ಪೋರ್ಚುಗಲ್ ನಲ್ಲಿ ಚಿತ್ರೀಕರಣದ ವೇಳೆಯಲ್ಲಿ ಪುನೀತ್ ರಾಜಕುಮಾರ್ ಮತ್ತು ರಚಿತಾ ರಾಮ್ 
ಸಿನಿಮಾ ಸುದ್ದಿ

ಪುನೀತ್ ಹುಟ್ಟುಹಬ್ಬಕ್ಕೆ 'ಚಕ್ರವ್ಯೂಹ' ಆಡಿಯೋ ಬಿಡುಗಡೆ

ನಟ ಪುನೀತ್ ರಾಜಕುಮಾರ್ ತಮ್ಮ ಹುಟ್ಟುಹಬ್ಬವನ್ನು ಈ ವರ್ಷ ವಿನೂತನವಾಗಿ ಆಚರಿಸಿಕೊಳ್ಳಲಿದ್ದಾರೆ. ತಮ್ಮ ನಟನೆಯ 'ಚಕ್ರವ್ಯೂಹ' ಸಿನೆಮಾದ ಆಡಿಯೋ ಅವರ

ಬೆಂಗಳೂರು: ನಟ ಪುನೀತ್ ರಾಜಕುಮಾರ್ ತಮ್ಮ ಹುಟ್ಟುಹಬ್ಬವನ್ನು ಈ ವರ್ಷ ವಿನೂತನವಾಗಿ ಆಚರಿಸಿಕೊಳ್ಳಲಿದ್ದಾರೆ. ತಮ್ಮ ನಟನೆಯ 'ಚಕ್ರವ್ಯೂಹ' ಸಿನೆಮಾದ ಆಡಿಯೋ ಅವರ ಹುಟ್ಟುಹಬ್ಬವಾದ ಮಾರ್ಚ್ ೧೭ ರಂದೇ ಬಿಡುಗಡೆಯಾಗುತ್ತಿರುವುದು ವಿಶೇಷ. ಆಡಿಯೋ ಬಿಡುಗಡೆಯಲ್ಲಿ ಹಿರಿಯ ನಟ ಅಂಬರೀಶ್ ಕೂಡ ಭಾಗಿಯಾಗಲಿದ್ದಾರೆ.

ಅಂಬರೀಶ್ ಆಡಿಯೋ ಬಿಡುಗಡೆಯಲ್ಲಿ ಭಾಗಿಯಾಗುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ ನಿರ್ಮಾಪಕ ಎನ್ ಕೆ ಲೋಹಿತ್, "'ಚಕ್ರವ್ಯೂಹ' ಚಿತ್ರದ ಮೂಲ ಶೀರ್ಷಿಕೆ ಅಂಬರೀಶ್ ಅವರದ್ದೇ ಆಗಿರುವುದರಿಂದ ಆಡಿಯೋ ಬಿಡುಗಡೆ ಅವರೇ ಸೂಕ್ತ ಎಂದೆನಿಸಿತು. ಅವರ ಚಿತ್ರ ೧೯೮೩ ರಲ್ಲಿ ಬಿಡುಗಡೆಯಾಗಿತ್ತು"ಎನ್ನುತ್ತಾರೆ.

"ಬೆಂಗಳೂರಿನಲ್ಲಿ ಆಡಿಯೋ ಬಿಡುಗಡೆ ವೈಭವಯುತವಾಗಿ ನಡೆಯಲಿದೆ. ಆ ಆಡಿಯೋ ಬಿಡುಗಡೆಯಲ್ಲಿ ಸಾರ್ವಜನಿಕರು ನಾಯಕ ನಟನ ಹುಟ್ಟು ಹಬ್ಬದ ಸಮಾರಂಭಕ್ಕೂ ಪ್ರೇಕ್ಷಕರಾಗಿರುತ್ತಾರೆ. ಆಹ್ವಾನದ ಮೂಲಕ ಕಾರ್ಯಕ್ರಮ ನಡೆಸಲಾಗುವುದು" ಎನ್ನುತ್ತಾರೆ ಲೋಹಿತ್.

ಎಸ್ ಎಸ್ ತಮನ್ ಈ ಸಿನೆಮಾಗೆ ಸಂಗೀತ ನೀಡಿದ್ದು, ಆನಂದ್ ಆಡಿಯೊದಿಂದ ಆಲ್ಬಮ್ ಹೊರಬರಲಿದೆ. ಸಿನೆಮಾ ಏಪ್ರಿಲ್ ೮ಕ್ಕೆ ಬಿಡುಗಡೆಯಾಗುವ ಸಾಧ್ಯತೆಯಿದೆ.

ಈ ಮಧ್ಯೆ 'ಚಕ್ರವ್ಯೂಹ' ಸಿನೆಮಾಗಾಗಿ ಜೂನಿಯರ್ ಎನ್ ಟಿ ಆರ್ ಹಾಡಿರುವ 'ಗೆಳೆಯಾ ಗೆಳೆಯಾ' ಹಾಡು ಕನ್ನಡ ಮತ್ತು ತೆಲುಗು ಪ್ರೇಕ್ಷಕರ ನಡುವೆ ವೈರಲ್ ಆಗಿದೆಯಂತೆ. ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾದ ೨೦ ಘಂಟೆಗಳಲ್ಲಿ ವೈರಲ್ ಆಗಿ ೧ ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!