ಸಿನಿಮಾ ಸುದ್ದಿ

ಅಮೆರಿಕಾಗಿಂತಲೂ ಒಂದು ವಾರ ಮುಂಚೆ ಭಾರತದಲ್ಲಿ 'ದ ಜಂಗಲ್ ಬುಕ್' ಬಿಡುಗಡೆ

Guruprasad Narayana

ನವದೆಹಲಿ: ೧೨ ವರ್ಷದ ಭಾರತ ಮೂಲದ ಅಮೇರಿಕಾ ಬಾಲಕ ನೀಲ್ ಸೇಥಿ, ಮೌಗ್ಲಿ ಪಾತ್ರವಹಿಸಿರುವ ಡಿಸ್ನಿ ಸಂಸ್ಥೆಯ 'ದ ಜಂಗಲ್ ಬುಕ್' ಸಿನೆಮಾ ಭಾರದಲ್ಲಿ ಏಪ್ರಿಲ್ ೮ ರಂದು ಬಿಡುಗಡೆಯಾಗಲಿದ್ದು, ಅಮೆರಿಕಾಗಿಂತಲೂ ಒಂದು ವಾರ ಮುಂಚಿತವಾಗಿಯೇ ಪ್ರೇಕ್ಷಕರು ಇಲ್ಲಿ ನೋಡಬಹುದಾಗಿದೆ.

"ಡಿಸ್ನಿಯವರ 'ದ ಜಂಗಲ್ ಬುಕ್' ಅಮೆರಿಕಾದ ಬಿಡುಗಡೆಗಿಂತಲೂ ಒಂದು ವಾರ ಮುಂಚಿತವಾಗಿ ಭಾರತದ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಧೃಢೀಕರಿಸಲು ಸಂತಸವಾಗುತ್ತಿದೆ. ಭಾರತದ 'ದ ಜಂಗಲ್ ಬುಕ್' ಅಭಿಮಾನಿಗಳಿಗೆ ಇನ್ನೂ ಹೆಚ್ಚಿನ ಆಶ್ಚರ್ಯಕರ ಮಾಹಿತಿಗಳಿವೆ" ಎಂದು ಡಿಸ್ನಿ ಇಂಡಿಯಾ ಸ್ಟುಡಿಯೋದ ಉಪಾಧ್ಯಕ್ಷೆ ಅಮೃತಾ ಪಾಂಡೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

'ಐರನ್ ಮ್ಯಾನ್' ಖ್ಯಾತಿಯ ಜಾನ್ ಫರ್ವೇರಾ ಈ ಸಿನೆಮಾ ನಿರ್ದೇಶಿಸಿದ್ದು, ಖ್ಯಾತ ನಟರಾದ ಬೆನ್ ಕಿನ್ಸ್ಲಿ, ಬಿಲ್ ಮುರ್ರೆ, ಸ್ಕಾರ್ಲೆಟ್ ಜೋಹ್ಯಾನ್ಸನ್, ಐಡ್ರಿಸ್ ಎಲ್ಬಾ ಮತ್ತು ಕ್ರಿಸ್ಟಫರ್ ವಾಲ್ಕೆನ್ ಪಾತ್ರಗಳಿಗೆ ಕಂಠದಾನ ಮಾಡಿದ್ದಾರೆ.

ಖ್ಯಾತ ಲೇಖಕ ರಡ್ಯಾರ್ಡ್ ಕಿಪ್ಲಿಂಗ್ ಅವರ 'ದ ಜಂಗಲ್ ಬುಕ್' ಕಥಾ ಪುಸ್ತಕದ ಆಧಾರಿತವಾಗಿ ಮೂಡಿ ಬಂದಿರುವ ಈ ಚಿತ್ರ ಇದೆ.

SCROLL FOR NEXT