ರವಿಚಂದ್ರನ್ ಪುತ್ರ ಮನೋ ರಂಜನ್ (ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

ತೆಲುಗಿನ ಶಂಕರಾಭರಣಂ ರಿಮೇಕ್ ಚಿತ್ರದಲ್ಲಿ ಕ್ರೇಜಿಸ್ಟಾರ್ ಪುತ್ರ?

ತೆಲುಗಿನಲ್ಲಿ ಭರ್ಜರಿ ಯಶಸ್ಸು ಶಂಕರಾಭರಣಂ ಸಿನಿಮಾ ಕನ್ನಡಕ್ಕೆ ರಿಮೇಕ್ ಆಗುವುದು ಖಚಿತವಾಗಿದೆ. ಈಗಾಗಲೇ ಚಿತ್ರದ ನಿರ್ದೇಶಕ ಕೋನ ವೆಂಕಟ್ ಈ ಬಗ್ಗೆ ಅಧಿಕೃತವಾಗಿ...

ತೆಲುಗಿನಲ್ಲಿ ಭರ್ಜರಿ ಯಶಸ್ಸು ಶಂಕರಾಭರಣಂ ಸಿನಿಮಾ ಕನ್ನಡಕ್ಕೆ ರಿಮೇಕ್ ಆಗುವುದು ಖಚಿತವಾಗಿದೆ. ಈಗಾಗಲೇ ಚಿತ್ರದ ನಿರ್ದೇಶಕ ಕೋನ ವೆಂಕಟ್ ಈ ಬಗ್ಗೆ ಅಧಿಕೃತವಾಗಿ ಪ್ರಕಟಿಸಿದ್ದಾರೆ.
ನನ್ನ ನಿರ್ದೇಶನದ ಶಂಕರಾಭರಣಂ ಚಿತ್ರದ ಕನ್ನಡ ರಿಮೇಕ್ ರೈಟ್ಸ್ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ. ಸದ್ಯದಲ್ಲೇ ಈ ಸಿನಿಮಾ ಸೆಟ್ಟೇರಲಿದ್ದು, ಈ ಚಿತ್ರದ ಮೂಲಕ ಸ್ಟಾರ್ ನಟನ ಪುತ್ರನೊಬ್ಬನನ್ನು ಲಾಂಚ್ ಮಾಡುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂದು ವೆಂಕಟ್ ಹೇಳಿಕೊಂಡಿದ್ದಾರೆ. ಅಂದಹಾಗೆ, ಈ ಚಿತ್ರದಲ್ಲಿ ನಟಿಸಲಿರುವ ಸ್ಟಾರ್ ನಟನ ಪುತ್ರ ಯಾರೆಂಬ ಕುತೂಹಲವೂ ಇಲ್ಲಿ ತಣಿದಿದೆ. ಬೇರಾರೂ ಅಲ್ಲ, ಅದು ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಎಂಬ ಮಾ ತು ಕೇಳಿಬರುತ್ತಿದೆ. ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದಲ್ಲಿ ರಣಧೀರ ಸಟ್ಟೇರಿತ್ತು. ಆದರೆ, ಆ ಸಿನಿಮಾ ಸದ್ಯಕ್ಕೆ ಸ್ಟಾಪ್ ಆಗಿದ್ದು, ಟೇಕಾಫ್  ಆಗುವುದು ಯಾವಾಗ ಎನ್ನುವುದರ ಬಗ್ಗೆ ಮಾಹಿತಿ ಇಲ್ಲ.
ಸದ್ಯಕ್ಕಂತೂ ಆ ಸಿನಿಮಾ ಶುರುವಾಗುವುದಿಲ್ಲ. ಹೀಗಾಗಿ ಮನೋರಂಜನ್ ಅವರನ್ನು ನಟನಾಗಿ ಲಾಂಚ್ ಮಾಡುವ ಜವಾಬ್ದಾರಿ ನಿರ್ಮಾಪಕ ಕಂ ವಿತರಕ ಜಯಣ್ಣ ಅವರ ಹೆಗಲಿಗೆ ಬಿತ್ತು. ತಮ್ಮ ನಿರ್ಮಾದ ಸಿನಿಮಾ ಮೂಲಕವೇ ಮನೋರಂಜನ್ ನಟನಾಗಿ ಚಿತ್ರರಂಗಕ್ಕೆ ಪರಿಚಯವಾಗಲಿದ್ದಾರೆಂದು ಸ್ವತಃ ಜಯಣ್ಣ ಹೇಳಿಕೊಂಡಿದ್ದರು. ಈಗ ಸಂಕ್ರಾಂತಿ ಹಬ್ಬದ ಸಡಗರದಲ್ಲಿ ಮನೋರಂಜನ್ ಅಭಿನಯದ, ಜಯಣ್ಣ ಭೋಗೇಂದ್ರ ನಿರ್ಮಾಣದ ಸಿನಿಮಾ ಅದ್ದೂರಿಯಾಗಿ ಮುಹೂರ್ತ ಮಾಡಿಕೊಂಡಿದೆ.
ಶಂಕರಾಭರಣಂ ಕನ್ನಡದಲ್ಲಿ ಸಾಹೇಬ ಆಗಿ ಬರುತ್ತಿದೆ. ಮನೋರಂಜನ್ ಇಲ್ಲಿ ಹೀರೋ ಆಗ್ತಿದ್ದಾರಂತೆ. ಆದರೆ, ಈ ಬಗ್ಗೆ ಚಿತ್ರತಂಡದವರು ನೋ ಕಾಮೆಂಟ್ಸ್ ಎನ್ನುತ್ತಿದ್ದಾರೆಯೇ ಹೊರತು, ಬೇರೇನನ್ನೂ ಹೇಳುತ್ತಿಲ್ಲ. ಶಂಕರಾಭರಣಂ ಎನ್ನುವ ಟೈಟಲ್ ಇಟ್ಟುಕೊಂಡು ಮಾಫಿಯಾ ಕತೆ ಹೇಳಿದ ತೆಲುಗು ಚಿತ್ರವನ್ನು ಪ್ರೇಕ್ಷಕರು ದೊಡ್ಡ ಮಟ್ಟದಲ್ಲಿ ಗೆಲ್ಲಿಸಿದ್ದರು. ಈ ಯಶಸ್ಸು ಕನ್ನಡದಲ್ಲೂ ಸಿಗುತ್ತಾ?

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT