ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ 
ಸಿನಿಮಾ ಸುದ್ದಿ

ಪದ್ಮಾವತಿ ಚಿತ್ರ ಸೆಟ್ ನಲ್ಲಿ ಅವಘಡ: ವರ್ಣ ಚಿತ್ರಕಾರ ಸಾವು

ಇತ್ತೀಚೆಗೆ ಕನ್ನಡದ ಮಾಸ್ತಿಗುಡಿ ಚಿತ್ರೀಕರಣದ ವೇಳೆ ಇಬ್ಬರು ಖಳನಟರು ಮೃತಪಟ್ಟಿರುವ ಘಟನೆ...

ನವದೆಹಲಿ: ಇತ್ತೀಚೆಗೆ ಕನ್ನಡದ ಮಾಸ್ತಿಗುಡಿ ಚಿತ್ರೀಕರಣದ ವೇಳೆ ಇಬ್ಬರು ಖಳನಟರು ಮೃತಪಟ್ಟಿರುವ ಘಟನೆ ನಡೆದಿತ್ತು. ಇದೀಗ ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯವರ ಪದ್ಮಾವತಿ ಚಿತ್ರದ ಚಿತ್ರೀಕರಣ ಸೆಟ್ ನಲ್ಲಿ ಕೂಡ ಅಂತಹದೇ ಅವಘಡ ಸಂಭವಿಸಿದೆ.
34 ವರ್ಷದ ವರ್ಣ ಚಿತ್ರಕಾರ ಮುಕೇಶ್ ದಾಕಿಯಾ ಚಿತ್ರಕ್ಕಾಗಿ ಸಮಾಧಿ ಕಟ್ಟುವ ಕೆಲಸದಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ 5 ಅಡಿ ಎತ್ತರದಿಂದ ಬಿದ್ದರು. ಆಗ ಅವರ ಬೆನ್ನು ಮತ್ತು ತಲೆಗೆ ಭಾರೀ ಏಟು ಬಿದ್ದಿತು. ಕೂಡಲೇ ಅವರನ್ನು ಕೋಕಿಲಾಬೆನ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ.
 ಆರೆ ಕಾಲೊನಿಯ ಮೊರಚ ಪಾಡಾದ ನಿವಾಸಿಯಾಗಿರುವ ಮುಕೇಶ್ ದಾಕಿಯಾ 5 ಅಡಿ ಎತ್ತರದಿಂದ ಬಿದ್ದಾಗ ತಲೆಗೆ ತೀವ್ರ ಏಟು ಬಿದ್ದಿದೆ. ಪೊಲೀಸರು ಆಕಸ್ಮಿಕ ಮರಣ ವರದಿಯನ್ನು ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿದಿದೆ.
ಸಮಾಧಿ ಕಟ್ಟುವ ಕೆಲಸ ಬಹುತೇಕ ಮುಗಿದಿತ್ತು. ಅಂತಿಮವಾಗಿ ಸಮಾಧಿಗೆ ಬಣ್ಣ ಬಳಿಯುವ ಕೆಲಸ ನಡೆಯುತ್ತಿತ್ತು ಎಂದು ಬನ್ಸಾಲಿ ಪ್ರೊಡಕ್ಷನ್ಸ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೋಭಾ ಸಂತ್ ತಿಳಿಸಿದ್ದಾರೆ. 
ನಾವು ಆಕಸ್ಮಿಕ ಅವಘಡದ ಕೇಸು ದಾಖಲಿಸಿಕೊಂಡಿದ್ದೇವೆ. ಅಷ್ಟು ಎತ್ತರದಿಂದ ಅವರು ಹೇಗೆ ಬಿದ್ದರು. ಈ ವಿಷಯದಲ್ಲಿ ಏನಾದರೂ ಬೇಜವಾಬ್ದಾರಿ ಮತ್ತು ಅಜಾಗರೂಕತೆ ತೋರಿದ್ದರೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಘಟನೆ ಬಗ್ಗೆ ಚಿತ್ರದಲ್ಲಿ ಪದ್ಮಾವತಿ ಪಾತ್ರದಲ್ಲಿ ನಟಿಸುತ್ತಿರುವ ನಟಿ ದೀಪಿಕಾ ಪಡುಕೋಣೆ ಸಂತಾಪ ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT