ಬೆಂಗಳೂರು: ನಾಳೆ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬವಾಗಿದ್ದು ತಮ್ಮ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ಸಾವಿರಾರು ಅಭಿಮಾನಿಗಳ ಜೊತೆಗೆ ಆಚರಿಸಿಕೊಳ್ಳಲಿದ್ದಾರೆ.
ದರ್ಶನ್ ಅವರ ಅಭಿಮಾನಿಗಳು ಈ ದಿನಕ್ಕಾಗಿ ಅವರ ನಿವಾಸದ ಸುತ್ತಮುತ್ತ ೩೦೦ ಭಿತ್ತಿಚಿತ್ರಗಳನ್ನು ಹಾಕಲಿದ್ದು, ೩೯ ಕೆ ಜಿ ಕೇಕ್ ಕೂಡ ಸಿದ್ಧವಾಗಲಿದೆಯಂತೆ.
ಈಗಾಗಲೇ ಸಂಭ್ರಮಾಚರಣೆಗಳು ಅಭಿಮಾನಿಗಳ ನಡುವೆ ರಾಜ್ಯದ ಹಲವು ಭಾಗಗಳಲ್ಲಿ ನಡೆದಿದ್ದು, ಹಾಸನ, ನೆಲಮಂಗಲ, ತುಮಕೂರು, ತಿಪಟೂರು ಮತ್ತಿತರ ಭಾಗದ ನಟನ ಅಭಿಮಾನಿಗಳ ಸಂಘ ಅನಾಥಾಶ್ರಮಗಳಿಗೆ ಭೇಟಿ ನೀಡಿ ಧರ್ಮಾರ್ಥ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆಯಂತೆ.
ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘದ ಅಡಿ ೨೯ ನೊಂದಿತ ಅಭಿಮಾನಿ ಸಂಘಗಳಿದ್ದು, ಸಿಮಾರು ೨೦೦೦ಕ್ಕೂ ಹೆಚ್ಚು ಅನಧಿಕೃತ ಅಭಿಮಾನಿ ಸಂಘಗಳಿವೆ ಎಂದು ತಿಳಿಸುತ್ತಾರೆ ಅಭಿಮಾನಿ ಸಂಘದ ಸದಸ್ಯರಲ್ಲಿ ಒಬ್ಬರಾದ ಪುನೀತ್.
ಈ ಅಭಿಮಾನಿ ಸಂಘಟನೆಗಳು ನಾಳೆ ಕೂಡ ರಾಜ್ಯದಾದ್ಯಂದ ವಿವಿಧ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲಿವೆಯಂತೆ.