ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ 'ಕ್ರೇಜಿ ಬಾಯ್' ಸಿನೆಮಾದ ಮೂಲಕ ಪಾದಾರ್ಪಣೆ ಮಾಡುತ್ತಿರುವ ದಿಲೀಪ್ ಪ್ರಕಾಶ್, ಸ್ಟಾರ್ ಆಗಲಿರುವ ಮಾರ್ಗ ಸುಲಭವಾದದ್ದಲ್ಲ ಎಂದು ತಿಳಿದಿದ್ದಾರೆ. ನಿಜ ಜೀವನದ ಹೀರೊಗೆ ತನ್ನ ಆಯ್ಕೆಗಳಿರುತ್ತವೆ ಆದರೆ ತೆರೆಯ ಮೇಲಿನ ಹೀರೋಗಳಿಗೆ ಅದು ಕಷ್ಟ ಎಂದು ಕಡಿಮೆ ಸಮಯದಲ್ಲಿಯೇ ಅರಿತಿರುವ ದಿಲೀಪ್, ಮಹೇಶ್ ಬಾಬು ನಿರ್ದೇಶನದಲ್ಲಿ ನಟಿಸಿರುವ ಚಿತ್ರ ನಾಳೆ ಬಿಡುಗಡೆಯಾಗಲಿದೆ.
"ನಾನು ನಟನೆಯನ್ನು ನನ್ನ ವೃತ್ತಿಯಾಗಿ ಆಯ್ಕೆ ಮಾಡಿದ್ದೇನೆ ಮತ್ತು ಇಲ್ಲಿ ಹೊಂದಿಕೊಳ್ಳುತ್ತೇನೆ" ಎನ್ನುತ್ತಾರೆ 6 ಅಡಿ ಉದ್ದದ ನಟ.
ನಟನಾಗಿ ಹೊರಹೊಮ್ಮಿರುವ ಮೆಕ್ಯಾನಿಕಲ್ ಎಂಜಿನಿಯರ್ ದಿಲೀಪ್, ಮಾಲಾಶ್ರೀ ಅವರ 'ಮಹಾಕಾಳಿ' ಸಿನೆಮಾದಲ್ಲಿ ಸಣ್ಣ ಪಾತ್ರ ಮಾಡುವ ಮೂಲಕ ತಮ್ಮ ಸಿನೆಮಾ ವೃತ್ತಿಜೀವನ ಪ್ರಾರಂಭಿಸಿದವರು. ತಮ್ಮ ಆತ್ಮವಿಶ್ವಾಸವೇ ಅವರ ದೊಡ್ಡ ಶಕ್ತಿ ಎನ್ನುವ ಅವರು, ಸರಿಯಾದ ಸಮಯದಲ್ಲಿ ಸರಿಯಾದ ಜನರನ್ನು ಭೇಟಿ ಮಾಡುತ್ತಿದ್ದೇನೆ ಎಂದಿದ್ದಾರೆ.
"ನಾನು ಸಾಕಷ್ಟು ಸ್ಟಂಟ್ಸ್ ಮತ್ತು ಡ್ಯಾನ್ಸ್ ಮಾಡಿದ್ದೇನೆ. ಇದು ಹೊಸಬನಿಗೆ ಒಳ್ಳೆಯದು. ಮತ್ತೊಂದು ಪೂರಕ ಅಂಶ ಎಂದರೆ ಈ ಸಿನೆಮಾದಲ್ಲಿ ಸಾಕಷ್ಟು ಫೈಟ್ ಗಳಿವೆ" ಎನ್ನುತ್ತಾರೆ ದಿಲೀಪ್.
ತಾವು ನಟನಾಗುವುದಕ್ಕೆ ತಮ್ಮ ಪೋಷಕರ ಸಂಪೂರ್ಣ ಬೆಂಬಲ ಇದೆ ಎಂದು ತಿಳಿಸುವ ದಿಲೀಪ್ "ನಾನು ಐ ಎ ಎಸ್ ಅಧಿಕಾರಿ ಆಗಬೇಕು ಎಂಬುದು ನನ್ನ ಪೋಷಕರ ಆಸೆಯಾಗಿತ್ತು. ಆದರೆ ನಾನು ನಟನಾಗುವುದಕ್ಕೆ ಆಯ್ಕೆ ಮಾಡಿಕೊಂಡೆ ಮತ್ತು ಅದಕ್ಕೆ ಅವರು ಸಂಪೂರ್ಣ ಬೆಂಬಲ ನೀಡಿದರು" ಎಂದು ತಿಳಿಸುತ್ತಾರೆ ದಿಲೀಪ್.