ರಂಗ ಕಲಾವಿದ ಹಾಗೂ ನಟ ಜೆ.ವಿ.ರಮಣ ಮೂರ್ತಿ (ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

ಟಾಲಿವುಡ್ ನಟ ಜೆ.ವಿ. ರಮಣ ಮೂರ್ತಿ ವಿಧಿವಶ

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ರಂಗ ಕಲಾವಿದ ಹಾಗೂ ನಟ ಜೆ.ವಿ.ರಮಣ ಮೂರ್ತಿಯವರು ಬುಧವಾರ ನಿಧನರಾಗಿದ್ದಾರೆ...

ಹೈದರಾಬಾದ್: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ರಂಗ ಕಲಾವಿದ ಹಾಗೂ ನಟ ಜೆ.ವಿ.ರಮಣ ಮೂರ್ತಿಯವರು ಬುಧವಾರ ನಿಧನರಾಗಿದ್ದಾರೆ.

ಶಂಕರಾಭರಣಂ ಖ್ಯಾತಿಯ ಜೆ.ವಿ.ಸೋಮಯಾಜುಲು ಅವರ ಸಹೋದರನಾಗಿರುವ ಇವರು ಹಲವು ದಿನಗಳಿಂದ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಕೊನೆಯುಸಿರೆಳೆದಿದ್ದಾರೆ.

ಮೇ.20, 1933ರಲ್ಲಿ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ಜನಿಸಿದ್ದ ಜೊನ್ನಾಲಗಡ್ಡ ವೆಂಕಟ ರಮಣ ಮೂರ್ತಿ(83)ಯವರು, ಬಾಲ್ಯದಿಂದಲೇ ನಟನಾರಂಗಕ್ಕೆ ಕಾಲಿಟ್ಟಿದ್ದರು. ಎನ್ ಜಿಒ, ಕಪ್ಪಾಲು, ಎವರು ದೊಂಗ ಮತ್ತು ಕೀರ್ತಿ ಶೇಷುಲುದಂತಹ ಹಲವು ನಾಟಕಗಳಲ್ಲಿ ನಟಸಿದ್ದಾರೆ. ಇದಲ್ಲದೆ, ಟಾಲಿವುಡ್ ನಲ್ಲಿ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಇವರು, ಬಟಸಾರಿ, ಮರೋ ಚರಿತ್ರ, ಗೋರಿಂಟಾಕು, ಆಕಲಿ ರಾಜ್ಯಂ, ಸಪ್ತಪದಿ, ಶುಭಲೇಖ, ಸಿರಿವೆನ್ನಿಲ, ಆನಂದ ಭೈರವಿ, ಕರ್ತವ್ಯಂ, ಶಂಕರ್ ದಾದಾ ಜಿಂದಾಬಾದ್ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!