ವೈಷ್ಣವಿ ಎಚ್.ಎಸ್., ಪರಮೇಶ್ವರ ಗುಂಡ್ಕಲ್, ರವೀಶ್ ಕುಮಾರ್ 
ಸಿನಿಮಾ ಸುದ್ದಿ

ಕನ್ನಡ ಕಿರುತೆರೆಗೆ ಹೊಸ ಚಾನೆಲ್ "ಕಲರ್ಸ್ ಸೂಪರ್"

ವಯಾಕಾಮ್18, ಕರ್ನಾಟಕದಲ್ಲಿ ಈಗಾಗಲೇ ಜನಪ್ರಿಯವಾಗಿರುವ ಕಲರ್ಸ್ ಕನ್ನಡದ ಜೊತೆಗೆ ಇದೀಗ ಕಲರ್ಸ್ ಸೂಪರ್ ಎಂಬ ಇನ್ನೊಂದು ಮನರಂಜನಾ ಚಾನೆಲನ್ನು ಆರಂಭಿಸುತ್ತಿದೆ.

- ಕಲರ್ಸ್ ಸೂಪರ್ ಕನ್ನಡ ಮಾರುಕಟ್ಟೆಯಲ್ಲಿ ವಯಾಕಾಮ್ 18ನ ಎರಡನೇ ಚಾನೆಲ್
- ಕಲರ್ಸ್ ಸೂಪರ್ ಜುಲೈ 24, 2016 ರಂದು ಪ್ರಸಾರ ಆರಂಭಿಸಲಿದೆ
- ಈ ಚಾನೆಲ್ ಆರಂಭದ ಪ್ರಚಾರಾಂದೋಲನದ ರಾಯಭಾರಿಯಾಗಿರುತ್ತಾರೆ ಸೂಪರ್‌ಸ್ಟಾರ್ ಯಶ್

ತನ್ನ ಪ್ರಾದೇಶಿಕ ಚಾನೆಲ್‌ಗಳು ಈವರೆಗೆ ಕಂಡಿರುವ ಯಶಸ್ಸಿನಿಂದ ಇನ್ನಷ್ಟು ಪ್ರೇರಣೆ ಪಡೆದಿರುವ ವಯಾಕಾಮ್ 18, ಕರ್ನಾಟಕದಲ್ಲಿ ಈಗಾಗಲೇ ಜನಪ್ರಿಯವಾಗಿರುವ ಕಲರ್ಸ್ ಕನ್ನಡದ ಜೊತೆಗೆ ಇದೀಗ ಕಲರ್ಸ್ ಸೂಪರ್ ಎಂಬ ಇನ್ನೊಂದು ಮನರಂಜನಾ ಚಾನೆಲನ್ನು ಆರಂಭಿಸುತ್ತಿದೆ. ಕಲರ್ಸ್ ಕನ್ನಡದ ರೀತಿಯಲ್ಲೇ, ಕಲರ್ಸ್ ಸೂಪರ್ ಕೂಡಾ ಹೊಸ ಹೊಸ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಟೆಲಿವಿಷನ್ ವೀಕ್ಷಕರ ಮನ ಗೆಲ್ಲಲಿದೆ.

ಹೊಸ ಚಾನೆಲ್‌ನ ಆರಂಭದ ಬಗ್ಗೆ ವಯಾಕಾಮ್ 18 ನ ರವೀಶ್ ಕುಮಾರ್, ಪ್ರಾದೇಶಿಕ ಪ್ರಾಜೆಕ್ಟ್‌ಗಳ ಮುಖ್ಯಸ್ಥ (ಕಲರ್ಸ್ ಕನ್ನಡ, ಕಲರ್ಸ್ ಸೂಪರ್ ಮತ್ತು ಕಲರ್ಸ್ ಬಾಂಗ್ಲಾ), ಹೀಗೆ ಹೇಳುತ್ತಾರೆ: "ಹೊಸ ರೀತಿಯ ಮತ್ತು ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಹಿಂದೆಂದೂ ಕಂಡಿರದ ರೀತಿಯಲ್ಲಿ ಶ್ರೀಮಂತವಾಗಿ ತೋರಿಸುವ ಕಲರ್ಸ್ ಕನ್ನಡವನ್ನು ಕರ್ನಾಟಕದ ಟೆಲಿವಿಷನ್ ವೀಕ್ಷಕರು ಈಗಾಗಲೇ ಮೆಚ್ಚಿದ್ದಾರೆ. ಕರ್ನಾಟಕದ ಮಾರುಕಟ್ಟೆಯಲ್ಲಿ ವೀಕ್ಷಕರು ನೋಡಬಯಸುವ ಆದರೆ ಲಭ್ಯವಿರದೆ ಇರುವಂಥ ವೈವಿಧ್ಯಮಯ ಹಾಗೂ ಮನರಂಜನಾತ್ಮಕ ಕಾರ್ಯಕ್ರಮಗಳನ್ನು ನೀಡುವುದು ನಮ್ಮ ಉದ್ದೇಶ. ಕಲರ್ಸ್ ಕನ್ನಡ ಮತ್ತು ಕಲರ್ಸ್ ಸೂಪರ್ ಒಂದಕ್ಕೊಂದು ಪರಸ್ಪರ ಸಹಕರಿಸುತ್ತಾ ಪೈಪೋಟಿ ನಡೆಸಲಿವೆ. ಈ ಮೂಲಕ ನಮ್ಮ ಹೊಸ ಚಾನೆಲ್ ಕನ್ನಡ ಟೆಲಿವಿಷನ್ ವೀಕ್ಷಕರ ಮುಂದೆ ಮನರಂಜನೆಯ ಹೊಸ ಮಜಲನ್ನೇ ಬಿಚ್ಚಿಡಲಿದೆ."

ಪರಮೇಶ್ವರ ಗುಂಡ್ಕಲ್, ಕಲರ್ಸ್ ಕನ್ನಡ ಹಾಗೂ ಕಲರ್ಸ್ ಸೂಪರ್‌ನ ಬ್ಯುಸಿನೆಸ್ ಹೆಡ್, ಹೀಗೆ ಹೇಳುತ್ತಾರೆ: "ಕಲರ್ಸ್ ಕನ್ನಡದ ಮೂಲಕ ನಾವು ಕನ್ನಡ ಟೆಲಿವಿಷನ್ ವೀಕ್ಷಕರಿಗೆ ಕರ್ನಾಟಕದ ಶ್ರೀಮಂತ ಸಂಸ್ಕೃತಿಯನ್ನು ಬಿಂಬಿಸುವ ಮನರಂಜನಾ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದೇವೆ. ಕಲರ್ಸ್ ಸೂಪರ್‌ನಲ್ಲಿ ಇನ್ನೂ ಹೆಚ್ಚಿನ ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡುವ ಮೂಲಕ ಎಲ್ಲ ಪ್ರದೇಶದ, ಎಲ್ಲ ವಯೋಮಾನದ ಮತ್ತು ಎಲ್ಲ ವರ್ಗದ ಜನರನ್ನು ತಲುಪಲು ನಮ್ಮ ಸಂಸ್ಥೆಗೆ ಸಾಧ್ಯವಾಗಲಿದೆ."

ವೈಷ್ಣವಿ ಎಚ್.ಎಸ್., ಪ್ರೋಗ್ರಾಮಿಂಗ್ ಹೆಡ್, ಕಲರ್ಸ್ ಸೂಪರ್, ಅವರು ಹೇಳುವ ಪ್ರಕಾರ: "ಕನ್ನಡ ಮನರಂಜನಾ ಚಾನೆಲ್‌ಗಳು ಕೆಲವೊಂದು ವಿಧದ ಕಾರ್ಯಕ್ರಮಗಳನ್ನು ಮಾಡಿಯೇ ಇಲ್ಲ. ಮಾರುಕಟ್ಟೆಯ ಇಂಥಹ ಅಗತ್ಯವನ್ನು ಪೂರೈಸುವುದು ಕಲರ್ಸ್ ಸೂಪರ್‌ನಿಂದ ಸಾಧ್ಯವಾಗಲಿದೆ. ಇದನ್ನು ಗಮನದಲ್ಲಿರಿಸಿಕೊಂಡು ರೊಮ್ಯಾಂಟಿಕ್ ಕಾಮಿಡಿ, ಸೂಪರ್‌ ನ್ಯಾಚುರಲ್ ಕಥೆಗಳು ಮುಂತಾದ ಒಂದಷ್ಟು ಕಾರ್ಯಕ್ರಮಗಳನ್ನು ನಾವು ಸಿದ್ಧಪಡಿಸಿದ್ದೇವೆ. ಎಲ್ಲ ವಿಧದ ಟೆಲಿವಿಷನ್ ವೀಕ್ಷಕರನ್ನು ಮನದಲ್ಲಿ ಇರಿಸಿಕೊಂಡು ನಮ್ಮ ಕಾರ್ಯಕ್ರಮಗಳ ಪಟ್ಟಿಯನ್ನು ಸಿದ್ಧಗೊಳಿಸಲಾಗಿದೆ."

ಪೌರಾಣಿಕ, ಫ್ಯಾಂಟಸಿ, ಸೂಪರ್ ನ್ಯಾಚುರಲ್, ರಿಯಾಲಿಟಿ ಟೆಲಿವಿಷನ್, ರೊಮ್ಯಾಂಟಿಕ್ ಕಾಮಿಡಿ, ಹೊಚ್ಚ ಹೊಸ ಚಲನಚಿತ್ರಗಳು ಮುಂತಾದವುಗಳ ಮೂಲಕ ಕನ್ನಡ ಮನರಂಜನಾ ಮಾರುಕಟ್ಟೆಗೆ ಹೊಸ ಚೈತನ್ಯ ತುಂಬಲಿದೆ ಕಲರ್ಸ್ ಸೂಪರ್. ಈ ಹಿಂದೆ ಈಟಿವಿಯಾಗಿದ್ದಾಗ ನಮ್ಮ ಸಮೂಹದ ಮೂಲಕವೇ ಅಭಿನಯಕ್ಕಿಳಿದು ಇಂದು ಜನಪ್ರಿಯ ನಾಯಕ ನಟ ಮಾತ್ರವಲ್ಲದೆ ಸೂಪರ್ ಸ್ಟಾರ್ ಆಗಿ ಹೊರ ಹೊಮ್ಮಿರುವ ಯಶ್ ಕಲರ್ಸ್ ಸೂಪರ್‌ನ ರಾಯಭಾರಿಯಾಗಿ ಇರುತ್ತಾರೆ.

ಕಾರ್ಯಕ್ರಮಗಳ ಬಗ್ಗೆ ಒಂದು ಇಣುಕು ನೋಟ:

ಸರ್ಪ ಸಂಬಂಧ- ಫ್ಯಾಂಟಸಿ
ಇದು ರಾಗಿಣಿ ಎಂಬ ಹೊಸದಾಗಿ ಮದುವೆಯಾದ ಹುಡುಗಿಯ ಕಥೆ. ಪ್ರತಿ ಹುಣ್ಣಿಮೆಯಂದು ತನ್ನ ಗಂಡ ಹಾವಾಗಿ ಪರಿವರ್ತನೆಯಾಗುತ್ತಾನೆ ಎಂದು ಗೊತ್ತಾದಾಗ ಆಕೆಯ ಜಗತ್ತೇ ಕುಸಿದು ಬೀಳುತ್ತದೆ.

ಗಿರಿಜಾ ಕಲ್ಯಾಣ-ಸಾಮಾಜಿಕ-ಪೌರಾಣಿಕ
ಹದಿನೆಂಟನೇ ಶತಮಾನದಲ್ಲಿ ನಡೆಯುವ ಕಥೆಯಿದು. ಗಿರಿಜೆ ಎಂಬಶಿವಭಕ್ತೆ ಆ ಊರಿನ ದುಷ್ಟರಾಜ ಅಮರದೇವನಿಗೆ ಸವಾಲಾಗಿರುತ್ತಾಳೆ. ಲೋಕಕಲ್ಯಾಣಕ್ಕಾಗಿ ಅವಳು ಮಾಡುವ ಕಾರ್ಯಗಳಿಗೆ ಸ್ವತಃ ಶಿವ ಪಾರ್ವತಿಯರೇ ನೆರವಾಗುತ್ತಾರೆ. ಮತ್ತು ಅಮರದೇವನ ಪುತ್ರ ಶಂಕರನ ಸಹಾಯವೂ ಆಕೆಗೆ ದೊರೆಯುತ್ತದೆ.

ಮಂಗ್ಳೂರ್ ಹುಡ್ಗಿ ಹುಬ್ಳಿ ಹುಡ್ಗ- ರೊಮ್ಯಾಂಟಿಕ್ ಕಾಮಿಡಿ
ಮಂಗಳೂರಿನ ಹುಡುಗಿಯ ಕುಟುಂಬಹಾಗೂ ಹುಬ್ಬಳ್ಳಿ ಹುಡುಗನ ಕುಟುಂಬಬೆಂಗಳೂರಿನ ಒಂದೇ ಮನೆಯಲ್ಲಿ ಬಾಡಿಗೆಗೆ ವಾಸವಾಗುತ್ತದೆ. ಈ ಎರಡೂ ಕುಟುಂಬಗಳ ಮಧ್ಯೆ ಭಾಷೆ, ಆಚಾರ, ವಿಚಾರಗಳ ವಿಷಯದಲ್ಲಿ ನಡೆಯುವ ಗೊಂದಲಗಳೇ ಈ ತಮಾಷೆ ಧಾರಾವಾಹಿಯ ಕಥಾವಸ್ತು.

ಚಾಂಪಿಯನ್- ಆಕ್ಷನ್ ರಿಯಾಲಿಟಿ
ರಾಜ್ಯದ ವಿವಿಧೆಡೆಯಿಂದ ಬಂದ ಹುಡುಗಿಯರು ದೇಶದ ವಿವಿಧ ಜಾಗಗಳಲ್ಲಿ 'ತಾವು ಹುಟ್ಟು ಚಾಂಪಿಯನ್' ಎಂದು ಸಾಬೀತು ಮಾಡಲು ಹೆಣಗಾಡುತ್ತಾರೆ. ಸಮುದ್ರದ ದಂಡೆಯಲ್ಲಿ ಆರಂಭವಾಗುವ ಅವರ ಈ ಸಾಹಸಮಯ ಪಯಣ ಕಾಡು ಪ್ರದೇಶಗಳು, ಕೋಟೆ ಮತ್ತು ಅರಮನೆಗಳನ್ನು ದಾಟಿ ಮರುಭೂಮಿ ತಲುಪುತ್ತದೆ. ಈ ಆಕ್ಷನ್ ರಿಯಾಲಿಟಿ ಶೋವನ್ನು ಬಿಗ್‌ಬಾಸ್ ಖ್ಯಾತಿಯ ರೆಹಮಾನ್ ನಡೆಸಿಕೊಡಲಿದ್ದಾರೆ.

ನಾ ನಿನ್ನ ಬಿಡಲಾರೆ- ಸೂಪರ್ ನ್ಯಾಚುರಲ್
ಸಾದಾ ಸೀದಾ ಹುಡುಗಿ ನಂದಿನಿ ಆಕೆಯ ಪ್ರಿಯತಮ ಅಕ್ಷಯ್ ಜೊತೆ ಮದುವೆಯಾಗುತ್ತಾಳೆ. ಕಾಂಚನಾ ಎಂಬ ಹುಡುಗಿಯ ಪ್ರವೇಶವಾದ ಮೇಲೆ ಆಕೆಯ ಜೀವನ ಅಲ್ಲೋಲ ಕಲ್ಲೋಲವಾಗುತ್ತದೆ. ಕಾಂಚನಾಳನ್ನು ತಡೆಯುವುದು ಸಾಧ್ಯವೇ ಇಲ್ಲ, ಏಕೆಂದರೆ ಆಕೆ ಅದಾಗಲೇ ಸತ್ತಿದ್ದಾಳೆ ಎಂಬ ಸತ್ಯ ನಂದಿನಿಯನ್ನು ದಿಗ್ಭ್ರಾಂತಳನ್ನಾಗಿ ಮಾಡುತ್ತದೆ!

ಬಂಗಾರಿ- ಡ್ರಾಮಾ
ಹುಡುಗಿಯೊಬ್ಬಳ ಮದುವೆ ನಿಶ್ಚಯವಾಗಿರುತ್ತದೆ. ಸಣ್ಣ ಮುಗ್ದ ಹೆಣ್ಣು ಮಗುವೊಂದು ಅಕಸ್ಮಾತ್ತಾಗಿ ಆಕೆಯನ್ನು ತನ್ನ ತಾಯಿಯೆಂದು ಕರೆಯುತ್ತಾಳೆ. ಮದುವೆಗೆ ಸಿದ್ಧಳಾಗಿರುವ ಹುಡುಗಿಗೆ ಈಗ ಇಕ್ಕಟ್ಟಿನ ಪರಿಸ್ಥಿತಿ.

ಅನುರಾಗ- ಪ್ರೇಮಕಥೆ
ಗಾಯಕನೊಬ್ಬ ರಸ್ತೆ ಅಪಘಾತಕ್ಕೊಳಗಾದ ಹುಡುಗಿಯ ರಕ್ಷಣೆಗೆ ಧಾವಿಸುತ್ತಾನೆ. ಆದರೆ ಆಕೆಯ ಮನೆಯವರು ಅವನನ್ನು ಆಕೆಯ ಪತಿ ಎಂದು ತಪ್ಪಾಗಿ ಭಾವಿಸುತ್ತಾರೆ. ಹುಡುಗಿ ಆಸ್ಪತ್ರೆಯಲ್ಲಿ ಕೋಮಾದಲ್ಲಿರುವಾಗ ಗಾಯಕನಿಗೆ ಆಕೆಯ ಸಹೋದರಿ ಎದುರಾಗುತ್ತಾಳೆ. ಆಕೆಯೋ ಈತನ ಹಾಡಿಗೆ ಮರುಳಾದವಳು!

ಕಲರ್ಸ್ ಸೂಪರ್‌ಗಾಗಿ ಕರ್ನಾಟಕದ 179 ನಗರ ಮತ್ತು ಪಟ್ಟಣಗಳಲ್ಲಿ ವಯಾಕಾಮ್ 18 ಭಾರೀ ಪ್ರಚಾರಾಂದೋಲನ ನಡೆಸಲಿದೆ. ಜುಲೈ 24 ರಿಂದ ಕಲರ್ಸ್ ಸೂಪರ್ ತನ್ನ ಭಾರೀ ಮನರಂಜನಾ ಕಾರ್ಯಕ್ರಮಗಳ ಮೂಲಕ ಪ್ರಸಾರ ಆರಂಭಿಸಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT