ಸ್ನೇಹಿತೆಯ ಮದುವೆ ಕಾರ್ಯಕ್ರಮದಲ್ಲಿ ರಣವೀರ್ ಸಿಂಗ್ ಜೊತೆ ದೀಪಿಕಾ ಪಡುಕೋಣೆ 
ಸಿನಿಮಾ ಸುದ್ದಿ

ಬಾಯ್ ಫ್ರೆಂಡ್ ರಣವೀರ್ ಸಿಂಗ್ ಜೊತೆ ಸ್ನೇಹಿತೆ ಮದುವೆಯಲ್ಲಿ ಪಾಲ್ಗೊಂಡ ದೀಪಿಕಾ

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ತನ್ನ ಆಪ್ತ ಸ್ನೇಹಿತೆಯ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೊನ್ನೆ...

ನವದೆಹಲಿ: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ತನ್ನ ಆಪ್ತ ಸ್ನೇಹಿತೆಯ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿನ್ನೆ ಶ್ರೀಲಂಕಾಕ್ಕೆ ಹಾರಿದ್ದಳು. ಅಲ್ಲಿ ಆಕೆಯ ಬಾಯ್ ಫ್ರೆಂಡ್ ರಣವೀರ್ ಸಿಂಗ್ ಆಕೆಗೆ ಸಾಥ್ ನೀಡಿದ್ದಾನೆ.

ತನ್ನ ಮೊದಲ ಹಾಲಿವುಡ್ ಚಿತ್ರ ಎಕ್ಸೆಕ್ಸ್: ದ ರಿಟರ್ನ್ ಆಫ್ ಕ್ಸೇಂಡರ್ ಕೇಜ್ ನ ಶೂಟಿಂಗ್ ಗೋಸ್ಕರ ಕೆನಡಾದಲ್ಲಿರುವ ದೀಪಿಕಾ ಸ್ನೇಹಿತೆಯ ಮದುವೆಗಾಗಿಯೇ ಶ್ರೀಲಂಕಾಕ್ಕೆ ತನ್ನ ತಾಯಿಯೊಂದಿಗೆ ಹೋಗಿದ್ದಳು. ಅಲ್ಲಿಗೆ ರಣವೀರ್ ಕೂಡ ಹೋಗಿದ್ದಾನೆ. ಮದುವೆ ಕಾರ್ಯಕ್ರಮದ ವೇಳೆ ದೀಪಿಕಾ ಮತ್ತವಳ ತಾಯಿ ರಣವೀರ್ ಜೊತೆಗಿರುವ ಫೋಟೋವನ್ನು ಆಕೆಯ ಸ್ನೇಹಿತರೊಬ್ಬರು ತೆಗೆದು ಟ್ವಿಟ್ಟರ್ ನಲ್ಲಿ ಹಾಕಿದ್ದಾರೆ.

ದೀಪಿಕಾ ಎಲ್ಲೇ ವಿದೇಶಕ್ಕೆ ಹೋದರೂ ಅಲ್ಲಿಗೆ ರಣವೀರ್ ಕೂಡ ಇತ್ತೀಚೆಗೆ ಹೋಗುತ್ತಿದ್ದಾನೆ. ಕಳೆದ ತಿಂಗಳು ಫೆಬ್ರವರಿಯಲ್ಲಿ ವ್ಯಾಲೆಂಟೈನ್ಸ್ ಡೇ ದಿನ ಟೊರೊಂಟೋದಲ್ಲಿ ಶೂಟಿಂಗ್ ನಲ್ಲಿ ದೀಪಿಕಾ ಇದ್ದ ಸೆಟ್ ಗೆ ಭೇಟಿ ನೀಡಿ ತನ್ನ ಪ್ರೇಯಸಿಗೆ ಸರ್ ಪ್ರೈಸ್ ನೀಡಿದ್ದ. ಇನ್ನು ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ರಣವೀರ್, ದೀಪಿಕಾಳನ್ನು ತನ್ನ ಅರ್ಧಾಂಗಿ ಎಂದು ಹೇಳಿ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದ್ದ. ಇವೆಲ್ಲ ದೀಪಿಕಾ-ರಣವೀರ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!