ಸಿನಿಮಾ ಸುದ್ದಿ

ಸತ್ಯಜಿತ್ ರೇ ಜನ್ಮದಿನದಂದು ಗೌರವ ಸಲ್ಲಿಸಿದ ನಿರ್ದೇಶಕರು

Guruprasad Narayana

ಮುಂಬೈ: ಖ್ಯಾತ ಚಲನಚಿತ್ರ ನಿರ್ದೇಶಕ ಸತ್ಯಜಿತ್ ರೇ ಜಯಂತಿಯಾದ ಇಂದು ಅವರನ್ನು ನೆನಪಿಸಿಕೊಂಡಿರುವ ಹಲವಾರು ನಿರ್ದೇಶಕ -ನಟ- ನಿರ್ಮಾಪಕರು ಭಾರತೀಯ ಸಿನೆಮಾದ ಮಾಸ್ಟರ್ ಎಂದೇ ಖ್ಯಾತಿಯಾದ ರೇ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಗೌರವ ಸಲ್ಲಿಸಿದ್ದಾರೆ.

ರೇ ಅವರನ್ನು ನೆನಪಿಸಿಕೊಂಡಿರುವ ನಿರ್ದೇಶಕ ಮಧುರ್ ಭಂಡಾರ್ಕರ್, ರೇ ವಿಶ್ವ ಸಿನೆಮಾಗಳ ಪ್ರಭಾವಿ ನಿರ್ದೇಶಕರಲ್ಲಿ ಒಬ್ಬರು ಎಂದಿದ್ದಾರೆ. ಸತ್ಯಜಿತ್ ರೇ ಅವರ ಮೊದಲ ಸಿನೆಮಾ 'ಪಥೇರ್ ಪಾಂಚಾಲಿ' ೧೧ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿತ್ತು  ಇದರಲ್ಲಿ ೧೯೫೬ ರ ಕಾನ್ ಚಲನಚಿತ್ರೋತ್ಸವ ಗೆದ್ದ ಪ್ರಶಸ್ತಿಯೂ ಒಂದು .

ನಿರ್ದೇಶಕ ಅಶೋಕ್ ಪಂಡಿತ್ ಕೂಡ ಭಾರತ ರತ್ನ ಪುರಸ್ಕೃತ ನಿರ್ದೇಶಕನನ್ನು ನೆನಪಿಸಿಕೊಂಡಿದ್ದಾರೆ.

ಈ ಕೆಲವು ತಾರೆಯರು ಟ್ವಿಟ್ಟರ್ ನಲ್ಲಿ ರೇ ಅವರನ್ನು ನೆನಪಿಸಿಕೊಂಡಿದ್ದು ಹೀಗೆ

ಸುಜಿತ್ ಸರ್ಕಾರ್: "ಇಂದು ರೇ ದಿನ. ಮಾಸ್ಟರ್ ಸತ್ಯಜಿತ್ ರೇ ಜಯಂತಿಯ ಶುಭಾಶಯಗಳು"

ಅಶೋಕ್ ಪಂಡಿತ್: "ಭಾರತೀಯ ಸಿನೆಮಾದ ಮಾಸ್ಟರ್ ಅವರ ಜಯಂತಿಯ ಶುಭಾಶಯಗಳು. ಸತ್ಯಜಿತ್ ರೇ ಸಾಹೇಬರಿಗೆ ಈ ಮೂಲಕ ಗೌರವ ಸಲ್ಲಿಸುತ್ತಿದ್ದೇನೆ".

ಮಧುರ ಭಂಡಾರ್ಕರ್: "ಅತ್ಯದ್ಭುತ ನಿರ್ದೇಶಕ ಮತ್ತು ವಿಶ್ವ ಸಿನೆಮಾದ ಪ್ರಭಾವಿ ನಿರ್ದೇಶಕರಲ್ಲಿ ಒಬ್ಬರಾದ ಸತ್ಯಜಿತ್ ರೇ ಹುಟ್ಟಿದ್ದು ಮೇ ೨ ೧೯೨೧" ಎಂದು ಟ್ವೀಟ್ ಮಾಡಿದ್ದಾರೆ.

SCROLL FOR NEXT