ದರ್ಶನ್ ಮತ್ತು ವಿಜಯಲಕ್ಷ್ಮಿ 
ಸಿನಿಮಾ ಸುದ್ದಿ

ನಟ ದರ್ಶನ್-ವಿಜಯಲಕ್ಷ್ಮಿ ಸಹಮತದ ವಿಚ್ಛೇದನಕ್ಕೆ ಅಡ್ಡಿ ಇರುವುದು ಆಸ್ತಿ ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಳೆದ ಎರಡು ವರ್ಷಗಳಿಂದ ದರ್ಶನ್ ತಮ್ಮ ಪತ್ನಿಯ ಜತೆ ಸಹಮತದ ವಿಚ್ಛೇದನಕ್ಕಾಗಿ ಪ್ರಯತ್ನಿಸುತ್ತಿದ್ದಾರೆ. ಆದರೆ ಆಸ್ತಿ ವಿಚಾರ ಅದಕ್ಕೆ ..

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಳೆದ ಎರಡು ವರ್ಷಗಳಿಂದ ದರ್ಶನ್ ತಮ್ಮ ಪತ್ನಿಯ ಜತೆ ಸಹಮತದ ವಿಚ್ಛೇದನಕ್ಕಾಗಿ ಪ್ರಯತ್ನಿಸುತ್ತಿದ್ದಾರೆ.  ಆದರೆ  ಆಸ್ತಿ ವಿಚಾರ ಅದಕ್ಕೆ ತಡೆಯಾಗಿದೆ ಎನ್ನಲಾಗಿದೆ.

ದರ್ಶನ್ ಅವರ ಆಸ್ತಿಯ ಶೇ, 75ರಷ್ಟು  ಭಾಗ ಪತ್ನಿ ವಿಜಯಲಕ್ಷ್ಮಿ ಹೆಸರಿನಲ್ಲಿಯೇ ಇದೆ. ಈ ಆಸ್ತಿ ವಿಚಾರಕ್ಕಾಗಿ ಪತಿ-ಪತ್ನಿಯರ ನಡುವೆ ಸದಾ ಜಗಳವಾಗುತ್ತಿದ್ದು ಇಬ್ಬರು ಕೂಡ ವಿಚ್ಛೇದನ ಪಡೆದುಕೊಳ್ಳುವ ಕುರಿತು ಸಹ ನಿಲುವು ತಳೆದಿದ್ದರು ಎಂದು ತಿಳಿದು ಬಂದಿದೆ. ಆದರೆ ಮುಂದಿಟ್ಟುಕೊಂಡ ಪ್ರಸ್ತಾವನೆಗಳಿಗೆ ಪರಸ್ಪರ ಸಮ್ಮತಿ ನೀಡದ ಕಾರಣ ವಿಚ್ಛೇದನದ ವಿಚಾರ ಅರ್ಧಕ್ಕೆ ನಿಂತಿದೆ. ಆಸ್ತಿಗಾಗಿ ಪದೇ ಪದೇ ದಂಪತಿ ಮಧ್ಯೆ ನಿರಂತರ ಗಲಾಟೆ ನಡೆಯುತ್ತಿದೆ.

ನಾನು ಮಾಡಿರುವ ಆಸ್ತಿ ವಾಪಸ್ ಕೊಡು ಎಂದು ದರ್ಶನ್ ಕೇಳಿದ್ದಾರೆ. ಅದಕ್ಕೆ ವಿಜಯಲಕ್ಷ್ಮಿ ಒಪ್ಪಿಲ್ಲ. ಸೆಟಲ್ ಮೆಂಟ್ ವಿಚಾರವಾಗಿ ಹಿರಿಯರ ಬಳಿ ಮೂರು ಬಾರಿ ಚರ್ಚೆಯಾದರೂ ಯಾವುದೇ ಪ್ರಯೋಜನವಾಗಿಲ್ಲ. ಯಾವುದೇ ನಿರ್ಣಯಕ್ಕೆ ಬರಲು ದಂಪತಿ ವಿಫಲರಾಗಿದ್ದರು ಎಂದು ಹೇಳಲಾಗುತ್ತಿದೆ.
 
ಎಚ್ ಎಸ್ಆರ್ ಲೇ ಔಟ್‌ನಲ್ಲಿರುವ ಒಂದು ಸೈಟ್, ಚಂದ್ರಾ ಲೇಔಟ್‌ನಲ್ಲಿರುವ ವಾಣಿಜ್ಯ ಮಳಿಗೆ ಮತ್ತು ಒಂದು ಕಾರ್ ನೀಡುವುದಾಗಿ ದರ್ಶನ್ ಪತ್ನಿ ಮುಂದೆ ಪ್ರಸ್ತಾಪಿಸಿದ್ದರು. ಆದರೆ ವಿಜಯಲಕ್ಷ್ಮಿ ಇದಕ್ಕೆ ಒಪ್ಪದೇ ಇನ್ನೂ ಹೆಚ್ಚಿನ ಆಸ್ತಿ ಬೇಕೆಂದು ಪಟ್ಟು ಹಿಡಿದಿದ್ದಾರೆ.

ಮಗನನ್ನು ತನ್ನ ಸುಪರ್ದಿಗೆ ಕೊಡಬೇಕೆಂದು ದರ್ಶನ ಪ್ರಸ್ತಾವಕ್ಕೆ ಪತ್ನಿ ಸಮ್ಮತಿಸಿಲ್ಲ. ಹೀಗಾಗಿ ದರ್ಶನ್ ಇಬ್ಬರು ಯಾವುದೇ ಖಚಿತ ನಿರ್ಣಯಕ್ಕೆ ಬರಲು ವಿಫಲರಾಗಿದ್ದಾರೆ ಎಂದು ತಿಳಿದು ಬಂದಿದೆ. ಮಾತುಕತೆ ವಿಫಲವಾದ ಬಳಿಕ ವಿಚ್ಛೇದನಕ್ಕೆ ನಾನು ಒಪ್ಪಿಗೆ ಕೊಡಲ್ಲ. ನೀವು ಬೇಕಾದರೆ ಪಡೆದುಕೊಳ್ಳಿ ಎಂದು ವಿಜಯಲಕ್ಷ್ಮಿ ಹೇಳಿದ್ದಾರಂತೆ. ಸದ್ಯ ವಿಜಯಲಕ್ಷ್ಮಿ ವಾಸಿಸುತ್ತಿರುವ ಫ್ಲಾಟ್ ಬಾಡಿಗೆಯನ್ನು ಸಹ ದರ್ಶನ್ ಅವರೇ ಕಟ್ಟುತ್ತಿದ್ದಾರಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!