ಸಂಚಾರಿ ವಿಜಯ್ ಹಾಗೂ ಲಕ್ಷ್ಮಿಗೋಪಾಲಸ್ವಾಮಿ
ಬೆಂಗಳೂರು: 2014-15ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಶುಕ್ರವಾರ ಪ್ರಕಟವಾಗಿದ್ದು, 'ನಾನು ಅವನಲ್ಲ ಅವಳು' ಚಿತ್ರದಲ್ಲಿನ ಅಭಿನಯಕ್ಕಾಗಿ ಸಂಚಾರಿ ವಿಜಯ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಹಾಗೂ 'ವಿದಾಯ' ಚಿತ್ರದಲ್ಲಿನ ಅಭಿನಯಕ್ಕಾಗಿ ಲಕ್ಷ್ಮಿಗೋಪಾಲಸ್ವಾಮಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಗಿದೆ.
ಪ್ರೊ.ಬರಗೂರು ರಾಮಚಂದ್ರಪ್ಪ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ, ನಟ, ನಿರ್ಮಾಪಕ ಬಸಂತಕುಮಾರ್ ಪಾಟೀಲ್ ಅವರಿಗೆ ಡಾ.ರಾಜ್ ಕುಮಾರ್ ಪ್ರಶಸ್ತಿ ಹಾಗೂ ಸುರೇಶ್ ಅರಸ್ ಅವರಿಗೆ ಡಾ.ವಿಷ್ಣುವರ್ಧನ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪ್ರಥಮ ಅತ್ಯುತ್ತಮ ಚಿತ್ರ - ಹರಿವು
ಎರಡನೇ ಅತ್ಯುತ್ತಮ ಚಿತ್ರ - ಅಭಿಮನ್ಯು
ಮೂರನೇ ಅತ್ಯುತ್ತಮ ಚಿತ್ರ - ಹಗ್ಗದ ಕೊನೆ
ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ - ಬ್ರಹ್ಮಶ್ರಿ ನಾರಾಯಣ ಗುರುಸ್ವಾಮಿ(ತುಳು)
ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ - ಗಜಕೇಸರಿ
ಅತ್ಯುತ್ತಮ ಮಕ್ಕಳ ಚಿತ್ರ - ಬಾನಾಡಿ
ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ- ಉಳಿದವರು ಕಂಡಂತೆ
ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ - ವಿಷದ ಮಳೆ
ಅತ್ಯುತ್ತಮ ಪೋಷಕ ನಟ - ಅರುಣ್ ದೇವಸ್ಯ
ಅತ್ಯುತ್ತಮ ಪೋಷಕ ನಟಿ - ಬಿ.ಜಯಶ್ರೀ
ಅತ್ಯುತ್ತಮ ಕಥೆ - ಲಿವಿಂಗ್ ಸ್ಮೈಲ್ ವಿದ್ಯಾ, ನಾನು ಅವನಲ್ಲ ಅವಳು
ಅತ್ಯುತ್ತಮ ಚಿತ್ರಕತೆ- ಪಿ.ಶೇಷಾದ್ರಿ, ವಿದಾಯ
ಅತ್ಯುತ್ತಮ ಸಂಭಾಷಣೆ - ಬಿ.ಎಲ್.ವೇಣು, ತಿಪ್ಪಜ್ಜಿ ಸರ್ಕಲ್
ಅತ್ಯುತ್ತಮ ಛಾಯಾಗ್ರಹಣ - ಸತ್ಯ ಹೆಗಡೆ, ರಾಟೆ
ಅತ್ಯುತ್ತಮ ಸಂಗೀತ ನಿರ್ದೇಶ - ಬಿ.ಅಜನೀಶ್ ಲೋಕನಾಥ್
ಅತ್ಯುತ್ತಮ ಸಂಕಲನ - ಶ್ರೀಕಾಂತ್, ಉಗ್ರಂ
ಅತ್ಯುತ್ತಮ ಬಾಲನ ನಟ - ಮಾಸ್ಟರ್ ಸ್ನೇಹಿತ, ಸಚಿನ್ ತೆಂಡೂಲ್ಕರ್ ಅಲ್ಲ
ಅತ್ಯುತ್ತಮ ಬಾಲ ನಟಿ - ಲಹರಿ, ಆಟ- ಪಾಠ
ಅತ್ಯುತ್ತಮ ಕಲಾ ನಿರ್ದೇಶನ - ಚಂದ್ರಕಾಂತ್, 143- ನೂರಾನಲವತ್ಮೂರು
ಅತ್ಯುತ್ತಮ ಗೀತ ರಚನೆ - ಹುಲಿಕುಂಟೆ ಮೂರ್ತಿ, ಕೌದಿ
ಅತ್ಯುತ್ತಮ ಹಿನ್ನೆಲೆ ಗಾಯಕ - ಚಿಂತನ್, ಗಜಕೇಸರಿ
ಅತ್ಯುತ್ತಮ ಗಾಯಕಿ - ವಿದ್ಯಾ ಮೋಹನ್, ಸಚಿನ್ ತೆಂಡೂಲ್ಕರ್ ಅಲ್ಲ
ತೀರ್ಪುಗಾರರ ವಿಶೇಷ ಪ್ರಶಸ್ತಿ - ಜ್ಯೋತಿರಾಜ್, ವಿಭಾಗ - ಸಾಹಸ, ಚಿತ್ರ ಜ್ಯೋತಿ ರಾಜ್ ಅಲಿಯಾಸ್ ಕೋತಿರಾಜ್
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos