'ಜೂಮ್' ಚಿತ್ರದಲ್ಲಿ ಗಣೇಶ್ ಮತ್ತು ರಾಧಿಕಾ ಪಂಡಿತ್ 
ಸಿನಿಮಾ ಸುದ್ದಿ

ಗಣೇಶ್-ರಾಧಿಕಾ ಜೋಡಿಯ 'ಜೂಮ್'; ಬಿಡುಗಡೆಯ ತವಕದಲ್ಲಿ ನಿರ್ದೇಶಕ ಪ್ರಶಾಂತ್

ನಿರ್ದೇಶಕ ಪ್ರಶಾಂತ್ ರಾಜ್ ತಮ್ಮ ಮುಂದಿನ ಚಿತ್ರವಾದ 'ಜೂಮ್' ಚಿತ್ರಕತೆ ನಡೆಯುವ ಹಿನ್ನಲೆಯೇ ಸಿನೆಮಾದ ತಳಪಾಯ ಎಂದಿದ್ದಾರೆ. ತಮ್ಮ ಹಿಂದಿನ ಚಿತ್ರ 'ಲವ್ ಗುರು'ವಿನಲ್ಲಿ ಐಟಿ ಉದ್ದಿಮೆಯ ಹಿನ್ನಲೆ,

ಬೆಂಗಳೂರು: ನಿರ್ದೇಶಕ ಪ್ರಶಾಂತ್ ರಾಜ್ ತಮ್ಮ ಮುಂದಿನ ಚಿತ್ರವಾದ 'ಜೂಮ್' ಚಿತ್ರಕತೆ ನಡೆಯುವ ಹಿನ್ನಲೆಯೇ ಸಿನೆಮಾದ ತಳಪಾಯ ಎಂದಿದ್ದಾರೆ. ತಮ್ಮ ಹಿಂದಿನ ಚಿತ್ರ 'ಲವ್ ಗುರು'ವಿನಲ್ಲಿ ಐಟಿ ಉದ್ದಿಮೆಯ ಹಿನ್ನಲೆ, 'ಗಾನ ಬಜಾನ'ದಲ್ಲಿ ನೃತ್ಯದ ಹಿನ್ನಲೆ ಇಟ್ಟುಕೊಂಡು ಕಥೆ ಹೇಳಿದ್ದ ಪ್ರಶಾಂತ್ 'ಜೂಮ್' ಚಿತ್ರದ ಹಿನ್ನೆಲೆಯಾಗಿ ಜಾಹಿರಾತು ಉದ್ದಿಮೆಯನ್ನು ಬಳಸಿದ್ದಾರಂತೆ. ಇದಕ್ಕೆ ಪೂರಕವಾಗಿ ಮೊದಲಬಾರಿಗೆ ನಟ ಗಣೇಶ್ ಮತ್ತು ರಾಧಿಕಾ ಪಂಡಿತ್ ತೆರೆಯ ಮೇಲೆ ಜೋಡಿಯಾಗಲಿದ್ದಾರೆ.

"ಸಿನೆಯಾ ಕಥೆಯ ಹಿನ್ನಲೆ ಮನೆಗೆ ಅಡಿಪಾಯವಿದ್ದಂತೆ. ಅದರ ಬಗ್ಗೆ ಸ್ಪಷ್ಟತೆ ಸಿಕ್ಕ ನಂತರ ಸಿನೆಮಾ ಮಾಡುವುದರ ಬಗ್ಗೆಯೂ ಸ್ಪಷ್ಟತೆ ಸಿಗುತ್ತದೆ. ನಾನು ಕೂಡ ಜಾಹಿರಾತು ಹಿನ್ನಲೆಯಿಂದ ಬಂದವನಾದ್ದರಿಂದ, ಗಣೇಶ್ ಮತ್ತು ರಾಧಿಕಾ ಅವರ ಶೈಲಿಯನ್ನು ತಕ್ಕಂತೆ ಬದಲಿಸಲು ಸುಲಭವಾಯಿತು" ಎನ್ನುತ್ತಾರೆ ಪ್ರಶಾಂತ್.

'ಜೂಮ್' ವಿನೂತನ ಪ್ರೇಮ ಕಥೆ ಮತ್ತು ನಿರೂಪಣೆ ಎನ್ನುವ ನಿರ್ದೇಶಕ "ಇಲ್ಲಿ ನಿರೂಪಿಸಲಾಗಿರುವ ಪ್ರೇಮ ಕಥೆ ವರ್ಷಗಳಿಂದ ಬದಲಾವಣೆಯಾಗಿರುವುದು. ಬರೀ ಪ್ರಣಯ ಭಾವನೆಗಳಿಂದ ವ್ಯಕ್ತವಾಗುವ ಪ್ರೇಮಕಥೆಗಳ ಕಾಲ ಮುಗಿದುಹೋಯಿತು. ಇಂದು ವಾಟ್ಸ್ ಆಪ್, ಫೇಸ್ಬುಕ್ ಮತ್ತು ಸೆಲ್ಫಿ ಗಳ ಮೂಲ ಪ್ರೇಮ ವ್ಯಕ್ತಪಡಿಸುವ ಕಾಲದಲ್ಲಿ ನಾವಿದ್ದೇವೆ" ಎನ್ನುತ್ತಾರೆ.

ಸಿನೆಮಾವನ್ನು ಹೆಚ್ಚು ವರ್ಣಮಯವಾಗಿ ಹಾಸ್ಯಮಯವಾಗಿ ಮಾಡಲಿಚ್ಛಿಸುವ ಪ್ರಶಾಂತ್ "ನನಗೆ ಗ್ರೇ ಇಷ್ಟವಾಗುವುದಿಲ್ಲ, ಆದುದರಿಂದ ಋಣಾತ್ಮಕತೆಯನ್ನು ಸಂಪೂರ್ಣವಾಗಿ ತೆರೆಯ ಮೇಲೆ ಇಲ್ಲವಾಗಿಸುತ್ತೇನೆ. ಸಿನೆಮಾ ನೋಡಿದ ಮೇಲೆ ಪ್ರೇಕ್ಷಕರಿಗೆ ಖುಷಿಯಾಗಬೇಕು. ಖಳ ನಾಯಕರನ್ನು ಕೂಡ ಒಳ್ಳೆಯ ರೀತಿಯಲ್ಲಿ ತೋರಿಸುವುದು ನನಗಿಷ್ಟ" ಎನ್ನುತ್ತಾರೆ.

ಈ ಸಿನೆಮಾದಲ್ಲಿ ಕಾಶಿನಾಥ್, ಸಾಧುಕೋಕಿಲಾ, ಕಾವ್ಯ ಶೆಟ್ಟಿ ಕೂಡ ನಟಿಸಿದ್ದು, ಎಸ್ ತಮನ್ ಸಂಗೀತ ನೀಡಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಚಿತ್ರಕ್ಕಿದ್ದು, ಮುಂದಿನ ಶುಕ್ರವಾರ ಸಿನೆಮಾ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT