ಸಿನಿಮಾ ಸುದ್ದಿ

ಚೊಚ್ಚಲ ಸಿನೆಮಾಗೆ ಕಲಾತ್ಮಕತೆಯ ಮೊರೆ ಹೋದ ಪ್ರದೀಪ್ ವರ್ಮಾ

Guruprasad Narayana

ಬೆಂಗಳೂರು: ಪ್ರಖ್ಯಾತ ಕಲಾವಿದ ಬಿ ಕೆ ಎಸ್ ವರ್ಮಾ ಅವರ ಪುತ್ರ ಪ್ರದೀಪ್ ವರ್ಮಾ ತಮ್ಮ ನಿರ್ದೇಶನದ ಚೊಚ್ಚಲ ಚಿತ್ರ 'ಊರ್ವಿ'ಗಾಗಿ ಕಲಾತ್ಮಕತೆಯ ವಿಭಿನ್ನ ಸೃಷ್ಟಿಗೆ ಮೊರೆ ಹೋಗಿದ್ದಾರೆ.

ಮೊದಲ ಹಂತದ ಚಿತ್ರೀಕರಣಕ್ಕಾಗಿ, ತಾವರೆಕೆರೆಯ ಭೂತ ಬಂಗಲೆಯನ್ನು ಕಲಾ ವಸ್ತುಸಂಗ್ರಹಾಲಯವಾಗಿ ಮಾರ್ಪಡಿಸಿ ಅದನ್ನು ಸ್ವರ್ಗದ ಮನೆ ಎಂದು ಹೆಸರಿಸಿದ್ದಾರೆ. ಇದಕ್ಕಾಗಿ ನಿರ್ಮಾಪಕರು ೧೬ ಲಕ್ಷ ವ್ಯಯಿಸಿದ್ದು, ೧೬ ದಿನಗಳ ಕೆಲಸ ಹಿಡಿಯಿತಂತೆ. ಪ್ರದೀಪ್ ಅವರ ಸೂಚನೆಯಂತೆ, ಕಲಾ ನಿರ್ದೇಶಕ ಬಾಬು ಖಾನ್ ಈ ಮಾರ್ಪಾಡನ್ನು ಸಾಧ್ಯವಾಗಿಸಿದ್ದಾರೆ,

"ನಾವು ನಡೆಸಲಿರುವ ಮೊದಲ ಹಂತದ ಚಿತ್ರೀಕರಣದಲ್ಲಿ, ಸಿನೆಮಾದ ತಿರುವು ಪಡೆಯಲಿದ್ದು ಅದು ಘಟಿಸುವುದು ಈ ಪ್ರದೇಶದಲ್ಲೇ. ಮತ್ತು ಈ ಮನೆಯೇ ಪಾತ್ರವಾಗುತ್ತದೆ. ಆದುದರಿಂದ ಮನೆಯನ್ನು ಕಲಾತ್ಮಕವಾಗಿ ಮಾರ್ಪಾಡು ಮಾಡುವ ಅವಶ್ಯಕತೆ ಇತ್ತು" ಎಂದು ನಿರ್ದೇಶಕ ವಿವರಿಸುತ್ತಾರೆ.

ಬಿ ಕೆ ಎಸ್ ವರ್ಮಾ ಅವರ ಅತಿ ದೊಡ್ಡ ಕಲಾಕೃತಿಗಳನ್ನು ಬಳಸಿ ಮನೆಯನ್ನು ಸಿಂಗರಿಸಲಾಗಿದೆಯಂತೆ. "ಈ ಎಲ್ಲಾ ಕಲಾಕೃತಿಗಳೂ ಸಿನಮಾದ ವಿಷಯಕ್ಕೆ ಸಂಬಂಧಿಸಿರುವವೇ. ಈ ಮನೆಯನ್ನು ಸ್ವರ್ಗದ ಮನೆ ಎಂದು ಕರೆದದ್ದು ಏಕೆಂದರೆ ಮೂಲ ಹೆಸರು ಸಿನೆಮಾದ ಶೀರ್ಷಿಕೆ ಮತ್ತು ಕಥೆಗೆ ಸರಿ ಹೊಂದಲಿಲ್ಲ" ಎಂದು ವಿವರಿಸುತ್ತಾರೆ ಪ್ರದೀಪ್.

೨೦ ದಿನಗಳ ಕಾಲದವರೆಗೆ ನಡೆದ ಮೊದಲ ಹಂತದ ಚಿತ್ರೀಕರಣದಲ್ಲಿ ಶ್ವೇತಾ ಪಂಡಿತ್, ಶ್ರದ್ಧಾ ಶ್ರೀನಾಥ್, ಜಾಹ್ನವಿ ಮತ್ತು ಅಚ್ಯುತ್ ಕುಮಾರ್ ಭಾಗವಿಸಿದ್ದಾರೆ. "ಮಾರ್ಚ್ ೨೮ ರಿಂದ ಪ್ರಾರಂಭವಾಗುವ ಮುಂದಿನ ಹಂತದ ಚಿತ್ರೀಕರಣದಲ್ಲಿ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಶೃತಿ ಹರಿಹರನ್ ಭಾಗವಹಿಸಲಿದ್ದಾರೆ" ಎಂದು ವಿವರಿಸುತ್ತಾರೆ ಪ್ರದೀಪ್.

SCROLL FOR NEXT