ಪ್ರಸಕ್ತ ವರ್ಷ ಹೆಚ್ಚು ಸುದ್ದಿ ಮಾಡಿದ ರಾಮಾ ರಾಮಾ ರೇ ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರಶಂಸೆ ವ್ಯಕ್ತವಾಗಿತ್ತು. ಇದೀಗ ಚಿತ್ರ ಮೂರು ಭಾಷೆಗಳಿಗೆ ರಿಮೇಕ್ ಆಗಲಿದೆ.
ಹೌದು ನವ ನಿರ್ದೇಶಕ ಸತ್ಯಪ್ರಕಾಶ್ ನಿರ್ದೇಶನದ ಚಿತ್ರಕ್ಕೆ ಬಹುಬೇಡಿಕೆ ಬಂದಿದೆ. ಹೆಬ್ಬುಲಿ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಉಮಾಪತಿ ಅವರು ಈಗಾಗಲೇ ರಾಮಾ ರಾಮಾ ರೇ ಚಿತ್ರವನ್ನು ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗೆ ರಿಮೇಕ್ ಮಾಡುವ ಕುರಿತು ನನ್ನ ಜತೆ ಮಾತುಕತೆ ನಡೆಸಿದ್ದು ಅಗ್ರಮೆಂಟ್ ಆಗಬೇಕಿದೆ ಎಂದು ಸತ್ಯಪ್ರಕಾಶ್ ತಿಳಿಸಿದ್ದಾರೆ.
ಇದನ್ನು ಹೊರತು ಪಡಿಸಿ ಹಿಂದಿಯಲ್ಲಿ ಚಿತ್ರವನ್ನು ರಿಮೇಕ್ ಮಾಡುವ ಕುರಿತ ಸುದ್ದಿಗಳು ಹರಿದಾಡುತ್ತಿದ್ದು ರಾಮಾ ರಾಮಾ ರೇ ಚಿತ್ರವನ್ನು ವಿತರಣೆ ಮಾಡಿದ್ದ ಸುಧೀರ್ ಎಂಬುವರು ಬಾಲಿವುಡ್ ನಲ್ಲಿ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರಂತೆ. ಒಂದು ವೇಳೆ ಹಿಂದಿಯಲ್ಲಿ ರಿಮೇಕ್ ಮಾಡಲು ಸಾಧ್ಯವಾಗದೇ ಇದ್ದರೇ ಡಬ್ಬಿಂಗ್ ಮಾಡುವ ಯೋಚನೆ ಮಾಡಿದ್ದಾರಂತೆ ಎಂದು ಸತ್ಯಪ್ರಕಾಶ್ ಹೇಳಿದ್ದಾರೆ.