ನಟ ಶರಣ್ 
ಸಿನಿಮಾ ಸುದ್ದಿ

'ರಜನಿ ಮುರುಗನ್' ಕನ್ನಡ ರಿಮೇಕ್ ನಲ್ಲಿ ಶರಣ್

'ಅಧ್ಯಕ್ಷ' ರಿಮೇಕ್ ಕನ್ನಡ ಸಿನೆಮಾದಲ್ಲಿ ನಟಿಸಿ ಜನಪ್ರಿಯತೆಯ ಉತ್ತುಂಗಕ್ಕೇರಿದ ನಟ ಶರಣ್ ನಂತರ ಪೂರ್ಣ ಪ್ರಮಾಣದ ನಾಯಕ ನಟನಾಗಿ ಹೊರಹೊಮ್ಮಿದವರು

ಬೆಂಗಳೂರು: 'ಅಧ್ಯಕ್ಷ' ರಿಮೇಕ್ ಕನ್ನಡ ಸಿನೆಮಾದಲ್ಲಿ ನಟಿಸಿ ಜನಪ್ರಿಯತೆಯ ಉತ್ತುಂಗಕ್ಕೇರಿದ ನಟ ಶರಣ್ ನಂತರ ಪೂರ್ಣ ಪ್ರಮಾಣದ ನಾಯಕ ನಟನಾಗಿ ಹೊರಹೊಮ್ಮಿದವರು. ಈಗ ನಿರ್ಮಾಪಕ-ವಿತರಕ ರಾಮು ಶಿವಕಾರ್ತಿಕೇಯನ್ ಅವರ 'ರಜನಿ ಮುರುಗನ್' ಸಿನೆಮಾದ ರಿಮೇಕ್ ಚಿತ್ರವನ್ನು ನಿರ್ಮಿಸಲು ಮುಂದಾಗಿದ್ದು ಮುಖ್ಯ ಪಾತ್ರಕ್ಕೆ ಶರಣ ಆಯ್ಕೆಯಾಗಿದ್ದಾರೆ.

ರಾಮು ಎಂಟರ್ಪ್ರೈಸಸ್ ನಿಂದ ಇನ್ನೂ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲವಾದರೂ, ಮೂಲಗಳ ಪ್ರಕಾರ ರಿಮೇಕ್ ಹಕ್ಕುಗಳನ್ನು ಈಗಾಗಲೇ ಖರೀದಿಸಿದ್ದು, ಶರಣ್ ಕೂಡ ನಟಿಸಲು ಒಪ್ಪಿಗೆ ನೀಡಿದ್ದಾರೆ. ನಾಯಕ ನಟಿ ಮತ್ತು ಇತರ ತಾರಾವರ್ಗದ ಆಯ್ಕೆ ಪ್ರಗತಿಯಲ್ಲಿದ್ದು ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.

ಈ ಸುದ್ದಿಯನ್ನು ಧೃಢೀಕರಿಸಲು ಅಥವಾ ನಿರಾಕರಿಸಲು ಒಪ್ಪದ ಶರಣ್ "ನಿರ್ಮಾಪಕರು ನನ್ನ ಬಗ್ಗೆ ಆಸಕ್ತಿ ತಳೆದಿರುವುದಕ್ಕೆ ಸಂತಸವಾಗುತ್ತಿದೆ. ನಿರ್ಮಾಪಕರ ಅಧಿಕೃತ ಹೇಳಿಕೆಗೆ ಕಾಯುತ್ತಿದ್ದೇನೆ" ಎನ್ನುತ್ತಾರೆ.

ತಾವು ಅಭಿನಯಿಸುವ ಪಾತ್ರ ರಿಮೇಕ್ ಆಗಲೀ ಸ್ವಮೇಕ್ ಆಗಲೀ ಅದರ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ ಎನ್ನುವ ಶರಣ್ "ನಾನು ಎಲ್ಲ ಪಾತ್ರಕ್ಕೂ ಜೀವ ತುಂಬುತ್ತೇನೆ. ಕನ್ನಡ ಸಿನೆಮಾ ನೋಡುವವರಿಗೆ ಮನರಂಜನೆ ನೀಡುವುದಷ್ಟೇ ನನಗೆ ತಿಳಿದಿರುವುದು. ಶಿವಕಾರ್ತಿಕೇಯನ್ ಅವರ ಪಾತ್ರಗಳಿಗೆ ಕನ್ನಡದಲ್ಲಿ ನಾನು ನ್ಯಾಯ ನೀಡಬಹುದು ಎಂಬ ವಿಷಯವೇ ಖುಷಿ ನೀಡುತ್ತದೆ" ಎನ್ನುತ್ತಾರೆ.

ಶನಿವಾರ 'ಜೈ ಮಾರುತಿ ೮೦೦' ಸೆಟ್ ನಲ್ಲಿಯೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡ ಶರಣ್ "ಪ್ರತಿ ವರ್ಷ ನನ್ನ ಕುಟುಂಬದ ಜೊತೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದೆ. ಕಳೆದ ವರ್ಷ ಮೊದಲ ಬಾರಿಗೆ ನನ್ನ ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬ ಆಚರಿಸಿದೆ. ಈಗ ಚಿತ್ರೀಕರಣದ ಕೆಲಸಗಳಿಂದಾಗಿ ಸೆಟ್ ನಲ್ಲಿಯೇ ಆಚರಿಕೊಳ್ಳಬೇಕಾಯಿತು" ಎನ್ನುತ್ತಾರೆ.

ಹಾಗೆಯೇ 'ನಟರಾಜ ಸರ್ವಿಸ್' ಸಿನೆಮಾದ ಚಿತ್ರೀಕರಣದಲ್ಲೂ ಶರಣ್ ಬ್ಯುಸಿಯಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

SCROLL FOR NEXT