲ್ಲಿ ಸಿನೆಮಾ ನಿರ್ದೇಶನದಲ್ಲಿ ಮಾಸ್ಟರ್ಸ್ ಪದವಿ ಪಡೆದು ಸಜ್ಜಾಗಿರುವ ಪನ್ನಾಗಾಭರಣ ಜಾಹಿರಾತು ಸಿನೆಮಾಗಳನ್ನು ನಿರ್ದೇಶಿಸಿ ತಮ್ಮ ತಂದೆಯವರ ಸಿನೆಮಾಗಳಿಗೆ ಸಹನಿರ್ದೇಶಕನಾಗಿಯೂ ದುಡಿದವರು. ಈಗ 'ಹ್ಯಾಪಿ ನ್ಯೂ ಇಯರ್' ಸಿನೆಮಾದ ಮೂಲಕ ಪೂರ್ಣಪ್ರಮಾಣದ ಸ್ವತಂತ್ರ ನಿರ್ದೇಶಕನಾಗಿ ಪಾದಾರ್ಪಣೆ ಮಾಡಲು ಮುಂದಾಗಿದ್ದಾರೆ.
ಬಿ ಸಿ ಪಾಟೀಲ್ ನಿರ್ಮಿಸುತ್ತಿರುವ ಈ ಸಿನೆಮಾ ಸೆಪ್ಟೆಂಬರ್ ನಿಂದ ಚಿತ್ರೀಕರಣಗೊಳ್ಳಲಿದೆ. ಉತ್ಸಾಹದಲ್ಲಿರುವ ಪನ್ನಗ ಹೇಳುವಂತೆ "ನನ್ನ ತಂದೆಯವರ ಮೂರನೇ ಸಹನಿರ್ದೇಶಕನಾಗಿ ದುಡಿದಿರುವ ನಾನು ಸಿನೆಮಾ ನಿರ್ದೇಶನದ ಎಲ್ಲ ಆಯಾಮಗಳನ್ನು ಪ್ರಯತ್ನಿಸಿದ್ದೇನೆ. ನನ್ನದೇ ಸಿನೆಮಾವನ್ನು ನಿರ್ದೇಶಿಸಲು ಸಾಕಷ್ಟು ಸಮಯ ತೆಗೆದುಕೊಂಡಿದ್ದೇನೆ. ಈಗ ಕಾದಿದ್ದು ಮುಗಿದಿದೆ" ಎನ್ನುತ್ತಾರೆ.
ಪನ್ನಗ ಅವರ ಮೊದಲ ಯೋಜನೆಯಲ್ಲಿ ಬಹುತಾರಾಗಣವಿದ್ದು, ಐದು ಜನ ಹೀರೋಗಳು ಮತ್ತು ಹೀರೋಯಿನ್ ಗಳು. ಸದ್ಯಕ್ಕೆ ನಟ ಧನಂಜಯ್ ಮತ್ತು ಶ್ರುತಿ ಹರಿಹರನ್ ಅವರನ್ನು ಕೇಳಿಕೊಂಡಿದ್ದು, ಉಳಿದ ತಾರಾಗಣದ ಆಯ್ಕೆಯಲ್ಲಿ ತೊಡಗಿದ್ದಾರೆ. ಮೊದಲನೆಯ ಸಿನೆಮಾದಲ್ಲಿ ಇಷ್ಟು ದೊಡ್ಡ ಹೊರೆ ಹೊತ್ತಿರುವುದೇಕೆ ಎಂದು ಕೇಳಿದರೆ "ನನಗೆ ಮೊದಲಿಂದಲೂ ಹಲವಾರು ಕಥೆಗಳು ಒಗ್ಗೂಡಿರುವ ಸ್ಕ್ರಿಪ್ಟ್ ಎಂದರೆ ಬಹಳ ಇಷ್ಟ. ವಿವಿಧ ಭಾಷೆಗಳಲ್ಲಿ ನನ್ನ ನೆಚ್ಚಿನ ನಿರ್ದೇಶಕರಿದ್ದಾರೆ ಮತ್ತು ಈ ಪ್ರಾಕಾರವನ್ನು ಬಳಸಿರುವ ಎಲ್ಲರ ಮೇಲು ನನಗೆ ಗೌರವವಿದೆ" ಎನ್ನುತ್ತಾರೆ.
ಇಂತಹ ಯೋಜನೆಯ ಬಗ್ಗೆ ನಿರ್ಮಾಪಕರನ್ನು ಒಪ್ಪಿಸಲು ಸುಲಭವಲ್ಲ ಎನ್ನುವ ಅವರು ಬಿ ಸಿ ಪಾಟೀಲ್ ಅವರನ್ನು ಭೇಟಿ ಮಾಡಿದ ಮೇಲೆ ಹಾದಿ ಸುಗಮವಾಗಿದ್ದು, ಈಗ ತಾರಾಗಣವನ್ನು ಆಯ್ಕೆ ಮಾಡಬೇಕೆನ್ನುತ್ತಾರೆ.
"ಅದೃಷ್ಟವಶಾತ್ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಸಿನೆಮಾಗಳ ಪ್ರಯೋಗ ಇತ್ತೀಚಿಗೆ ನಡೆಯುತ್ತಿದೆ. ಹಿರೋಗಳನ್ನಷ್ಟೇ ಅಲ್ಲದೆ ಒಳ್ಳೆಯ ಕಥೆಗಳು ಬೇಕೆನ್ನುವ ನಿರ್ಮಾಪಕರು ನಮ್ಮಲ್ಲೂ ಇದ್ದಾರೆ. ಬಹುತಾರಾಗಣದ ಭಾಗವಾಗಿ ಪ್ರಯೋಗ ನಡೆಸಲು ಉತ್ಸುಕರಾಗಿರುವ ನಟರೂ ಇದ್ದಾರೆ. ನಾನು ಸರಿಯಾದ ಸಮಯದಲ್ಲಿ ಇಲ್ಲಿದ್ದೇನೆ" ಎನ್ನುತ್ತಾರೆ ಪನ್ನಗ.
ಹೊಸ ವರ್ಷದ ದಿನ ನಡೆಯುವ ಕಥೆಗಳನ್ನು ನನ್ನ ಸಿನೆಮಾ ಬೆಸೆಯುವುದರಿಂದ 'ಹ್ಯಾಪಿ ನ್ಯೂ ಇಯರ್' ಎಂಬ ಹೆಸರು ಇಟ್ಟಿದ್ದೇನೆ ಎನ್ನುವ ಪನ್ನಗ "ನನ್ನ ಸಿನೆಮಾದಲ್ಲಿ ಐದು ಜೀವಂತ ಕಥೆಗಳಿವೆ" ಎನ್ನುತ್ತಾರೆ
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos