ಸಿನಿಮಾ ಸುದ್ದಿ

'ವಂಗವೀಟಿ' ನಂತರ ತೆಲುಗು ಚಿತ್ರರಂಗಕ್ಕೆ ಗುಡ್ ಬೈ ಹೇಳಲಿರುವ ಆರ್ ಜಿ ವಿ

Guruprasad Narayana

ಚೆನ್ನೈ: ತಮ್ಮ ಮುಂದಿನ ಕ್ರೈಂ ಚಿತ್ರ 'ವಂಗವೀಟಿ' ನಂತರ ತೆಲುಗು ಚಿತ್ರರಂಗಕ್ಕೆ ವಿದಾಯ ಹೇಳುವುದಾಗಿ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಘೋಷಿಸಿದ್ದಾರೆ. ಈ ಸಿನೆಮಾದ ಕಥೆ ವಿಜಯವಾಡದಲ್ಲಿ ೧೯೮೦ರ ಸಮಯದಲ್ಲಿ ಉದ್ಭವಿಸಿದ ರೌಡಿಸಂ ಕುರಿತು.

"'ವಂಗವೀಟಿ' ಕಥೆ ಎಷ್ಟು ನೈಜತೆಯಿಂದ ಕೂಡಿದೆ ಮತ್ತು ರೋಚಕವಾಗಿದೆ ಎಂದರೆ, ತೆಲುಗಿನಲ್ಲಿ ಸಿನೆಮಾ ಮಾಡುವುದಕ್ಕೆ ಇದಕ್ಕಿಂತಲೂ ಅತ್ಯುತ್ತಮ ಕಥೆಯನ್ನು ನನಗೆ ಚಿಂತಿಸಲು ಸಾಧ್ಯವಿಲ್ಲ. ಈ ಅದ್ಭುತ ಸಿನೆಮಾದಿಂದಲೇ ನನ್ನ ತೆಲುಗು ಚಿತ್ರರಂಗದ ವೃತ್ತಿಜೀವನ ಮುಗಿಸಬೇಕೆಂದುಕೊಡಿದ್ದೀನಿ. ಆದುದರಿಂದ ತೆಲುಗಿನಿಅಲ್ಲಿ 'ವಂಗವೀಟಿ' ನನ್ನ ಕೊನೆಯ ಚಿತ್ರವಾಗಲಿದೆ" ಎಂದು ಆರ್ ಜಿ ವಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಡದ ರೌಡಿಸಂ ಸುತ್ತ ಸುತ್ತುವ ಸಿನೆಮಾ ಕಥೆ, ಚಲಸಾನಿ ವೆಂಕಟರತ್ನಂನನ್ನು ವಂಗವೀಟಿ ರಾಧ ಕೊಲ್ಲುವುದರೊಂದಿಗೆ ಪ್ರಾರಂಭವಾಗಿ, ವಂಗವೀಟಿ ರಂಗನ ಸಾವಿನೊಂದಿಗೆ ಹೇಗೆ ಎಲ್ಲ ಕೊನೆಯಾಗುತ್ತದೆ ಎಂಬುದರಿಂದ ಸಿನೆಮಾ ಅಂತ್ಯಗೊಳ್ಳುತ್ತದೆ. ವಿಜಯವಾಡದಲ್ಲಿ ತಾವು ಬೆಳೆಯುತ್ತಿದ್ದ ಸಂದರ್ಭದಲ್ಲಿ ಅವರು ಅನುಭವವನ್ನೇ ಕಥೆಯ ಹೆಚ್ಚಿನ ಭಾಗವಾಗಿ ಸೇರಿಸಿಕೊಂಡಿದ್ದಾರಂತೆ.

SCROLL FOR NEXT