ನಟ ಶಿವರಾಜ್ ಕುಮಾರ್ 
ಸಿನಿಮಾ ಸುದ್ದಿ

ಶಿವರಾಜ್ ಕುಮಾರ್ ಅವರ ಮುಂದಿನ ಚಿತ್ರ 'ಮೈ ನೇಮ್ ಇಸ್ ಆಂಜಿ'

ಮೂರು ದಶಕಗಳ ಕಾಲ ೧೧೦ಕ್ಕಿಂತಲೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿರುವ ಹಿರಿಯ ನಟ ಶಿವರಾಜ್ ಕುಮಾರ್ ಅವರಿಗೆ ಒಳ್ಳೆಯ ನಿರ್ದೇಶಕ ಜೋಡಿ ಸಿಗುವುದು ಸವಾಲೇ.

ಬೆಂಗಳೂರು: ಮೂರು ದಶಕಗಳ ಕಾಲ ೧೧೦ಕ್ಕಿಂತಲೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿರುವ ಹಿರಿಯ ನಟ ಶಿವರಾಜ್ ಕುಮಾರ್ ಅವರಿಗೆ ಒಳ್ಳೆಯ ನಿರ್ದೇಶಕ ಜೋಡಿ ಸಿಗುವುದು ಸವಾಲೇ. ಆದರೆ ಇದಕ್ಕೆ ಅಪವಾದ ಎಂದರೆ ನಿರ್ದೇಶಕ ಹರ್ಷ. 'ಭರ್ಜರಿ' ಮತ್ತು 'ವಜ್ರಕಾಯ' ಸಿನೆಮಾಗಳಲ್ಲಿ ಹರ್ಷ ಅವರ ನಿರ್ದೇಶನದಲ್ಲಿ ನಟಿಸಿರುವ ನಟ ಈಗ ಮೂರನೇ ಸಿನೆಮಾ 'ಮೈ ನೇಮ್ ಇಸ್ ಆಂಜಿ' ಚಿತ್ರಕ್ಕೆ ಸಿದ್ಧರಾಗಿದ್ದಾರೆ. ಹರ್ಷ ನಿರ್ದೇಶಕರಾದ ಮೇಲೆ ಆಂಜಿ, ಆಂಜನೇಯನ ಸಣ್ಣ ಹೆಸರು ಎಂದು ವಿಶೇಷವಾಗಿ ಹೇಳಬೇಕಿಲ್ಲ.

ಇದರ ನಿರ್ಮಾಪಕ ಜಯಣ್ಣ. "ಜಯಣ್ಣ ಈಗಾಗಲೇ ಶಿವರಾಜ್ ಕುಮಾರ್ ಅವರ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ನಿರ್ಮಿಸುತ್ತಿದ್ದು, ನಟನ ವೃತ್ತಿಪರತೆ ಮತ್ತು ಶಿಸ್ತು ನೋಡಿ ಅವರ ಮೇಲಿನ ಗೌರವ ಇಮ್ಮಡಿಯಾಗಿ ಮತ್ತೊಂದು ಯೋಜನೆಯನ್ನು ನಿರ್ಮಿಸಲು ಮುಂದಾಗಿದ್ದಾರೆ.

'ಜೈ ಮಾರುತಿ ೮೦೦ರಲ್ಲಿ ಹರ್ಷ ಕೆಲಸ ಮಾಡುವ ವಿಧಾನವನ್ನು ನೋಡಿರುವ ಜಯಣ್ಣ, ಈ ಜೋಡಿಯ ಮೇಲೆ ಅಪಾರ ಭರವಸೆ ಇಟ್ಟಿದ್ದಾರೆ" ಎಂದು ಮೂಲಗಳು ತಿಳಿಸಿವೆ.

ಸದ್ಯಕ್ಕೆ 'ಜೈ ಮಾರುತಿ ೮೦೦' ಬಿಡುಗಡೆಗೆ ಹರ್ಷ ಸಿದ್ಧರಾಗುತ್ತಿದ್ದು, ದುನಿಯಾ ವಿಜಯ್ ಅವರ ಜೊತೆಗೆ ಮುಂದಿನ ಯೋಜನೆ ಕೈಗೆತ್ತಿಕೊಳ್ಳಲಿದ್ದಾರೆ. 'ಸಂತೆಯಲ್ಲಿ ನಿಂತ ಕಬೀರ' ಮುಗಿಸಿರುವ ಶಿವಣ್ಣ, ನಂತರ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಈ ಎಲ್ಲ ಪೂರ್ವನಿಯೋಜಿತ ಯೋಜನೆಗಳು ಮುಗಿದ ಮೇಲಷ್ಟೇ ಇಬ್ಬರೂ ಒಟ್ಟಿಗೆ 'ಮೈ ನೇಮ್ ಇಸ್ ಅಂಜಿ'ಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ತಿಳಿಸಿವೆ ಮೂಲಗಳು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT