ಮುಂಬೈ: ಹಾಲಿವುಡ್ ನಲ್ಲಿ ತಮ್ಮ ಪ್ರಪ್ರಥಮ ಚಿತ್ರ 'ಬೇವಾಚ್'ನ ಚಿತ್ರೀಕರಣವನ್ನು ನಟಿ ಪ್ರಿಯಾಂಕಾ ಚೋಪ್ರಾ ಮುಗಿಸಿದ್ದಾರೆ.
ತಮ್ಮ ಚಿತ್ರವೊಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ನಟಿ "ಬೇವಾಚ್ ಸಿನೆಮಾ ಚಿತ್ರೀಕರಣದ ಮುಕ್ತಾಯ ಚಿತ್ರ ಇದು... ಈ ಸಿನೆಮಾ ದಂತಕತೆ, ತಂಡವೂ" ಎಂದು ಈ ಚಿತ್ರಕ್ಕೆ ಪ್ರಿಯಾಂಕಾ ಶೀರ್ಷಿಕೆ ನೀಡಿದ್ದಾರೆ.
"ನನ್ನೆಡೆಗೆ ಹಲವಾರು ಪ್ರೀತಿಯ ಅದ್ಭುತ ಅಪ್ಪುಗೆಗಳು ಬಂದವು... ಮತ್ತೆ ಕಾಣುತ್ತೇನೆ" ಎಂದು ಕೂಡ ಅವರು ಬರೆದಿದ್ದಾರೆ.
೧೯೯೦ರ ಜನಪ್ರಿಯ ಟಿವಿ ಧಾರಾವಾಹಿ 'ಬೇವಾಚ್' ಆಧಾರಿತ ಸಿನೆಮಾ ಇದಾಗಿದೆ. ಇದನ್ನು ನಿರ್ದೇಶಕ ಸೇಥ್ ಗಾರ್ಡನ್ ನಿರ್ದೇಶಿಸಿದ್ದಾರೆ.
ಟಿವಿ ಧಾರಾವಾಹಿ 'ಕ್ವಾಂಟಿಕೋ'ದಲ್ಲಿ ನಟಿಸಿದ್ದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಜಾಗತಿಕ ಮನ್ನಣೆ ಪಡೆದಿದ್ದರು.