ಚಿರಂಜೀವಿ ಸರ್ಜಾ 
ಸಿನಿಮಾ ಸುದ್ದಿ

ಮತ್ತೆ ಒಂದಾದ ಕೆ ಎಂ ಚೈತನ್ಯ ಮತ್ತು ಚಿರಂಜೀವಿ ಸರ್ಜಾ

ಇನ್ನೂ ನಾಮಕರಣಗೊಳ್ಳದ ಸಿನೆಮಾದ ಚಿತ್ರೀಕರಣಕ್ಕಾಗಿ ಚಿರಂಜೀವಿ ಸರ್ಜಾ ಲಂಡನ್ ನಲ್ಲಿದ್ದಾರೆ. ಅಲ್ಲಿ ಚಿತ್ರೀಕರಣದ ಪ್ರಗತಿಯನ್ನು ಟ್ವಿಟ್ಟರ್ ನಲ್ಲಿ ಅವರು ಹಂಚಿಕೊಳ್ಳುತ್ತಿದ್ದರೂ, ಸಿನೆಮಾದ ಬಗ್ಗೆ ಹೆಚ್ಚಿನ

ಬೆಂಗಳೂರು: ಇನ್ನೂ ನಾಮಕರಣಗೊಳ್ಳದ ಸಿನೆಮಾದ ಚಿತ್ರೀಕರಣಕ್ಕಾಗಿ ಚಿರಂಜೀವಿ ಸರ್ಜಾ ಲಂಡನ್ ನಲ್ಲಿದ್ದಾರೆ. ಅಲ್ಲಿ ಚಿತ್ರೀಕರಣದ ಪ್ರಗತಿಯನ್ನು ಟ್ವಿಟ್ಟರ್ ನಲ್ಲಿ ಅವರು ಹಂಚಿಕೊಳ್ಳುತ್ತಿದ್ದರೂ, ಸಿನೆಮಾದ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಬಿಟ್ಟುಕೊಡುತ್ತಿಲ್ಲ.

ಮೂಲಗಳ ಪ್ರಕಾರ 'ಆಟಗಾರ' ಸಿನೆಮಾದ ನಿರ್ದೇಶಕ ಕೆ ಎಂ ಚೈತನ್ಯ ಕೂಡ ಲಂಡನ್ ನಲ್ಲಿದ್ದು ಈ ಸಿನೆಮಾದ ನಿರ್ದೇಶಕ ಎನ್ನಲಾಗಿದೆ. 'ಆಟಗಾರ' ಸಿನೆಮಾದಲ್ಲಿ ಈ ಜೋಡಿ ಒಟ್ಟಿಗೆ ಕೆಲಸ ಮಾಡಿತ್ತು.  

"ಚೈತನ್ಯ ಕಳೆದ ೧೫ ದಿನಗಳಿಂದ ಲಂಡನ್ ನಲ್ಲಿದ್ದಾರೆ. ಚಿತ್ರತಂಡದ ಜೊತೆಗೆ ಈ ತಿಂಗಳ ಕೊನೆಯವರೆಗೂ ಅವರು ಅಲ್ಲಿರಲಿದ್ದಾರೆ. ಅವರು ನಿರ್ಮಾಪಕರ ಜೊತೆಗೆ ಯಾವ ವಿಷಯವನ್ನು ಬಿಚ್ಚಿಡದ ಒಪ್ಪಂದಕ್ಕೆ ಸಹಿ ಹಾಕಿರುವುದರಿಂದ ಸಿನೆಮಾದ ಬಗ್ಗೆ ಅವರು ಮಾಹಿತಿ ನೀಡುವಂತಿಲ್ಲ. ನಿರ್ಮಾಪಕ ಹಸಿರು ನಿಶಾನೆ ತೋರಿದ ನಂತರವಷ್ಟೇ ಹೆಚ್ಚಿನ ವಿವರಗಳನ್ನು ಚೈತನ್ಯ ನೀಡಲಿದ್ದಾರೆ" ಎನ್ನುತ್ತವೆ ಮೂಲಗಳು.

ಏಪ್ರಿಲ್ ೨೭ ರಂದು ಚಿರಂಜೀವಿ ಸರ್ಜಾ ಮಾಡಿರುವ ಟ್ವೀಟ್ ಪ್ರಕಾರ "ಲಂಡನ್ ನಲ್ಲಿ ಆರನೇ ದಿನದ ಶೂಟಿಂಗ್" ಎಂದಿದೆ.

ಈ ಟ್ವೀಟ್ ಅನ್ನು ಅವರು ನಿರ್ದೇಶಕ, ನಟಿ ಶರ್ಮಿಳಾ ಮಾಂಡ್ರೆ ಮತ್ತು ಯೋಗಿಶ್ ದ್ವಾರಕೀಶ್ ಅವರಿಗೆ ಬರೆದಿದ್ದು, ಶರ್ಮಿಳಾ ಚಿತ್ರದ ನಾಯಕಿ ಮತ್ತು ಯೋಗಿಶ್ ನಿರ್ಮಾಪಕ ಎಂದು ಊಹಿಸಲಾಗಿದೆ. ಇದು ಚೈತನ್ಯ ಅವರ ಐದನೇ ಸಿನೆಮಾ ಆಗಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT