ಚಾರ್ಲಿ ಚಿತ್ರದ ಪೋಸ್ಟರ್ ಮತ್ತು ಮಾಧವನ್ (ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

ಚಾರ್ಲಿ ರಿಮೇಕ್ ನಲ್ಲಿ ಮಾಧವನ್!

2015ರಲ್ಲಿ ತೆರೆಕಂಡು ಮಲೆಯಾಳಂ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದ ಚಾರ್ಲಿ ಚಿತ್ರ ತಮಿಳಿಗೆ ರಿಮೇಕ್ ಆಗುತ್ತಿದ್ದು, ತಮಿಳು ವರ್ಷನ್ ನ ಚಾರ್ಲಿಗೆ ತ್ರೀ ಇಡಿಯಟ್ಸ್ ಖ್ಯಾತಿಯ ಮಾಧವನ್ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಚೆನ್ನೈ: 2015ರಲ್ಲಿ ತೆರೆಕಂಡು ಮಲೆಯಾಳಂ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದ ಚಾರ್ಲಿ ಚಿತ್ರ ತಮಿಳಿಗೆ ರಿಮೇಕ್ ಆಗುತ್ತಿದ್ದು, ತಮಿಳು ವರ್ಷನ್ ನ ಚಾರ್ಲಿಗೆ ತ್ರೀ ಇಡಿಯಟ್ಸ್ ಖ್ಯಾತಿಯ ಮಾಧವನ್ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಚಾರ್ಲಿ ಚಿತ್ರದ ತಮಿಳು ರಿಮೇಕ್ ಕುರಿತಂತೆ ಈ ಹಿಂದೆ ಹಲವು ಸುದ್ದಿಗಳು ಪ್ರಸಾರವಾಗಿತ್ತಾದರೂ, ನಾಯಕನಿ ವಿಚಾರವಾಗಿ ಹಲವು ಊಹಾಪೋಹಗಳು ಹರಿದಾಡಿದ್ದವು. ಆದರೆ ಈ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿರುವ ಚಿತ್ರತಂಡ ತಮಿಳು ವರ್ಷನ್ ನ ಚಾರ್ಲಿಗೆ ಮಾಧವನ್ ಅವರೇ ಅಂತಿಮ ಎಂದು ಮಾಹಿತಿ ನೀಡಿದೆ. ಮಲಯಾಳಂನಲ್ಲಿ ಮಿಲನ ಖ್ಯಾತಿಯ ಪಾರ್ವತಿ ಮತ್ತು ದುಲ್ಖಾರ್ ಸಲ್ಮಾನ್ ಜೋಡಿ ಮೋಡಿ ಮಾಡಿತ್ತು. ಚಿತ್ರಕ್ಕೆ ಅಭೂತ ಪೂರ್ವ ಯಶಸ್ಸು ದೊರೆತಿತ್ತು.

ಇದರಿಂದ ಪ್ರೇರಿತರಾಗಿರುವ ತಮಿಳುನ ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ತಮಿಳು ವರ್ಷನ್ ಚಾರ್ಲಿ ನಿರ್ಮಾಣಕ್ಕೆ ಕೈಹಾಕಿದೆ. ಈ ಹಿಂದೆ ವಿಜಯ್ ಅಭಿನಯದ  ‘ಕತ್ತಿ’ ಚಿತ್ರ ನಿರ್ಮಾಣ ಮಾಡಿದ್ದ ಲೈಕಾ ಸಂಸ್ಥೆ ಪ್ರಸ್ತುತ ಚಾರ್ಲಿ ಚಿತ್ರ ನಿರ್ಮಾಣದತ್ತ ಗಮನ ಹರಿಸಿದೆ. ಇ ಬಗ್ಗೆ ಮಾತನಾಡಿರುವ ನಿರ್ಮಾಪಕರು, "ರಿಮೇಕ್ ಮಾಡಬೇಕೆಂದಾಗ, ನಮ್ಮ ಮೊದಲ ಮತ್ತು ಬೆಸ್ಟ್ ಆಯ್ಕೆ ಮಾಧವನ್ ಅವರೇ ಆಗಿದ್ದರು. ಅವರೊಬ್ಬ ಬಹುಮುಖ ಪ್ರತಿಭೆ. ಈ ಪಾತ್ರಕ್ಕೆ ಅವರು ಸೂಕ್ತವಾಗಿ ಹೊಂದಿಕೊಳ್ಳುತ್ತಾರೆ. ಈ ಚಿತ್ರದ ಕಥಾವಸ್ತು ತಮಿಳು ಪ್ರೇಕ್ಷಕರಿಗೆ ಖಂಡಿತ ಇಷ್ಟವಾಗಲಿದೆ’ ಎಂದು ಹೇಲಿದ್ದಾರೆ.

ಇನ್ನು ಚಿತ್ರಕ್ಕೆ ದೇವೈ ತಿರುಮಗನ್, ಮದರಾಸಿಪಟ್ಟಿಣಂ’ ಖ್ಯಾತಿಯ ನಿರ್ದೇಶಕ ಎ.ಎಲ್. ವಿಜಯ್ ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದು, ಸದ್ಯ ಅವರು ತ್ರಿಭಾಷಾ ಚಿತ್ರ ‘ದೇವಿ’ಯಲ್ಲಿ ತೊಡಗಿಸಿಕೊಂಡಿರುವುದರಿಂದ ‘ಚಾರ್ಲಿ’ ರಿಮೇಕ್ ಶುರುವಾಗುವುದು ತಡವಾಗುವ ಸಾಧ್ಯತೆಗಳಿವೆಯಂತೆ. ಇನ್ನು, ಪಾರ್ವತಿ ನಿರ್ವಹಿಸಿದ್ದ ಪಾತ್ರವನ್ನು ತಮಿಳಿನಲ್ಲಿ ಯಾರು ನಿಭಾಯಿಸಲಿದ್ದಾರೆ ಎಂಬುದು ಬಹಿರಂಗಗೊಂಡಿಲ್ಲ.  ಇದೇ ವಾರ್ಷಾಂತ್ಯದಲ್ಲಿ ಚಾರ್ಲಿ ಚಿತ್ರದ ಚಿತ್ರೀಕರಣ ಆರಂಭಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test Day 3: ಫಾಲೋ ಆನ್ ಭೀತಿಯಲ್ಲಿ ಲಂಕಾಪಡೆ, ಮಳೆಯಿಂದಾಗಿ 3ನೇ ದಿನದಾಟ ಮೊಟಕು!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!