ಪುನೀತ್ ರಾಜ್ ಕುಮಾರ್ 
ಸಿನಿಮಾ ಸುದ್ದಿ

ಪುನೀತ್ ರ ರಾಜ್‍ಕುಮಾರ ಚಿತ್ರದಲ್ಲಿ ಎರಡು ಕಥೆ!

ಮಿಸ್ಟರ್ ಆ್ಯ೦ಡ್ ಮಿಸಸ್ ರಾಮಚಾರಿ ಚಿತ್ರದ ಮೂಲಕ ಗಾ೦ಧಿನಗರದಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಭರವಸೆಯ ನಿರ್ದೇಶಕರಾಗಿದ್ದಾರೆ. ಅವರ ಮುಂದಿನ ಚಿತ್ರ...

ಮಿಸ್ಟರ್ ಆ್ಯ೦ಡ್ ಮಿಸಸ್ ರಾಮಚಾರಿ ಚಿತ್ರದ ಮೂಲಕ ಗಾ೦ಧಿನಗರದಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಭರವಸೆಯ ನಿರ್ದೇಶಕರಾಗಿದ್ದಾರೆ. ಅವರ ಮುಂದಿನ ಚಿತ್ರ ರಾಜಕುಮಾರ ಮೂಲಕ ಇನ್ನಷ್ಟು ನಿರೀಕ್ಷೆಗಳನ್ನು ಹೆಚ್ಚಿಸಿದ್ದು, ಲೇಟೆಸ್ಟ್ ಸುದ್ದಿ ಎನ್ನೆಂದರೆ ರಾಜಕುಮಾರ ಚಿತ್ರದಲ್ಲಿ ನಿರ್ದೇಶಕರು ಎರಡು ಕಥೆಗಳನ್ನು ಹೇಳಲಿದ್ದಾರೆ.

ಪುನೀತ್ ರಾಜ್‍ಕುಮಾರ್ ನಾಯಕರಾಗಿರುವ ರಾಜಕುಮಾರ ಚಿತ್ರದ ಮೂಲಕ ಇ೦ಥದೊ೦ದು ಗೊ೦ದಲಮಯ ಪ್ರಯತ್ನ ಮಾಡಲಿದ್ದಾರ೦ತೆ ನಿದೇ೯ಶಕ ಸ೦ತೋಷ್. ಚಿತ್ರದ ಮೊದಲಾಧ೯ ಮತ್ತು ದ್ವಿತಿಯಾಧ೯ದಲ್ಲಿ ಬೇರೆ ಬೇರೆ ಕಥೆಗಳು ತೆರೆದುಕೊಳ್ಳುತ್ತವೆ. ಆ ಎರಡೂ ಕಥೆಗಳನ್ನು ಪುನೀತ್ ಪಾತ್ರ ಒ೦ದುಗೂಡಿಸುತ್ತದೆ. ಪೂತಿ೯ ಸಿನಿಮಾ ನೋಡಿದರೆ ಮಾತ್ರ ಅಸಲಿ ವಿಷಯ ಗೊತ್ತಾಗುತ್ತದೆ ಎ೦ಬುದು ಸ೦ತೋಷ್ ಹೇಳಿಕೆ.

ರಾಮಾಚಾರಿ ಚಿತ್ರಕ್ಕೂ ಮೊದಲ ಚಿತ್ರದ ಕಥೆ ರೆಡಿಯಾಗಿತಂತೆ ಆದರೆ ಮೊದಲ ಚಿತ್ರದಲ್ಲೇ ರಿಸ್ಕ್ ತೆಗೆದುಕೊಳ್ಳುವುದು ಬೇಡ ಅ೦ತ 2ನೇ ಚಿತ್ರದಲ್ಲಿ ಇ೦ಥ ಪ್ರಯೋಗ ಮಾಡಲು ಹೊರಟಿದ್ದಾರೆ ಸ೦ತೋಷ್. ಇತ್ತೀಚೆಗಷ್ಟೇ ಮುಹೂತ೯ ಆಚರಿಸಿಕೊ೦ಡ ರಾಜಕುಮಾರನಿಗೆ ಏಪ್ರಿಲ್‍ನಿ೦ದ ಶೂಟಿ೦ಗ್ ಶುರುವಾಗಲಿದ್ದು, ಅಕ್ಟೋಬರ್ ವೇಳೆಗೆ ಮುಕ್ತಾಯವಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT