ನಟಿ ಲೀಲಾವತಿ (ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

ಹಿರಿಯ ನಟಿ ಲೀಲಾವತಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಅನಾರೋಗ್ಯದ ನಿಮಿತ್ತ ಹಿರಿಯ ನಟಿ ಲೀಲಾವತಿ ಅವರು ಆಸ್ಪತ್ರೆಗೆ ದಾಖಲಾಗಿದ್ದು, ನಗರದ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ...

ಬೆಂಗಳೂರು: ಅನಾರೋಗ್ಯದ ನಿಮಿತ್ತ ಹಿರಿಯ ನಟಿ ಲೀಲಾವತಿ ಅವರು ಆಸ್ಪತ್ರೆಗೆ ದಾಖಲಾಗಿದ್ದು, ನಗರದ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಅನಾರೋಗ್ಯದ ನಿಮಿತ್ತ ಲೀಲಾವತಿ ಅವರು ತೆಗೆದುಕೊಳ್ಳುತ್ತಿದ್ದ ಔಷಧಿಯಿಂದಾಗಿ ಅವರ ಆರೋಗ್ಯ ಏರುಪೇರಾಗಿದ್ದು, ಈ ಹಿನ್ನಲೆಯಲ್ಲಿ ಅವರನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ  ಎಂದು ಹೇಳಾಲಾಗುತ್ತಿದೆ. ನೆಲಮಂಗಲದ ಸೋಲದೇವನಹಳ್ಳಿಯಲ್ಲಿರುವ ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಲೀಲಾವತಿ ಅವರು ಸಾಕಿದ್ದ ನಾಯಿ ಅವರನ್ನು ಹಿಡಿದು ಎಳೆದಿದೆ. ಈ ವೇಳೆ ಅವರು  ಆಯತಪ್ಪಿ ಬಿದ್ದಿದ್ದು, ಇದರ ನೋವು ನಿವಾರಣೆಗಾಗಿ ಮನೆಯಲ್ಲಿಯೇ ಒಂದುಷ್ಟು ಮಾತ್ರೆಗಳನ್ನು ಸೇವಿಸುತ್ತಿದ್ದರು.

ಆದರೆ ಈ ಮಾತ್ರೆಗಳಿಂದಾಗಿ ಅವರಿಗೆ ಅಲರ್ಜಿ ಶುರುವಾಗಿದ್ದು, ಇದರಿಂದ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಲೀಲಾವತಿ ಅವರು ಪುತ್ರ ನಟ ವಿನೋದ್ ರಾಜ್ ಹೇಳಿದ್ದಾರೆ. ಪ್ರಸ್ತುತ ಎಂಎಸ್  ರಾಮಯ್ಯ ಆಸ್ಪತ್ರೆಯಲ್ಲಿ ಲೀಲಾವತಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಇಂದು ಸಂಜೆಯವರೆಗೂ ಅವರ ಮೇಲೆ ನೀಗಾವಹಿಸಲಾಗಿದೆ. ಬಳಿಕ ಅವರ ಆರೋಗ್ಯ ಪರಿಸ್ಥಿತಿ ನೋಡಿ ಮನೆಗೆ ಕಳುಹಿಸುವ  ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT