ಜಗ್ಗೇಶ್ ಮತ್ತು ನಿರ್ಮಾಪಕ ರವಿಚಂದ್ 
ಸಿನಿಮಾ ಸುದ್ದಿ

ನವರಸ ನಾಯಕ ನಟ ಜಗ್ಗೇಶ್‌ಗೆ ಮಿತ್ರವಿಯೋಗ

ನವರಸ ನಾಯಕ ಜಗ್ಗೇಶ್ ಬಾಲ್ಯ ಸ್ನೇಹಿತನನ್ನು ಕಳೆದುಕೊಂಡಿದ್ದಾರೆ. 'ನಿಜ' ಚಿತ್ರದ ನಿರ್ಮಾಪಕ ರವಿಚಂದ್ ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ...

ಬೆಂಗಳೂರು: ನವರಸ ನಾಯಕ ಜಗ್ಗೇಶ್ ಬಾಲ್ಯ ಸ್ನೇಹಿತನನ್ನು ಕಳೆದುಕೊಂಡಿದ್ದಾರೆ. 'ನಿಜ' ಚಿತ್ರದ ನಿರ್ಮಾಪಕ ರವಿಚಂದ್ ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ.

ಜಗ್ಗೇಶ್ ಮತ್ತು ರವಿಚಂದ್ ಬಾಲ್ಯ ಸ್ನೇಹಿತರು. ಮೊನ್ನೆ ಅದ್ಯಾಕೋ ಜಗ್ಗೇಶ್ ಗೆ ತನ್ನ ಈ ಗೆಳೆಯನನ್ನು ಭೇಟಿಯಾಗುವ ಮನಸ್ಸಾಯ್ತಂತೆ.  ಹೀಗಾಗಿ ಮೊನ್ನೆ ಗೆಳೆಯನ ಮನೆಗೆ ಹೋಗಿ ಅವರನ್ನು ಮಾತನಾಡಿಸಿಕೊಂಡು ಬಂದಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ರವಿಚಂದ್ ಸೋಮವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ .

ವಾಪಸ್ ಬರುವಾಗ ಮನೆವರೆಗೆ ಬಂದ ಜಗ್ಗೇಶ್‌ಗೆ ವಾರಿಯರ್ ಬೇಕರಿಯಿಂದ ಬಿಸ್ಕತ್ ಕೊಡಿಸುವಂತೆ ರವಿಚಂದ್ ತನ್ನ ತಾಯಿಗೆ ಹೇಳಿದರಂತೆ. ಅದೇ ಕೊನೆಯ ಭೇಟಿಯಾಯಿತು ಎಂದು ದುಃಖದಿಂದ ಕಣ್ಣೀರಿಟ್ಟಿದ್ದಾರೆ ಜಗ್ಗೇಶ್. ಮೊನ್ನೆ ಭೇಟಿಯಾದ ಗೆಳೆಯ ಇಂದು ತಮ್ಮ ಪಾಲಿಗಿಲ್ಲ ಎಂದು ದುಃಖಿತರಾಗಿರುವ ಜಗ್ಗೇಶ್ ರವಿಚಂದ್ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಸಮ್ಮತಿ, ಲೀಟರ್‌ಗೆ 8 ರೂ. ಏರಿಕೆ?

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ