'ಪಾಪು' ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಮತ್ತು ಕೃತಿ ಕರಬಂಧ 
ಸಿನಿಮಾ ಸುದ್ದಿ

ನೈಜ ಪ್ರೇಮ ಕಥೆ ಆಧಾರಿತ ಚಿತ್ರ 'ಪಾಪು': ಮಹೇಂದರ್

ತಮ್ಮ ಸುಧೀರ್ಘ ವಿರಾಮವನ್ನು ಮುರಿದಿರುವ ನಿರ್ದೇಶಕ ಎಸ್ ಮಹೇಂದರ್ ಅವರು 'ಪಾಪು' ಚಿತ್ರದೊಂದಿಗೆ ಹಿಂದಿರುಗಿದ್ದಾರೆ. ತಾವು ನಿರ್ದೇಶಿಸಿರುವ ೩೬ ಚಿತ್ರಗಳಲ್ಲಿ ಈ ಚಿತ್ರ ಅತಿ

ಬೆಂಗಳೂರು: ತಮ್ಮ ಸುಧೀರ್ಘ ವಿರಾಮವನ್ನು ಮುರಿದಿರುವ ನಿರ್ದೇಶಕ ಎಸ್ ಮಹೇಂದರ್ ಅವರು 'ಪಾಪು' ಚಿತ್ರದೊಂದಿಗೆ ಹಿಂದಿರುಗಿದ್ದಾರೆ. ತಾವು ನಿರ್ದೇಶಿಸಿರುವ ೩೬ ಚಿತ್ರಗಳಲ್ಲಿ ಈ ಚಿತ್ರ ಅತಿ ಸೂಕ್ಷ್ಮವಾದದ್ದು ಎನ್ನುತ್ತಾರೆ. "೨೦೧೧ರಲ್ಲಿ ನಾನು ಕೊನೆಯ ಬಾರಿಗೆ 'ವೀರಬಾಹು' ನಿರ್ದೇಶಿಸಿದ್ದೆ. ಈಗ 'ಪಾಪು' ೫ ವರ್ಷಗಳ ನಂತರ ಬರುತ್ತಿದೆ" ಎಂದಿದ್ದಾರೆ.

ಶ್ರೀನಗರ ಕಿಟ್ಟಿ ಮತ್ತು ಕೃತಿ ಕರಬಂಧ ಮುಖ್ಯ ಪಾತ್ರಗಳಲ್ಲಿರುವ ಈ ಸಿನೆಮಾದ ಕೊನೆಯ ಹಂತದ ಚಿತ್ರೀಕರಣ ಈ ತಿಂಗಳ ೨೨ ರಿಂದ ಪ್ರಾರಂಭವಾಗಲಿದೆ. ಬೆಂಗಳೂರು ಮತ್ತು ಅಲೆಪ್ಪಿ ಯಲ್ಲಿ ಚಿತ್ರೀಕರಣ ನಡೆಯಲಿದ್ದು "ಈಗ ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಉಳಿದಿದ್ದು, ಈ ಹಂತದಲ್ಲಿ ಮುಗಿಯಲಿದೆ" ಎನ್ನುತ್ತಾರೆ ಮಹೇಂದರ್.

ಮೊದಲ ಬಾರಿಗೆ ಸಿನೆಮಾ ಬಗ್ಗೆ ಮಾಹಿತಿ ನೀಡಿದ ಮಹೇಂದರ್ ಇದು ನಿಜ ಪ್ರೇಮ ಕಥೆ ಆಧಾರಿತ ಎಂದಿದ್ದಾರೆ. "ಈ ಘಟನೆ ನನಗೆ ವಿಶೇಷ ಎನಿಸಿ ಅದರ ಸುತ್ತ ಸ್ಕ್ರಿಪ್ಟ್ ಹೆಣೆದೆ. ಈಗ ನೈಜ ಘಟನೆಯನ್ನು ತೆರೆ ಮೇಲೆ ತರುತ್ತಿದ್ದೇನೆ" ಎಂದಿದ್ದಾರೆ.

ಬೆಂಗಳೂರು, ಊಟಿ ಮತ್ತು ಕೇರಳದಲ್ಲಿ ನಡೆಯುವ ಈ ಚಿತ್ರಕಥೆಯಲ್ಲಿ ಸುಹಾಸಿನಿ, ಶರತ್ ಬಾಬು, ರಂಘಾಯಣ ರಘು ಮತ್ತು ನಾಣಿ ಕೂಡ ನಟಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT