ಬಾಲಿವುಡ್ ಸಂಗೀತ ದಂತಕತೆ ಆರ್ ಡಿ ಬರ್ಮನ್ ಸ್ಮರಣಾರ್ಥ ಗೂಗಲ್ ಡೂಡಲ್ 
ಸಿನಿಮಾ ಸುದ್ದಿ

ಬಾಲಿವುಡ್ ಸಂಗೀತ ದಂತಕತೆ ಆರ್ ಡಿ ಬರ್ಮನ್ ಸ್ಮರಣಾರ್ಥ ಗೂಗಲ್ ಡೂಡಲ್

ಬಾಲಿವುಡ್ ಸಂಗೀತದ ದಂತಕಥೆ ರಾಹುಲ್ ದೇವ್ ಬರ್ಮನ್ ಅವರ 77ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಡೂಡಲ್ ಬಿಡಿಸಿ ಮುಖಪುಟದಲ್ಲಿ ಪ್ರಕಟಿಸುವ ಮೂಲಕ ಸರ್ಚ್ ದೈತ್ಯ ಗೂಗಲ್ ಸಂಗೀತ

ಮುಂಬೈ: ಬಾಲಿವುಡ್ ಸಂಗೀತದ ದಂತಕಥೆ ರಾಹುಲ್ ದೇವ್ ಬರ್ಮನ್ ಅವರ 77ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಡೂಡಲ್ ಬಿಡಿಸಿ ಮುಖಪುಟದಲ್ಲಿ ಪ್ರಕಟಿಸುವ ಮೂಲಕ ಸರ್ಚ್ ದೈತ್ಯ ಗೂಗಲ್ ಸಂಗೀತ ರಸಿಕರ ಹೃದಯಗಳನ್ನು ಗೆದ್ದಿದೆ. 
ಜೂನ್ 27 1939 ರಲ್ಲಿ ಕೋಲ್ಕತ್ತಾದಲ್ಲಿ ಜನಿಸಿದ ಆರ್ ಡಿ ಬರ್ಮನ್, ತಮ್ಮ ವೃತ್ತಿಜೀವನದ ಶಿಖರಪ್ರಾಯದಲ್ಲಿದ್ದಾಗಲೇ ತಮ್ಮ 54ನೇ ವಯಸ್ಸಿನಲ್ಲಿ 1994 ಜನವರಿ 4 ರಂದು ನಿಧನರಾಗಿದ್ದರು. 
ಎಂದಿಂದಿಗೂ ನೆನಪಿನಲ್ಲುಳಿಯುವ ಅಸಂಖ್ಯಾತ ಸಿನೆಮಾ ಹಾಡುಗಳಿಗೆ ಟ್ಯೂನ್ ಒದಗಿಸಿದ್ದ ಆರ್ ಡಿ ಬರ್ಮನ್ ಅವರ ತಂದೆ ಸಚಿನ್ ದೇವ್ ಬರ್ಮನ್ ಕೂಡ ಖ್ಯಾತ ಸಂಗೀತ ನಿರ್ದೇಶಕ. 
"ವಿಶ್ವದ ಎಲ್ಲ ರೀತಿಯ ಸಂಗೀತದಿಂದ ಸ್ಫುರ್ತಿ ಪಡೆದಿದ್ದ ಆರ್ ಡಿ ಬರ್ಮನ್ ಬಾಲಿವುಡ್ ನಲ್ಲಿ ಕ್ರಾಂತಿ ಕಹಳೆ ಊದಿದವರು" ಎಂದು ಗೂಗಲ್ ಹೇಳಿದೆ. 
ಅವರು ಸ್ವತಂತ್ರವಾಗಿ ಸಂಗೀತ ನೀಡಿದ್ದ 'ಛೋಟೆ ನವಾಬ್' 1961 ರಲ್ಲಿ ತೆರೆ ಕಂಡಿತ್ತು. ನಂತರ 350ಕ್ಕೂ ಹೆಚ್ಚು ಸಿನೆಮಾಗಳಿಗೆ ಸಂಗೀತ ನೀಡಿದ ಬರ್ಮನ್ 'ಶೋಲೆ', 'ಕಟಿಪತಂಗ್', 'ತೀಸ್ರಿ ಮಂಜಿಲ್', 'ಸನಮ್ ತೇರೇ ಕಸಮ್', 'ಸತ್ತೆ ಪೆ ಸತ್ತಾ', 'ರಾಕಿ', 'ಆಪ್ ಕಿ ಕಸಮ್' ಮುಂತಾದ ಬ್ಲಾಕ್ ಬಸ್ಟರ್ ಸಿನೆಮಾಗಳ ಸಂಗೀತ ನಿರ್ದೇಶಕ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT