'ಜಿಗರ್ ಥಂಡಾ' ಸಿನೆಮಾದಲ್ಲಿ ರಾಹುಲ್ ಮತ್ತು ಚಿಕ್ಕಣ್ಣ 
ಸಿನಿಮಾ ಸುದ್ದಿ

ನನಗೆ ಹಾಸ್ಯ ಹೇಗೆ ಸ್ಫೂರ್ತಿ ನೀಡಿತೋ ತಿಳಿದಿಲ್ಲ: ಚಿಕ್ಕಣ್ಣ

ಹಾಸ್ಯನಟನಾಗಿ ಚಿತ್ರರಂಗ ಪ್ರವೇಶಿಸಿ ನಾಯಕ ನಟನೂ ಆಗಿ ಸದ್ಯದ ಅತಿ ಬೇಡಿಕೆಯ ಹಾಸ್ಯ ನಟನಾಗಿರುವ ಚಿಕ್ಕಣ್ಣ ನಟಿಸಿರುವ ತಮಿಳು ರಿಮೇಕ್ 'ಜಿಗರ್ ಥಂಡ' ಶುಕ್ರವಾರ ಬಿಡುಗಡೆಗೆ ಸಿದ್ಧವಾಗಿದೆ.

ಬೆಂಗಳೂರು: ಹಾಸ್ಯನಟನಾಗಿ ಚಿತ್ರರಂಗ ಪ್ರವೇಶಿಸಿ ನಾಯಕ ನಟನೂ ಆಗಿ ಸದ್ಯದ ಅತಿ ಬೇಡಿಕೆಯ ಹಾಸ್ಯ ನಟನಾಗಿರುವ ಚಿಕ್ಕಣ್ಣ ನಟಿಸಿರುವ ತಮಿಳು ರಿಮೇಕ್ 'ಜಿಗರ್ ಥಂಡ' ಶುಕ್ರವಾರ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನೆಮಾದಲ್ಲಿ ನಾಯಕ ನಟ ರಾಹುಲ್ ಗೆಳೆಯರಾಗಿ ಚಿಕ್ಕಣ್ಣ ನಟಿಸಿದ್ದಾರೆ.

ಮಾತಿಗೆ ಸಿಕ್ಕ ಚಿಕ್ಕಣ್ಣ "ನಾನು ಮೂಲ ಸಿನೆಮ ನೋಡಿದ್ದೇನೆಯೇ ಎಂದು ನೀವು ಕೇಳುವುದಕ್ಕೂ ಮೊದಲೇ ಸ್ಪಷ್ಟಪಡಿಸುತ್ತೇನೆ. ನಾನು ರಿಮೇಕ್ ಚಿತ್ರ ಮಾಡುವೆನೆಂದು ತಿಳಿದ ಮೇಲೂ ನಾನು ಮೂಲ ಸಿನೆಮಾ ನೋಡಲಿಲ್ಲ ಏಕೆಂದರೆ ಹಾಸ್ಯವನ್ನು ಮೂಲದಿಂದ ನಕಲು ಮಾಡಲು ಸಾಧ್ಯವಿಲ್ಲ. ನಾನು ನಿರ್ದೇಶಕರಿಂದ ಕಥೆ ಕೇಳಿ ನನ್ನ ಪಾತ್ರವನ್ನು ನಟಿಸಿದ್ದೇನೆ. ಮತ್ತೊಬ್ಬ ನಟನ ಪಾತ್ರದಿಂದ ಸ್ಪೂರ್ತಿ ಪಡೆಯುವುದು ನನಗೆ ಇಷ್ಟವಿಲ್ಲ ಆದುದರಿಂದ  ಮೂಲ ಸಿನೆಮಾ ನೋಡದೆ ಉಳಿದಿದ್ದೇನೆ" ಎನ್ನುತಾರೆ.

"ನನಗೆ ಹಾಸ್ಯ ಹೇಗೆ ಸ್ಫೂರ್ತಿ ನೀಡಿತು ಎಂದು ಇನ್ನೂ ತಿಳಿದಿಲ್ಲ. ನಾನು ನಟನಾಗುವೆನೆಂಬ ಕಲ್ಪನೆಯೂ ಇರಲಿಲ್ಲ. ಆದುದರಿಂದ ಯಾರ ಕೆಲಸವನ್ನು ನಾನು ಅನುಕರಿಸಲಿಲ್ಲ" ಎನ್ನುತ್ತಾರೆ ನಟ.

ಈಗಾಗಲೇ ಸುಮಾರು ೮೫ ಸಿನೆಮಾಗಳಲ್ಲಿ ಕೆಲಸ ಮಾಡಿರುವ ಚಿಕ್ಕಣ್ಣ ಕನ್ನಡ ಚಿತ್ರರಂಗದ ಮನಗೆದ್ದಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಾರೆ. ತಾವು ಇಲ್ಲಿಯವರೆಗೂ ನಟಿಸಿರುವ ಸಿನೆಮಾಗಳಲ್ಲಿ ಕೇವಲ ೩-೪ ಸಿನೆಮಾಗಳ ಬಗ್ಗೆ ವಿಷಾದ ವ್ಯಕ್ತ ಪಡಿಸುವ ನಟ "ನನ್ನ ಹಾಸ್ಯ ಮಾಮೂಲಿ ಆಗಿರುವ ಸಾಧ್ಯತೆ ಇದೆ. ನನ್ನ ಶೈಲಿಯನ್ನು ಬದಲಾಯಿಸಿಕೊಳ್ಳುವತ್ತಲೂ ಗಮನ ಹರಿಸಿದ್ದೇನೆ. ಖುಷಿಯ ವಿಚಾರ ಎಂದರೆ ಬರಲಿರುವ ಮುಂದಿನ ಸಿನೆಮಾದಲ್ಲಿ ನನ್ನ ಹಾಸ್ಯ ಶೈಲಿ ವಿಭಿನ್ನವಾಗಿದೆ" ಎನ್ನುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

FlyDubai ವಿಮಾನ ಹಾರಾಟಕ್ಕೆ ಒಮಾನ್ ನಲ್ಲಿ ನಿಷೇಧ: ಪತನಕ್ಕೆ ಯತ್ನಿಸಿದ್ದ ಸಹ ಪೈಲಟ್‌ ಉಗ್ರವಾದ ಹಿನ್ನಲೆಯವನೇ?

ಏಷ್ಯನ್ ಗೇಮ್ಸ್ 2026: 'ರಿಕರ್ವ್ ಆರ್ಚರಿಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಮೊಹೋದ್ ಕುಂಕುಮ್!

ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿ, ಮುಂಬೈನಲ್ಲಿ ಬೃಹತ್ ಪ್ರತಿಭಟನೆ; 700 ಮಂದಿ ವಶಕ್ಕೆ

FlyDubai ಘಟನೆ ಹಿಂದೆ ಯಾವುದೇ ಶಕ್ತಿಯ ಕೈವಾಡವಿದ್ದರೂ ಡೋಂಟ್ ಕೇರ್; 'ಭಾರಿ ಬೆಲೆ' ತೆರಬೇಕಾಗುತ್ತೆ- ಇಸ್ರೇಲ್ ಪ್ರಧಾನಿ ನೆತನ್ಯಾಹು ಎಚ್ಚರಿಕೆ

ಬಿಹಾರ ಪ್ರವಾಹ: ವಾಯುಪಡೆಯ ಹೆಲಿಕಾಪ್ಟರ್‌ನಿಂದ ಪರಿಹಾರ ಸಾಮಗ್ರಿಯ ಪ್ಯಾಕೆಟ್ ಬಿದ್ದು ವೃದ್ಧ ಸಾವು!