ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಹೊರಹೊಮ್ಮಿರುವ ರೂಪದರ್ಶಿ ನೇಹಾ ಶೆಟ್ಟಿ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಚಿತ್ರರಂಗಕ್ಕೆ ತಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿದ ಕನ್ನಡ ಸಿನೆ ರಸಿಕರಿಗೆ ಧನ್ಯವಾದ ಹೇಳಲು ಈ ಸಂದರ್ಭವನ್ನು ಬಳಸಿಕೊಂಡಿದ್ದಾರೆ.
'ಮುಂಗಾರು ಮಳೆ ೨' ಸಿನೆಮಾದಲ್ಲಿ ಮುಖ್ಯ ನಟಿಯಾಗಿ ಅವಕಾಶ ಪಡೆಯುವ ಮೂಲಕ ಈ ಸುಂದರಿಯ ಕನಸು ನನಸಾಗಿತ್ತು. ಶಶಾಂಕ್ ನಿರ್ದೇಶನದ ಈ ಸಿನೆಮಾದಲ್ಲಿ ಅವರು ಗಣೇಶ್ ಎದುರು ನಟಿಸಿ ಗಮನ ಸೆಳೆದಿದ್ದರು.
"ತುಂಬು ಹೃದಯದಿಂದ ನನ್ನನ್ನು ಒಪ್ಪಿಕೊಂಡ ಎಲ್ಲ ಜನರಿಗೂ ನಾನು ಆಭಾರಿಯಾಗಿದ್ದೇನೆ. ನಾನು ಇದನ್ನು ಇನ್ನು ಎತ್ತರಕ್ಕೆ ಕೊಂಡೊಯ್ಯಲು ಪ್ರಯತ್ನಿಸಿ, ಕನ್ನಡಚಿತ್ರರಂಗಕ್ಕೆ ಹೆಮ್ಮೆ ತರಲು ಪ್ರಯತ್ನಿಸುತ್ತೇನೆ" ಎಂದು ನಟಿ ಹೇಳಿದ್ದಾರೆ.
ತಮ್ಮ ಮುಂದಿನ ಚಿತ್ರವನ್ನು ಒಪಿಕೊಳ್ಳುವುದಕ್ಕೆ ಇನ್ನು ಕಾಯುತ್ತಿರುವ ನಟಿ ರ್ಯಾಪ್ ಸಂಗೀತಕಾರ ಚಂದನ್ ಶೆಟ್ಟಿ ಅವರ 'ಚಾಕೊಲೇಟ್ ಗರ್ಲ್' ಸಂಗೀತ ವಿಡಿಯೋದಲ್ಲಿ ಪಾದಾರ್ಪಣೆ ಮಾಡಲು ಮುಂದಾಗಿದ್ದಾರೆ.
ಈ ಮೊದಲಿಗೆ ಶೆಟ್ಟಿ ಇದಕ್ಕಾಗಿ ಶಾನ್ವಿ ಶ್ರೀವಾಸ್ತವ ಅವರನ್ನು ಕೇಳಿಕೊಂಡಿದ್ದರು, ಆದರೆ ಅದು ಕೂಡಿಬರದಿದ್ದರಿಂದ ಈಗ ನೇಹಾ ಅವರನ್ನು ಆಯ್ಕೆ ಮಾಡಿದ್ದಾರೆ.
ಈ ಹಿಂದೆ ಐಂದ್ರಿತಾ ರೈ ಅವರೊಂದಿಗೆ ನಿರ್ದೇಶಿಸಿದ್ದ '೩ ಪೆಗ್' ಸಂಗೀತ ವಿಡಿಯೋ ಉತ್ತಮ ಪ್ರತಿಕ್ರಿಯೆ ಗಳಿಸಿತ್ತು. ಈಗ ಡಿಸೆಂಬರ್ ೧೯-೨೦ ರ ನಡುವೆ ಬೆಂಗಳೂರಿನಲ್ಲಿ 'ಚಾಕಲೇಟ್ ಗರ್ಲ್' ಚಿತ್ರೀಕರಣ ನಡೆಯಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos