ದಿನಕರ್ ತೂಗುದೀಪ್, ಬುಲೆಟ್ ಪ್ರಕಾಶ್ 
ಸಿನಿಮಾ ಸುದ್ದಿ

ದಿನಕರ್ ತೂಗುದೀಪ್ ವಿರುದ್ಧದ ದೂರು ಹಿಂಪಡೆಯುತ್ತೇನೆ: ಬುಲೆಟ್ ಪ್ರಕಾಶ್

ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನಿರ್ದೇಶಕ ಹಾಗೂ ನಿರ್ಮಾಪಕ ದಿನಕರ್ ತೂಗುದೀಪ್ ಅವರ ವಿರುದ್ಧ ದಾಖಲಿಸಿದ್ದ ದೂರನ್ನು...

ಬೆಂಗಳೂರು: ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನಿರ್ದೇಶಕ ಹಾಗೂ ನಿರ್ಮಾಪಕ ದಿನಕರ್ ತೂಗುದೀಪ್ ಅವರ ವಿರುದ್ಧ ದಾಖಲಿಸಿದ್ದ ದೂರನ್ನು ಹಿಂಪಡೆಯುವುದಾಗಿ ಹಾಸ್ಯನಟ ಬುಲೆಟ್ ಪ್ರಕಾಶ್ ಗುರುವಾರ ಹೇಳಿದ್ದಾರೆ.
ನಿನ್ನೆ ರಾತ್ರಿ ದಿನಕರ್ ತೂಗುದೀಪ ಹಾಗೂ ಅವರ ಸಹಚರರು ಕೆಂಪಾಪುರ ಬಳಿಯ ರಾಜನ್ ಸ್ಟುಡಿಯೋ ಮುಂದೆ ಬಂದು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ನಿನ್ನನ್ನು ಜೀವಂತವಾಗಿರಲು ಬಿಡುವುದಿಲ್ಲ ಅಂತ ಪ್ರಾಣ ಬೆದರಿಕೆ ಹಾಕಿದ್ದರೆ ಎಂದು ಆರೋಪಿಸಿ ಬುಲೇಟ್ ಪ್ರಕಾಶ್ ಅಮೃತಹಳ್ಳಿಯ ಪೊಲೀಸ್ ಠಾಣೆಯಲ್ಲಿ ದಿನಕರ್ ಹಾಗೂ ಪಿಸ್ತಾ ಸೀನಾ ವಿರುದ್ಧ ಕೊಲೆ ಬೆದರಿಕೆ ದೂರು ದಾಖಲಿಸಿದ್ದರು,
ಇಂದು ಪೊಲೀಸ್ ಠಾಣೆಯಲ್ಲಿ ಬುಲೆಟ್ ಪ್ರಕಾಶ್ ಹಾಗೂ ದಿನಕರ್ ತೂಗುದೀಪ್ ನಡೆವು ಸಂಧಾನ ಸಭೆ ನಡೆಸಲಾಯಿತು.
ಸಂಧಾನ ಸಭೆ ಯಶಸ್ವಿಯಾಗಿದ್ದು, ಸಭೆಯ ಬಳಿಕ ಮಾತನಾಡಿದ ಬುಲೆಟ್ ಪ್ರಕಾಶ್, ನಮ್ಮ ಮಧ್ಯೆ ಕೆಲವು ಗೊಂದಲಗಳಿದ್ದವು. ಸಂಧಾನ ಸಭೆಯಲ್ಲಿ ಶೇ.95ರಷ್ಟು ಗೊಂದಲಗಳಿಗೆ ಪರಿಹಾರ ಸಿಕ್ಕಿದೆ. ಹೀಗಾಗಿ ಇಂದು ಅಥವಾ ನಾಳೆ ದೂರು ವಾಪಸ್ ಪಡೆಯುವುದಾಗಿ ತಿಳಿಸಿದ್ದಾರೆ.
ದುನಿಯಾ ವಿಜಯ್ ಅಭಿನಯದ ಮಾಸ್ತಿಗುಡಿ ಸಿನಿಮಾ ಸೆಟ್‍ನಲ್ಲಿ ದಿನಕರ್ ತೂಗುದೀಪ ಬುಲೆಟ್ ಪ್ರಕಾಶ್ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದರಂತೆ. ಈ ವಿಷಯ ತಿಳಿದ ಬುಲೆಟ್ ಪ್ರಕಾಶ್ ಫೋನ್ ಮಾಡಿ ಮಾತನಾಡಿದಾಗ ದಿನಕರ್ ಬಾಯಿಗೆ ಬಂದಂತೆ ಬುಲೆಟ್ ಪ್ರಕಾಶ್‍ಗೆ ಬೈದಿದ್ದಾರೆ.
ಅಲ್ಲದೇ ಸಿನಿಮಾವೊಂದಕ್ಕೆ ದರ್ಶನ್ ಡೇಟ್ ಪಡೆದಿದ್ದರಿಂದ ಆಕ್ರೋಶಗೊಂಡಿರುವ ದಿನಕರ್, ಬುಲೆಟ್ ಪ್ರಕಾಶ್ ಅದು ಹೇಗೆ ಸಿನಿಮಾ ಮಾಡುತ್ತಾನೆ ನೋಡುತ್ತಿನಿ ಅಂತೆಲ್ಲಾ ಕೆಟ್ಟದಾಗಿ ಮಾತನಾಡಿದ್ದಾರೆ. ನಂತರ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ದಿನಕರ್ ಬುಲೆಟ್ ಪ್ರಕಾಶ್ ಮನೆಯ ಬಳಿ ಬರುವುದಾಗಿ ತಿಳಿಸಿದರು. ಆದರೆ ಮನೆ ಬಳಿ ಬರಲು ಒಪ್ಪದ ಬುಲೆಟ್ ಪ್ರಕಾಶ್ ರಾಜನ್ ಸ್ಟುಡಿಯೋ ಬಳಿ ಬರಲು ತಿಳಿಸಿದ್ದರು. ಇಲ್ಲಿಗೆ ದಿನಕರ್ ಹಾಗೂ ಅವರ ಸಹಚರರು ಬುಲೆಟ್ ಪ್ರಕಾಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪ್ರಕಾಶ್ ಆರೋಪಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!