ಸ್ಯಾಂಡಲ್ ವುಡ್ ನಟ ದರ್ಶನ್ ಹುಟ್ಟುಹಬ್ಬದಂದು ಹೊಸ ಚಿತ್ರಗಳು ಸೆಟ್ಟೇರುವುದು ಸಾಮಾನ್ಯ. ಆದರೆ ಈ ಬಾರಿ ಹುಟ್ಟುಹಬ್ಬಕ್ಕೆ ಮುಂಚಿತವಾಗಿಯೇ ಚಕ್ರವರ್ತಿ ಚಿತ್ರ ಶುರುವಾಗಲಿದೆ.
ಇತ್ತೀಚೆಗೆ ದರ್ಶನ್ ಅವರ ಹುಟ್ಟುಹಬ್ಬದಂದು ಶುರುವಾದ ಚಿತ್ರಗಳೆಲ್ಲವೂ ಮುಗಿಯುವುದಕ್ಕೆ ಒಂದೊಂದು ವರ್ಷ ತೆಗೆದುಕೊಂಡಿದೆ. ಈ ಬಾರಿ 'ಚಕ್ರವರ್ತಿ' ಸಹ ರಿಪೀಟ್ ಆಗುವುದಕ್ಕೆ ಇಷ್ಟವಿಲ್ಲ ಹೀಗಾಗಿ ಹುಟ್ಟು ಹಬ್ಬಕ್ಕೂ ಮುನ್ನವೇ ಚಿತ್ರ ಸೆಟ್ಟೇರಲಿದೆ ಎಂದು ದರ್ಶನ್ ಹೇಳಿದ್ದಾರೆ.
ದರ್ಶನ್ ಈ ಬಾರಿ ಅವರ ಹುಟ್ಟುಹಬ್ಬಕ್ಕೆ ಸಿಗುವುದಿಲ್ಲ ಎಂದು ಅವರ ಅಭಿಮಾನಿಗಳು ಬೇಸರಪಡುವ ಅವಶ್ಯಕತೆ ಇಲ್ಲ. ಅಂದು ದರ್ಶನ್ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡು, ಆ ನಂತರ ಚಿತ್ರೀಕರಣಕ್ಕೆ ತೆರಳಲಿದ್ದಾರಂತೆ.