ನಟಿ ರಚಿತಾ ರಾಮ್ 
ಸಿನಿಮಾ ಸುದ್ದಿ

'ಚಕ್ರವ್ಯೂಹ'ದ 'ನಿಂತಲ್ಲಿ ನಿಲಲಾರೆ' ವಿಶೇಷ ಹಾಡು: ರಚಿತಾ ರಾಮ್

ತಾವು ೨೦೧೩ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಾಗಿಲಿಂದಲು ದೊಡ್ಡ ಬಜೆಟ್ ನ ಯಶಸ್ವಿ ಸಿನೆಮಾಗಳಲ್ಲೇ ನಟಿಸಿ ಬಂದಿರುವ ನಟಿ ರಚಿತಾ ರಾಮ್ ಈಗ ಮತ್ತೊಂದು ಬಹು ನಿರೀಕ್ಷಿತ...

ಬೆಂಗಳೂರು: ತಾವು ೨೦೧೩ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಾಗಿಲಿಂದಲು ದೊಡ್ಡ ಬಜೆಟ್ ನ ಯಶಸ್ವಿ ಸಿನೆಮಾಗಳಲ್ಲೇ ನಟಿಸಿ ಬಂದಿರುವ ನಟಿ ರಚಿತಾ ರಾಮ್ ಈಗ ಮತ್ತೊಂದು ಬಹು ನಿರೀಕ್ಷಿತ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. 'ಬುಲ್ ಬುಲ್', 'ದಿಲ್ ರಂಗೀಲಾ', 'ಅಂಬರೀಶ', 'ರನ್ನ', 'ರಥಾವರ' ಸಿನೆಮಾಗಳಲ್ಲಿ ನಟಿಸಿದ್ದ ನಟಿ ಈಗ ೨೦೧೬ ರಲ್ಲಿ 'ಚಕ್ರವ್ಯೂಹ' ಮತ್ತು 'ಭರ್ಜರಿ' ಸಿನೆಮಾಗಳಲ್ಲಿ ನಟಿಸಿದ್ದು ಮೊದಲಿಗೆ ಪುನೀತ್ ರಾಜಕುಮಾರ್ ಜೊತೆಗೆ ನಟಿಸಿರುವ ಚಕ್ರವ್ಯೂಹದ ಬಿಡುಗಡೆಯ ತವಕದಲ್ಲಿದ್ದಾರೆ.

'ಚಕ್ರವ್ಯೂಹ'ದ ಸಿನೆಮಾದ ಹಾಡುಗಳ ಅಲ್ಬಂ ಕಳೆದ ವಾರ ಮಾರುಕಟ್ಟೆಗೆ ಬಂದಿದ್ದು, ಅದರ ಕೊನೆಯ ಹಾಡು ಸೋಮವಾರ ಮತ್ತು ಮಂಗಳವಾರ ಚಿತ್ರೀಕರಣಗೊಳ್ಳಲಿದ್ದು ಅಲ್ಲಿಗೆ ಚಿತ್ರೀಕರಣ ಸಂಪುರ್ಣಗೊಳ್ಳಲಿದೆಯಂತೆ. ಇದರ ಬಗ್ಗೆ ಹರ್ಷ ವ್ಯಕ್ತಪಡಿಸುವ ರಚಿತಾ "ನಾನು ಪುನೀತ್ ರಾಜಕುಮಾರ್ ಜೊತೆಗೆ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದೇನೆ. 'ನಿಂತಲ್ಲಿ ನಿಲಲಾರೆ' ಹಾಡಿನ ಬಗ್ಗೆ ಉತ್ಸುಕಳಾಗಿದ್ದೇನೆ. ಇದು ನನ್ನ ಮೇಲೆಯೇ ಬರೆದಿರುವ ಹಾಡು, ನಾಯಕಿಯ ಆವೃತ್ತಿ. ಈ ಹಾಡು ತೆಲುಗಿನ ಪ್ರಖ್ಯಾತ ಗಾಯಕಿ ಮೇಘಾ ಹಾಡಿದ್ದಾರೆ. ಇದು ಸಂಪೂರ್ಣವಾಗಿ ನನ್ನ ಕಲ್ಪನೆಯ ಮೇಲೆ ಓಡುವ ಹಾಡು. ಸಾಮಾನ್ಯವಾಗ ಪ್ರೀತಿ ಶುರುವಾದಾಕ್ಷಣ ಡ್ಯುಯೆಟ್ ಇರುತ್ತದೆ, ಆದರೆ ಈ ಹಾಡಿನಲ್ಲಿ ನನ್ನ ಕಲ್ಪನೆಯಲ್ಲಿ ಪ್ರಿಯತಮನನ್ನು ಹೊಗಳುತ್ತಿರುತ್ತೇನೆ" ಎನ್ನುತ್ತಾರೆ.

ಸಾಮನ್ಯವಾಗಿ ಕನ್ನಡ ಚಿತ್ರರಂಗ ನಾಯಕ ನಟರೆ ಪ್ರಧಾನವಾಗಿರುವುದರಿಂದ ಮತ್ತು ಅವರಿಗೆ ಮಾತ್ರ ಪರಿಚಯಾತ್ಮಕ ಪ್ರತ್ಯೇಕ ಹಾಡು ಲಭಿಸುವುದರಿಂದ ಈ ಹಾಡು ವಿಶಿಷ್ಟ ಎನ್ನುತ್ತಾರೆ ರಚಿತಾ. "ನಾಯಕನಟಿಗೆ ಇದು ವಿರಳ. 'ಗೆಳೆಯ ಗೆಳೆಯ' ಪುನೀತ್ ರಾಜಕುಮಾರ್ ಪಾತ್ರಕ್ಕೆ ವಿಶಿಷ್ಟವಾಗಿರುವಂತೆಯೇ, 'ನಿಂತಲ್ಲಿ ನಿಲಲಾರೆ' ನನ್ನ ಪಾತ್ರಕ್ಕೆ ವಿಶೇಷ" ಇದು ಪರಿಚಯಾತ್ಮಕ ಹಾಡು ಅಲ್ಲವಾದರೂ, ಕಲ್ಪನೆಯ ಸೋಲೋ ಹಾಡು ಎನ್ನುತ್ತಾರೆ ನಟಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಪಾಕಿಸ್ತಾನ ಬಗ್ಗು ಬಡಿದ ಭಾರತಕ್ಕೆ ಮತ್ತೊಂದು ಚಿನ್ನ: ಗೋಲ್ಡ್ ಗೆದ್ದ ಕುಸ್ತಿಪಟು ಅಮನ್!

ನೋಯ್ಡಾದ 'ಸೂಪರ್ನೋವಾ' ಕಟ್ಟಡದ 43ನೇ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ; ದೇಹ ಛಿದ್ರ ಛಿದ್ರ! ಭಯಾನಕ Video

Asian Games 2026: 'ನೀನ್ ಕ್ಯಾಚ್ ಬಿಡು, ನಾವ್ ನೀರು ಬಿಡ್ತೀವಿ': ಫೀಲ್ಡಿಂಗ್ ಮಾಡುತ್ತಿದ್ದ ಪಾಕ್ ಬೌಲರ್ ಗೆ ಅಭಿಮಾನಿಗಳ ಕಾಟ! Video

ಕರ್ನಾಟಕದಲ್ಲಿ ತೀವ್ರ ಬರ: ತುರ್ತು ಮಧ್ಯಪ್ರವೇಶಿಸುವಂತೆ ಪ್ರಧಾನಿ ಮೋದಿಗೆ ಖರ್ಗೆ ಒತ್ತಾಯ; ಅಮಿತ್ ಶಾಗೆ ಪತ್ರ!

'ಅಸಹ್ಯ, ವಿಕೃತ, ನಾಚಿಕೆಗೇಡು.. ಕ್ಷಮಿಸೋ ಮಾತೇ ಇಲ್ಲ.. ಕಾನೂನು ಕ್ರಮ ಖಂಡಿತ': ನಟ Jr NTR ಕೆಂಡಾಮಂಡಲ, ಆಗಿದ್ದೇನು?