ಸಿನಿಮಾ ಸುದ್ದಿ

ನಟಿ ನಿಧಿ ಸುಬ್ಬಯ್ಯಾಗೆ ಪಿತೃ ವಿಯೋಗ

Vishwanath S

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ನಿಧಿ ಸುಬ್ಬಯ್ಯ ಅವರ ಬೊಳ್ಳಚಂಡ ಬೆಳ್ಳಿಯಪ್ಪ ಸುಭಾಶ್ ಸುಬ್ಬಯ್ಯ ನವರು ನಿಧನರಾಗಿದ್ದಾರೆ.

ಕೊಡವ ಸಮಾಜದ ಪ್ರಧಾನ ಕಾರ್ಯದರ್ಶಿಯಾಗಿದ್ದ 63 ವರ್ಷದ ಸುಭಾಶ್ ಸುಬ್ಬಯ್ಯ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ರಾತ್ರಿ ನಿಧನರಾಗಿದ್ದಾರೆ. ಸುಭಾಶ್ ಸುಬ್ಬಯ್ಯನವರ ಅಂತ್ಯ ಸಂಸ್ಕಾರ ಮೈಸೂರಿನಲ್ಲಿ ನಡೆಯಲಿದೆ.

ನಿಧಿ ಸುಬ್ಬಯ್ಯ ಹಿಂದಿ ಸೇರಿದಂತೆ ಕನ್ನಡದ 11 ಚಿತ್ರಗಳಲ್ಲಿ ನಟಿಸಿದ್ದಾರೆ.

SCROLL FOR NEXT