ನಟ ಚೇತನ್ ಕುಮಾರ್ 
ಸಿನಿಮಾ ಸುದ್ದಿ

ಸಿನೆಮಾಗಳಿಗೆ ಹಿಂದಿರುಗುವ ಕಾಲ ಬಂದಿದೆ: ನಟ ಚೇತನ್

2007ರಲ್ಲಿ 'ಆ ದಿನಗಳು' ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಅಪಾರ ಬೇಡಿಕೆಯಿದ್ದರೂ ಇಲ್ಲಿಯವರೆಗೆ ಕೇವಲ 6 ಸಿನೆಮಾಗಳಲ್ಲಿ ನಟಿಸಿ ಸಿನೆಮಾರಂಗದಿಂದ ದೂರವುಳಿದಿದ್ದ

ಬೆಂಗಳೂರು: 2007ರಲ್ಲಿ  'ಆ ದಿನಗಳು' ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಅಪಾರ ಬೇಡಿಕೆಯಿದ್ದರೂ ಇಲ್ಲಿಯವರೆಗೆ ಕೇವಲ 6 ಸಿನೆಮಾಗಳಲ್ಲಿ ನಟಿಸಿ ಸಿನೆಮಾರಂಗದಿಂದ ದೂರವುಳಿದಿದ್ದ ನಟ ಚೇತನ್ ಕುಮಾರ್ ಮತ್ತೆ ಚಿತ್ರರಂಗಕ್ಕೆ ಹಿಂದಿರುಗಲು ಸಕಾಲ ಎಂದಿದ್ದಾರೆ. 
ಅವರ ಕೊನೆಯ ಚಿತ್ರ ಮೂರು ವರ್ಷದ ಹಿಂದೆ ನಟಿಸಿದ್ದ 'ಮೈನಾ' ಕೂಡ ಒಳ್ಳೆಯ ಪ್ರದರ್ಶನ ಕಂಡಿತ್ತು, ಈಗ ಮತ್ತೊಂದು ರಿಮೇಕ್ ಮೂಲಕ ಸಿನೆಮಾಗಳಿಗೆ ಮರಳಿದ್ದಾರೆ ಚೇತನ್. 
ತಾವು ನಟಿಸುವ ಪ್ರತಿ ಸಿನೆಮಾದ ಆಯ್ಕೆಯ ಬಗ್ಗೆ ಸದಾ ಎಚ್ಚರದಿಂದಿರುವ ಚೇತನ್ "ಸುಹಾಸ್ ಶ್ರೀವಾಲ್ಕರ್ ಅವರ ಮರಾಠಿ ಕಾದಂಬರಿ 'ದುನಿಯಾದ್ರಿ'ಯ ಅಳವಡಿಕೆ ಈ ಸಿನೆಮಾ. ಅದೇ ಹೆಸರಿನ ಮರಾಠಿ ಸಿನೆಮಾ ಕೂಡ ಬಂದಿದೆ. ಬಹಳ ಗಂಭೀರವಾಗಿ ಇದನ್ನು ದೃಶ್ಯ ಮಾಧ್ಯಮಕ್ಕೆ ತಂದಿದ್ದರು" ಎನ್ನುತ್ತಾರೆ ಚೇತನ್. 
ನಟನೆಗೆ ತಮ್ಮ ಆದ್ಯತೆಯಾಗಿದ್ದರು ತೆಗೆದುಕೊಂಡಿರುವ ಈ ವಿರಾಮದಲ್ಲಿ ಸಮಾಜಮುಖಿ ಕಾರ್ಯಗಳತ್ತ ತಮ್ಮನ್ನು ತೊಡಗಿಸಿಕೊಂಡಿದ್ದನ್ನು ತಿಳಿಸುತ್ತಾರೆ. "ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಸಿನೆಮಾಗಳು ಹೊರಬರುತ್ತಿವೆ. ತಿಥಿ ಅದಕ್ಕೆ ಕ್ಲಾಸಿಕ್ ಉದಾಹರಣೆ. ಕಳೆದ ವರ್ಷಗಳಲ್ಲಿ ನನಗೆ ಹಲವಾರು ಅವಕಾಶಗಳು ಸಿಕ್ಕಿದ್ದವು. ಆದರೆ ಸಮಾಜ ಕಾರ್ಯಗಳತ್ತ ನನ್ನನ್ನು ತೊಡಗಿಸಿಕೊಂಡಿದ್ದೇನೆ. ವಿದ್ಯಾರ್ಥಿಗಳ ಮತ್ತು ಯುವಕರ ಸಬಲೀಕರಣ ಕಾರ್ಯಕ್ರಮಸಿನೆಮಾಗಳಿಗೆ ಹಿಂದಿರುಗವ ಸಮಯ ಬಂದಿದೆ. ಶೀಘ್ರವೇ ಮತ್ತೊಂದು ಸಿನೆಮಾವನ್ನು ಅಂತಿಮಗೊಳಿಸಲಿದ್ದೇನೆ" ಎನ್ನುತ್ತಾರೆ. 
ಈ ಮರಾಠಿ ರಿಮೇಕ್ ಸಿನೆಮಾದಲ್ಲಿ ಚೇತನ್ ಜೊತೆಗೆ ಮೇಘನಾ ರಾಜ್, ರಾಜವರ್ಧನ್, ಸುಶ್ಮಿತಾ ಜೋಶಿ ಮುಂತಾದವರು ನಟಿಸಲಿದ್ದಾರೆ. ಕುಮರೇಶ್ ಸಿನೆಮಾ ನಿರ್ದೇಶಿಸಲಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT