ನಟ ಪವನ್ ಕಲ್ಯಾಣ್ (ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

ಸಂಕಷ್ಟದಲ್ಲಿ ನಾನ್ನಕು ಪ್ರೇಮತೋ: ನಿರ್ಮಾಪಕನ ವಿರುದ್ಧ ಪವನ್ ಕಲ್ಯಾಣ್ ದೂರು

ಟಾಲಿವುಡ್ ನಟ ಜ್ಯೂನಿಯರ್ ಎನ್'ಟಿಆರ್ ಅವರ 25ನೇ ಚಿತ್ರವಾಗಿರುವ ನಾನ್ನಕು ಪ್ರೇಮತೊ ಚಿತ್ರ ಇದೀಗ ಸಂಕಷ್ಟಕ್ಕೆ ಸಿಲುಕಿದ್ದು, ನಟ ಪವನ್ ಕಲ್ಯಾಣ್ ಅವರು ಚಿತ್ರದ ನಿರ್ಮಾಪನ ವಿರುದ್ಧ ದೂರು ದಾಖಲಿಸಿದ್ದಾರೆ...

ಹೈದರಾಬಾದ್: ಟಾಲಿವುಡ್ ನಟ ಜ್ಯೂನಿಯರ್ ಎನ್'ಟಿಆರ್ ಅವರ 25ನೇ ಚಿತ್ರವಾಗಿರುವ ನಾನ್ನಕು ಪ್ರೇಮತೊ ಚಿತ್ರ ಇದೀಗ ಸಂಕಷ್ಟಕ್ಕೆ ಸಿಲುಕಿದ್ದು, ನಟ ಪವನ್ ಕಲ್ಯಾಣ್ ಅವರು ಚಿತ್ರದ ನಿರ್ಮಾಪನ ವಿರುದ್ಧ ದೂರು ದಾಖಲಿಸಿದ್ದಾರೆ.

ನಾನ್ನಕು ಪ್ರೇಮತೋ ಚಿತ್ರದ ನಿರ್ಮಾಪಕ ಬಿವಿಎಸ್ಎನ್ ಪ್ರಸಾದ್ ವಿರುದ್ಧ ಪವನ್ ಕಲ್ಯಾಣ್ ಅವರು ಪ್ರಕರಣ ದಾಖಲಿಸಿದ್ದಾರೆಂದು ಹೇಳಲಾಗುತ್ತಿದೆ. ದೂರಿಗೆ ಇಬ್ಬರ ನಡುವಿನ ಆರ್ಥಿಕ ವ್ಯವಹಾರವೇ ಕಾರಣ ಎಂದು ತಿಳಿದುಬಂದಿದೆ.

ಈ ಹಿಂದೆ ಪ್ರಸಾದ್ ನಿರ್ಮಾಣದ ಅತ್ತಾರಿಂಟಿಕಿ ದಾರೇದಿ ಚಿತ್ರದಲ್ಲಿ ನಟಿಸಿದ್ದ ಪವನ್ ಕಲ್ಯಾಣ್ ಅವರಿಗೆ ಸಂಪೂರ್ಣ ಸಂಭಾವನೆಯನ್ನು ನಿರ್ಮಾಪಕ ನೀಡಿಲ್ಲ ಎಂದು ಹೇಳಲಾಗುತ್ತಿತ್ತು. ಇದೀಗ ಸಂಭಾವನೆ ಕುರಿತಂತೆ ಪವನ್ ಕಲ್ಯಾಣ್ ಅವರು ಪ್ರಸಾದ್ ವಿರುದ್ಧ ದೂರು ದಾಖಲಿಸಿದ್ದು, ಒಪ್ಪಂದದ ಪ್ರಕಾರ ಪ್ರಸಾದ್ ಅವರು ನನಗೆ ಇನ್ನು 2 ಕೋಟಿ ರುಪಾಯಿಗಳಷ್ಟು ಹಣವನ್ನು ನೀಡಬೇಕಿತ್ತು. ನಾನ್ನಕು ಪ್ರೇಮತೋ ಚಿತ್ರ ಬಿಡುಗಡೆಯಾಗುವುದಕ್ಕೂ ಮುನ್ನವೇ ಹಣ ನೀಡುವುದಾಗಿ ಹೇಳಿದ್ದರು. ಆದರೆ ಈ ವರೆಗೂ ಹಣವನ್ನು ನೀಡಿಲ್ಲ ಎಂದು ದೂರಿನಲ್ಲಿ ಹೇಳಿದ್ದಾರೆ.

2013ರಲ್ಲಿ ತೆರೆಕಂಡಿದ್ದ ಪವರ್ ಸ್ಟಾರ್ ಪವನ್ ಕಲ್ಯಾಣ್ ಹಾಗೂ ಸಮಂತಾ ಅಭಿನಯದ 'ಅತ್ತಾರಿಂಟಿಕಿ ದಾರೇದಿ' ಚಿತ್ರ ಟಾಲಿವುಡ್ ನಲ್ಲಿ ಬ್ಲಾಕ್ ಬಸ್ಟರ್ ಚಿತ್ರವಾಗಿತ್ತು. ಅಲ್ಲದೇ, 75 ಕೋಟಿಗೂ ಹೆಚ್ಚು ಹಣವನ್ನು ಬಾಚಿಕೊಂಡಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಅನಕ್ಷರಸ್ಥ' ಪ್ರಧಾನಿಯಿಂದಾಗಿ ಪೆಟ್ರೋಲ್-ಡೀಸೆಲ್ ಮತ್ತು ಅನಿಲ ಬೆಲೆಗಳು ಹೆಚ್ಚಳವಾಗಿದೆ: ಸಿಎಂ ಸಿದ್ದರಾಮಯ್ಯ

IPL Valuation Chart: 1.63 ಲಕ್ಷ ಕೋಟಿಗೇರಿದ ಐಪಿಎಲ್ ಮೌಲ್ಯ, CSK ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ KKR, 'ಕಿಂಗ್' ವಿರಾಟ್ ಕೊಹ್ಲಿ ಗಳಿಸಿದ್ದೆಷ್ಟು ಗೊತ್ತಾ?

ನಾಯಕತ್ವ ತ್ಯಜಿಸಿದ ಬಳಿಕ ಸಂಕಷ್ಟದಲ್ಲಿದ್ದೆ.. ನೆರವಿಗೆ ಬಂದಿದ್ದು 'ಜಾಮಿ' ಮಾತ್ರ: Virat Kohli

IPL 2026: ವೈಭವ್ ಸೂರ್ಯವಂಶಿ ಆರ್ಭಟಕ್ಕೆ ಮಕಾಡೆ ಮಲಗಿದ LSG, ಗೆದ್ದ RR ಪ್ಲೇ ಆಫ್ ಕನಸು ಜೀವಂತ!

ಮಾರ್ತಾಂಡ ಆನೆ ಕೊಂದ ಕಂಜನ್ ದಸರಾದಿಂದ ಶಾಶ್ವತ ನಿಷೇಧ: ಸಚಿವ ಈಶ್ವರ್ ಖಂಡ್ರೆ ಆದೇಶ

SCROLL FOR NEXT