ಇಟಲಿಯಲ್ಲಿ 'ಸಾಹೇಬ' ಚಿತ್ರೀಕರಣದಲ್ಲಿ ಮನೋರಂಜನ್ ಮತ್ತು ಶಾನ್ವಿ ಶ್ರೀವಾಸ್ತವ್ 
ಸಿನಿಮಾ ಸುದ್ದಿ

ಮಳೆಯೊಂದಿಗೆ ಕಣ್ಣ ಮುಚ್ಚಾಲೆ ಆಡಿ ಇಟಲಿಯಿಂದ 'ಸಾಹೇಬ' ವಾಪಸ್

ಹಿರಿಯ ನಟ ರವಿಚಂದ್ರನ್ ಪುತ್ರ ಮನೋರಂಜನ್ ಅವರು ಪಾದಾರ್ಪಣೆ ಮಾಡುತ್ತಿರುವ 'ಸಾಹೇಬ' ಚಿತ್ರತಂಡ ಇಟಲಿಯಿಂದ ಹಿಂದಿರುಗಿದೆ. ಕೆಲವು ದೃಶ್ಯಗಳು ಮತ್ತು ಎರಡು ಹಾಡುಗಳ ಚಿತ್ರೀಕರಣಕ್ಕಾಗಿ ತಂಡ

ಬೆಂಗಳೂರು: ಹಿರಿಯ ನಟ ರವಿಚಂದ್ರನ್ ಪುತ್ರ ಮನೋರಂಜನ್ ಅವರು ಪಾದಾರ್ಪಣೆ ಮಾಡುತ್ತಿರುವ 'ಸಾಹೇಬ' ಚಿತ್ರತಂಡ ಇಟಲಿಯಿಂದ ಹಿಂದಿರುಗಿದೆ. ಕೆಲವು ದೃಶ್ಯಗಳು ಮತ್ತು ಎರಡು ಹಾಡುಗಳ ಚಿತ್ರೀಕರಣಕ್ಕಾಗಿ ತಂಡ ಇಟಲಿಗೆ ತೆರಳಿತ್ತು.

ತಮ್ಮ ಅನುಭವವನ್ನು ವಿವರಿಸುವ ನಿರ್ದೇಶಕನ ಭರತ್ ಇಟಲಿಯಲ್ಲಿ ಮುಂಗಾರು ಮಳೆಯಿಂದಾಗಿ ಚಿತ್ರೀಕರಣಕ್ಕೆ ತುಸು ಅಡೆತಡೆಯಾಯಿತಂತೆ. "ತೀವ್ರ ಮಳೆಯಿದ್ದಾಗ ನಾವು ಅಲ್ಲಿಗೆ ಹೋಗಿದ್ದೆವು. ಇಟಲಿಯಲ್ಲಿ ಹವಾಮಾನ ವಿಪರೀತವಾಗಿ ನಿಮಿಷ ನಿಮಿಷಕ್ಕೂ ಬದಲಾವಣೆಯಾಗುತ್ತದೆ. ಇವೆಲ್ಲದರ ನಡುವೆಯೂ ನಾವು ಛಲ ಬಿಡದೆ ಹಾಡುಗಳ ಮತ್ತು ಕೆಲವು ದೃಶ್ಯಗಳನ್ನು ಚಿತ್ರೀಕರಿಸಿದೆವು. ೧೨ ದಿನಗಳ ಪ್ರವಾಸದಲ್ಲಿ ಒಂದು ದಿನವನ್ನು ನಾವು ಕಳೆದುಕೊಂಡೆವು" ಎಂದು ತಿಳಿಸುತ್ತಾರೆ.

ಇಟಲಿಗೆ ತೆರಳಿದ ಮೇಲೆಯೇ ಚಿತ್ರೀಕರಣ ನಡೆಸುವ ಪ್ರದೇಶಗಳ ಬಗ್ಗೆ ನಿರ್ಧರಿಸಿ ವೆರೋನ, ಸಿಮಿಯೋನ್ ಮುಂತಾದ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಿದರಂತೆ.

ಮುಂದಿನ ಹಂತದ ಚಿತ್ರೀಕರಣ ಜುಲೈ ೨ ರಿಂದ ಪ್ರಾರಂಭವಾಗಲಿದ್ದು, ಅಕ್ಟೋಬರ್ ೭ ರಂದು ಚಿತ್ರ ಬಿಡುಗಡೆ ಮಾಡುವ ಇರಾದೆ ಹೊಂದಿದೆ ಚಿತ್ರತಂಡ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್