8ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಸಭಿಕರೊಂದಿಗೆ ಸಂವಾದ ನಡೆಸುತ್ತಿರುವ ನಟಿ ಸುಹಾಸಿನಿ. 
ಸಿನಿಮಾ ಸುದ್ದಿ

ನನ್ನ ಪತಿ ನಾನಿನ್ನೂ ಉತ್ತಮ ನಟಿಯೆಂದು ಪರಿಗಣಿಸಿಲ್ಲ: ಸುಹಾಸಿನಿ

ಅಮೃತ ವರ್ಷಿಣಿ, ಬಂಧನ, ಮುತ್ತಿನ ಹಾರ ಮೊದಲಾದ ಚಿತ್ರಗಳಲ್ಲಿ ಅದ್ಭುತ ಅಭಿನಯ ಮಾಡಿ ಕನ್ನಡ ಚಿತ್ರರಸಿಕರ ಮನಗೆದ್ದವರು...

ಅಮೃತ ವರ್ಷಿಣಿ, ಬಂಧನ, ಮುತ್ತಿನ ಹಾರ ಮೊದಲಾದ ಚಿತ್ರಗಳಲ್ಲಿ ಅದ್ಭುತ ಅಭಿನಯ ಮಾಡಿ ಕನ್ನಡ ಚಿತ್ರರಸಿಕರ ಮನಗೆದ್ದವರು ಸುಹಾಸಿನಿ ಮಣಿರತ್ನಂ. ಕನ್ನಡದವರೇನೋ ಅನ್ನುವಷ್ಟರ ಮಟ್ಟಿಗೆ ನಮ್ಮೊಳಗೆ ಅವರು ಬೆರೆತು ಹೋಗಿದ್ದಾರೆ. ಇವರ ಅಭಿನಯವನ್ನು ಇಷ್ಟಪಡದವರು ಬಹುಶಃ ಇರಲಿಕ್ಕಿಲ್ಲ.

ಆದರೆ ಸ್ವತಃ ಸುಹಾಸಿನಿಯ ಪತಿ ಚಿತ್ರ ನಿರ್ದೇಶಕ ಮಣಿರತ್ನಂ ಅವರೇ ತಮ್ಮ ಪತ್ನಿಯನ್ನು ಉತ್ತಮ ನಟಿ ಎಂದು ಮೆಚ್ಚಿಕೊಂಡಿಲ್ಲವಂತೆ. ಹಾಗಂತ ಸುಹಾಸಿನಿಯವರೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂವಾದದ ಸಂದರ್ಭದಲ್ಲಿ ಹೇಳಿದ್ದಾರೆ.ಕನ್ನಡದ ಹಿರಿಯ ನಟಿ ಜಯಮಾಲಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,'' ನಿಮ್ಮ ಚಿತ್ರದಲ್ಲಿ ನಿಮ್ಮ ಪತ್ನಿ ಸುಹಾಸಿನಿಯವರು ಯಾಕೆ ನಟಿಸಿಲ್ಲ ಅಂತ ಅನೇಕರು ಮಣಿರತ್ನಂ ಅವರನ್ನು ಪ್ರಶ್ನೆ ಮಾಡಿದ್ದಾರಂತೆ. ಅದಕ್ಕೆ ಅವರು ಉತ್ತರ ನೀಡಿಲ್ಲ. ನಯವಾಗಿ ಮರೆಸುತ್ತಾ ಬಂದಿದ್ದಾರೆ. ಅಂದರೆ ಅದರರ್ಥ ಅವರ ದೃಷ್ಟಿಯಲ್ಲಿ ನಾನು ಉತ್ತಮ ನಟಿಯಾಗಿಲ್ಲದಿರಬಹುದು. ಆದರೆ ನಾವಿಬ್ಬರೂ ಉತ್ತಮ ದಂಪತಿ, ನಮ್ಮ ಮಧ್ಯೆ ಹೊಂದಾಣಿಕೆ ಇದೆ. ಅವರ ಚಿತ್ರಗಳಿಗೆ ಸಂಭಾಷಣೆ ಬರೆಯುತ್ತೇನೆ. ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡುತ್ತೇವೆ'' ಎಂದು ಹೇಳಿದರು.
 
ಸುಹಾಸಿನಿಯವರು ಸುಮಾರು ಎರಡೂವರೆ ತಾಸು ಸಂವಾದ ನಡೆಸಿ ಮಹಿಳಾ ನಿರ್ದೇಶಕರ ಅವಶ್ಯಕತೆ, ನಟ-ನಟಿಯಾಗುವವರಿಗೆ ಇರಬೇಕಾದ ಬದ್ಧತೆ, ನಿಷ್ಠೆ, ರೋಲ್ ಮಾಡೆಲ್ ಆಕ್ಟರ್ ಹೀಗೆ ಹಲವು ವಿಚಾರಗಳನ್ನು ಹಂಚಿಕೊಂಡರು. ಸಿನಿಮಾ ಕ್ಷೇತ್ರಕ್ಕೆ ಬರಲು ಬಯಸುವವರು ಏನು ಮಾಡಬೇಕು? ಅಭಿನಯವೆಂದರೇನು? ಸಂಭಾಷಣೆಗೆ ಇರುವ ಮಹತ್ವವೇನು? ಎಂಬುದನ್ನೆಲ್ಲಾ ವಿವರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

SCROLL FOR NEXT