ವಿವಾದಾತ್ಮಕ ಮತ್ತು ಅವಹೇಳನಕಾರಿ ಟ್ವೀಟ್ ಗಾಗಿ ಬಂಧಕ್ಕೊಳಗಾಗಿದ್ದ ಗಾಯಕ ಅಭಿಜಿತ್ 
ಸಿನಿಮಾ ಸುದ್ದಿ

ದೇಶಭಕ್ತನಾಗಿದ್ದಕ್ಕೆ ದೊಡ್ಡ ಬೆಲೆ ತೆತ್ತಬೇಕಾಯಿತು: ಬಾಲಿವುಡ್ ಗಾಯಕ ಅಭಿಜಿತ್

ಜುಲೈನಲ್ಲಿ ಬಂಧಿತನಾಗಿ ನಂತರ ಜಾಮೀನನ ಮೇಲೆ ಬಿಡುಗಡೆಯಾಗಿದ್ದ ಬಾಲಿವುಡ್ ಗಾಯಕ ಅಭಿಜಿತ್ ದೇಶಭಕ್ತನಾಗಿದ್ದಕ್ಕೆ ಹಿಂದಿ ಸಿನೆಮಾರಂಗದಲ್ಲಿ ದೊಡ್ಡ ಬೆಲೆ ತೆತ್ತಬೇಕಾಯಿತು ಎಂದು ಹೇಳಿದ್ದಾರೆ.

ಮುಂಬೈ: ಜುಲೈನಲ್ಲಿ ಬಂಧಿತನಾಗಿ ನಂತರ ಜಾಮೀನನ ಮೇಲೆ ಬಿಡುಗಡೆಯಾಗಿದ್ದ ಬಾಲಿವುಡ್ ಗಾಯಕ ಅಭಿಜಿತ್ ದೇಶಭಕ್ತನಾಗಿದ್ದಕ್ಕೆ ಹಿಂದಿ ಸಿನೆಮಾರಂಗದಲ್ಲಿ ದೊಡ್ಡ ಬೆಲೆ ತೆತ್ತಬೇಕಾಯಿತು ಎಂದು ಹೇಳಿದ್ದಾರೆ. 
ನೀವು ಬಂಧನಗೊಂಡದ್ದು ಏಕೆ ಎಂಬ ಪ್ರಶ್ನೆಗೆ ಟ್ವಿಟ್ಟರ್ ನಲ್ಲಿ ಉತ್ತರಿಸಿರುವ ಅವರು "ಬಹಳ ಹಿಂದೆ ಆದರೆ ನಾನು ಯಾರಿಂದಲೂ ಯಾವ ಬೆಂಬಲವು ಕೇಳಲಿಲ್ಲ, ಹಲವು ವರ್ಷಗಳಿಂದ ದೇಶಭಕ್ತನಾಗಿರುವುದಕ್ಕೆ ಬಾಲಿವುಡ್ ನಲ್ಲಿ ಬೆಲೆ ತೆತ್ತಬೇಕಾಗಿ ಬಂದಿದೆ" ಎಂದು ಟ್ವೀಟ್ ಮಾಡಿದ್ದಾರೆ. 
ಮೂಲಗಳ ಪ್ರಕಾರ ಪತ್ರಕರ್ತೆಯೊಬ್ಬರನ್ನು ಟ್ವಿಟ್ಟರ್ ನಲ್ಲಿ ಅವಹೇಳನ ಮಾಡಿದ್ದಕ್ಕೆ ಗಾಯಕ ಅಭಿಜಿತ್ ಭಟ್ಟಾಚಾರ್ಯ ಅವರನ್ನು ಜುಲೈ ನಲ್ಲಿ ಪೊಲೀಸರು ಬಂಧಿಸಿದ್ದರು. 
ಎಎಪಿ ಸದಸ್ಯರೊಬ್ಬರು ಈ ವಿಷಯವಾಗಿ ನೆನ್ನೆ ಟ್ವೀಟ್ ಮಾಡಿದ್ದು, ಈ ಸುದ್ದಿ ಕಾಳ್ಗಿಚ್ಚಿನಂತೆ ಹರಡಿದೆ. 
ಚೆನ್ನೈನಲ್ಲಿ ಸ್ವಾತಿ ಎಂಬ ಯುವತಿ ಕೊಲೆಯಾದಾಗ ಅಭಿಜಿತ್ ಅದಕ್ಕೆ ಕೋಮು ಬಣ್ಣ ನೀಡಿ ಅದನ್ನು ಲವ್ ಜಿಹಾದ್ ಎಂದು ಕರೆದಿದ್ದರು. ಇದನ್ನು ಪತ್ರಕರ್ತೆಯೊಬ್ಬರು ಪ್ರಶ್ನಿಸಿದ್ದಾಗ ಅವರ ವಿರುದ್ಧ ಅವಹೇಳನಕಾರಿ ಪ್ರತಿಕ್ರಿಯೆಯನ್ನು ಅಭಿಜಿತ್ ನೀಡಿದರು. ಇದು ಪೊಲೀಸ್ ಠಾಣೆಯ ಮೆಟ್ಟಿಲತ್ತಿ ಅಭಿಜಿತ್ ಅವರನ್ನು ಬಂಧಿಸಲಾಗಿತ್ತು ಎನ್ನಲಾಗಿದೆ. 
ಈ ಹಿಂದೆ ನಟ ಸಲ್ಮಾನ್ ಖಾನ್ ಅವರ ಹಿಟ್ ಅಂಡ್ ರನ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ ನಾಯಿಗಳು ರಸ್ತೆಯ ಮೇಲೆ ಮಲಗಿದರೆ ನಾಯಿಗಳ ರೀತಿಯಲ್ಲೇ ಸಾಯುತ್ತವೆ. ರಸ್ತೆಗಳು ಬಡವರ ಅಪ್ಪನದಲ್ಲ ಎಂದು ಬರೆದು ತೀವ್ರ ಟೀಕೆಗೆ ಗುರಿಯಾಗಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT