ಸಿನಿಮಾ ಸುದ್ದಿ

ನೆಟ್ ಫ್ಲಿಕ್ಸ್ ನಲ್ಲಿ ಕನ್ನಡದ ಯು-ಟರ್ನ್ ಚಿತ್ರ ಪ್ರದರ್ಶನ

Srinivas Rao BV

ಬೆಂಗಳೂರು: ರಹಸ್ಯ ಕಥಾನಕ ಹೊಂದಿರುವ ಕನ್ನಡದ ಯು-ಟರ್ನ್ ಚಿತ್ರ ನೆಟ್ ಫ್ಲಿಕ್ಸ್ ನಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿರುವ ಕನ್ನಡದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಚಿತ್ರ ನಿರ್ದೇಶಕ ಪವನ್ ಕುಮಾರ್ ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ್ದು, ಯು-ಟರ್ನ್ ಚಿತ್ರವನ್ನು ಜನರು ಶೀಘ್ರದಲ್ಲೇ ನೆಟ್ ಪ್ಲಿಕ್ಸ್ ಮೂಲಕ ವೀಕ್ಷಿಸಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ. ನೆಟ್ ಫ್ಲಿಕ್ಸ್ ಗೆ 8.3 ಕೋಟಿ ಚಂದಾದಾರರಿದ್ದು, 27 ಭಾಷೆಗಳಲ್ಲಿ ಸಬ್ ಟೈಟಲ್ ಗಳನ್ನು ಪಡೆದಿರುವ ಯು-ಟರ್ನ್ ಚಿತ್ರ ಅಕ್ಟೊಬರ್- ನವೆಂಬರ್ ವೇಳೆಗೆ ನೆಟ್ ಫ್ಲಿಕ್ಸ್ ನಲ್ಲಿ ಪ್ರದರ್ಶನ ಕಾಣಲಿದೆ.

ನೆಟ್ ಫ್ಲಿಕ್ಸ್ ನ್ನು ಚಿತ್ರ ನಿರ್ಮಾಪಕರಿಗೆ ಹೊಸ ಮಾರ್ಗ ಎಂದು ಅಭಿಪ್ರಾಯಪಟ್ಟಿರುವ ಚಿತ್ರ ನಿರ್ದೇಶಕ ಪವನ್ ಕುಮಾರ್, ಬಾಕ್ಸ್ ಆಫಿಸ್ ಸಂಗ್ರಹದ ವರದಿಯನ್ನು ನೋಡಿ ನೆಟ್ ಫ್ಲಿಕ್ಸ್ ಚಿತ್ರಗಳನ್ನು ಆಯ್ಕೆ ಮಾಡುವುದಿಲ್ಲ. ಬದಲಾಗಿ ಅಲ್ಲಿ ಅವರದ್ದೇ ಆದ ಆಯ್ಕೆಗಳಿರುತ್ತವೆ. ಯು-ಟರ್ನ್ ಚಿತ್ರ ನೋಡಿದ ಬೆನ್ನಲ್ಲೇ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಯು-ಟರ್ನ್ ಚಿತ್ರದ ಇಂಗ್ಲಿಷ್ ಸಬ್ ಟೈಟಲ್ ಗಳನ್ನು ನೆಟ್ ಫ್ಲಿಕ್ಸ್ ಗೆ ಕಲಿಸಿಕೊಡಲಾಗಿದ್ದು, ಅದನ್ನು ಅವರು ವಿಶ್ವದ ಬೇರೆ ಬೇರೆ ಭಾಷೆಗಳಿಗೆ ನೀಡಲು ಏಜೆನ್ಸಿಗೆ ರವಾನೆ ಮಾಡಿದ್ದಾರೆ. ಕಬಾಲಿ ಮೇನಿಯಾ ನಡುವೆ ತಮ್ಮ ಸಿನಿಮಾ ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾಗಲಿದೆ ಎಂಬ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

SCROLL FOR NEXT