ಕರಾಚಿ: ಪಾಕಿಸ್ತಾನದ ಗೌರ್ ಮತ್ತು ಫರ್ಜಾದ್ ನಬಿ ಮಾಧ್ಯಮಗಳನ್ನು ಅಣಕಿಸುವ ಚಿತ್ರವನ್ನು ನಿರ್ದೇಶಿಸುತ್ತಿದ್ದು ಖ್ಯಾತ ಬಾಲಿವುಡ್ ನಟ ನಾಸಿರುದ್ದೀನ್ ಷಾ ನಟಿಸುತ್ತಿದ್ದಾರೆ.
ಮುಂಬರುವ ಪಾಕಿಸ್ತಾನಿ ಚಿತ್ರ ರೇಟಿಂಗ್ ಹಿಂದೆ ಓಡುತ್ತಿರುವ ಮಾಧ್ಯಮಗಳನ್ನು ಅಣಕಿಸುವ ಕಥಾವಸ್ತುವಾಗಿದ್ದು, ಇದರಲ್ಲಿ ಬಾಲಿವುಡ್ ನಟ ನಾಸಿರುದ್ದೀನ್ ಷಾ ನಟಿಸುತ್ತಿದ್ದಾರೆ ಎಂದು ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. "ಜೀವನ್ ಹಾಥಿ" ಚಿನಿಮಾ ಶಿರ್ಷಿಕೆಯಾಗಿದ್ದು ಈ ಹಿಂದಿನ ಚಿತ್ರ "ಜಿಂದಾ ಭಾಗ್"ನಂತೆ ಹೊಸ ಪ್ರತಿಭೆಗಳಿಗೆ ಮಾತ್ರ ಅವಕಾಶ ನೀಡಲಾಗಿಲ್ಲ. ಬದಲಾಗಿ ಭಾರತ-ಪಾಕಿಸ್ತಾನದ ಖ್ಯಾತ ನಟರೂ ಜೀವನ್ ಹಾಥಿಯಲ್ಲಿ ನಟಿಸಿದ್ದಾರೆ.
ಚಿತ್ರದಲ್ಲಿರುವ ಒಟ್ಟು 12 ಕಲಾವಿದರ ಪೈಕಿ 6 ಕಲಾವಿದರು ಭಾರತದವರಾಗಿದ್ದು ಇನ್ನು 6 ಕಲಾವಿದರು ಪಾಕಿಸ್ತಾನದವರಾಗಿದ್ದಾರೆ.