ಯು-ಟರ್ನ್ ನಲ್ಲಿ ಶ್ರದ್ಧಾ ಶ್ರೀನಾಥ್ 
ಸಿನಿಮಾ ಸುದ್ದಿ

ಪವನ್ ಕುಮಾರ್ 'ಯು-ಟರ್ನ್'ಗೆ ಹೆಚ್ಚಿದ ಕುತೂಹಲ

ನ್ಯೂಯಾರ್ಕ್ ಸಿನೆಮೋತ್ಸವದಿಂದ ಹಿಂದಿರುಗಿರುವ 'ಲೂಸಿಯಾ' ಖ್ಯಾತಿಯ ಪವನ್ ಕುಮಾರ್, ಅವರ ನಿರ್ದೇಶನದ ನೂತನ ಚಿತ್ರ 'ಯು-ಟರ್ನ್' ಬಿಡುಗಡೆಗೆ ಸಿದ್ಧರಾಗಿದ್ದಾರೆ.

ಬೆಂಗಳೂರು: ನ್ಯೂಯಾರ್ಕ್ ಸಿನೆಮೋತ್ಸವದಿಂದ ಹಿಂದಿರುಗಿರುವ 'ಲೂಸಿಯಾ' ಖ್ಯಾತಿಯ ಪವನ್ ಕುಮಾರ್, ಅವರ ನಿರ್ದೇಶನದ ನೂತನ ಚಿತ್ರ 'ಯು-ಟರ್ನ್' ಬಿಡುಗಡೆಗೆ ಸಿದ್ಧರಾಗಿದ್ದಾರೆ. ವಿದೇಶದಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆಯಿಂದ ಸಂತಸಗೊಂಡಿರುವ ನಿರ್ದೇಶಕ, ಸಿನೆಮೋತ್ಸವದಲ್ಲಿ ಅತ್ಯುತ್ತಮ ಸ್ಕ್ರೀನ್ ಪ್ಲೇ ಪ್ರಶಸ್ತಿಗೆ ನಾಮಾಂಕಿತಗೊಂಡಿತ್ತು ಎಂದು ತಿಳಿಸಿ "ಅದು ಅದ್ಭುತ ಅನುಭವ" ಎನ್ನುತ್ತಾರೆ.

"ಪ್ರತಿಕ್ರಿಯೆ ಅತ್ಯುತ್ತಮವಾಗಿತ್ತು. ಮೊದಲಿಗೆ ಒಂದೇ ಪ್ರದರ್ಶನವಿತ್ತು ಆದರೆ ಅದು ತುಂಬಿದ ಪ್ರದರ್ಶನ ಕಂಡು ಆಯೋಜಕರು ಮತ್ತೊಂದು ಪ್ರದರ್ಶನಕ್ಕೆ ಎಡೆ ಮಾಡಿಕೊಟ್ಟರು" ಎನ್ನುತ್ತಾರೆ ಪವನ್.

ಯು-ಟರ್ನ್ ಸರಳ ಸಿನೆಮಾ ಎನ್ನುವ ಪವನ್, ಪ್ರೇಕ್ಷಕರ ಪ್ರತಿಕ್ರಿಯೆ 'ಲೂಸಿಯಾ'ಗಿಂತಲೂ ಅಭೂತಪೂರ್ವವಾಗಿತ್ತು ಎನ್ನುತ್ತಾರೆ.

ಈಗ ಕರ್ನಾಟಕದಾದ್ಯಂತ ಬಿಡುಗಡೆಗೆ ಸಿದ್ಧವಾಗಿದ್ದು ಹೆಚ್ಚಿನ ಸಿನೆಮಾಮಂದಿರಗಳಲ್ಲಿ ಸಿನೆಮಾ ಪ್ರದರ್ಶನಗೊಳ್ಳುವ ಭರವಸೆ ವ್ಯಕ್ತಪಡಿಸುತ್ತಾರೆ. "ಈ ಸಿನೆಮಾ ನಿರ್ಮಿಸಿರುವ ಕುತೂಹಲಕ್ಕೆ ಹಲವಾರು ಸಿನೆರಸಿಕರು ಚಿತ್ರ ನೋಡುವ ಉತ್ಸಾಹ ತೋರಿದ್ದಾರೆ. ಇದು ಲೂಸಿಯಾ ತಂಡದಿಂದ ಮೂಡಿಬಂದಿರುವ ಸಿನೆಮಾ ಆಗಿರುವುದರಿಂದ ಆಸಕ್ತಿ ಹೆಚ್ಚಿದೆ. ಹೆಚ್ಚು ಕುತೂಹಲವೂ ಇದೆ. ಜನ ನನ್ನ ಕೆಲಸವನ್ನು ಕಾದು ನೋಡುತ್ತಾರೆ ಎನ್ನುವುದು ಸಂತಸ ವಿಷಯ. ಸೋಮವಾರ ನನ್ನನ್ನು ವಿಮಾನನಿಲ್ದಾಣದಿಂದ ಕರೆತಂದ ಟ್ಯಾಕ್ಸಿ ಚಾಲಕ ಕೂಡ ಲೂಸಿಯಾ ಬಗ್ಗೆ ಮಾತನಾಡಿದ್ದು ವಿಶೇಷ" ಎನ್ನುತ್ತಾರೆ ಪವನ್.

ಈ ಸಿನೆಮಾದ ಕೇಂದ್ರ ವಸ್ತು 'ಟ್ರಾಫಿಕ್' ಅಂತೆ. ನಿಯಮಗಳನ್ನು ಪಾಲಿಸಿದರೂ ಕೂಡ ಪ್ರತಿಯೊಬ್ಬನು ಕೆಟ್ಟ ವಾಹನದಟ್ಟನೆಗೆ ಒಂದಲ್ಲ ಒಂದು ರೀತಿಯಲ್ಲಿ ತೊಂದರೆ ಅನುಭವಿಸಿ ಸಂತ್ರಸ್ತನಾಗಿರುತ್ತಾನೆ ಎಂಬ ವಿಷಯವನ್ನು ಗಮನಿಸಿದ್ದ ಪವನ್ "ಟ್ರಾಫಿಕ್ ತೊಂದರೆಗಳತ್ತ ಗಮನ ಹರಿಸಲು ಯು-ಟರ್ನ್ ಮಾಡಿದೆ. ಇದು ಮನರಂಜನಾ ಚಿತ್ರ, ಸಾಕ್ಷ್ಯಚಿತ್ರದ ರೀತಿಯಲ್ಲಿ ಚಿತ್ರಿಸಿಲ್ಲ" ಎನ್ನುತ್ತಾರೆ.

ಕಥೆಯ ಮೇಲೆ ಸಿನೆಮಾ ನಿಲ್ಲುತ್ತದೆ ಎಂದು ನಂಬುವ ನಿರ್ದೇಶಕ "ಜನಪ್ರಿಯ ಮತ್ತು ಕಮರ್ಷಿಯಲ್ ಸಿನೆಮಾಗಳು ತಾರೆಯರ ಮೇಲೆ ಅವಲಂಬಿತವಾಗಿರುತ್ತವೆ ಆದರೆ ಇಂತಹ ಸಿನೆಮಾಗಳು ಕೂಡ ಜೊತೆಯಲ್ಲಿ ಇರಬೇಕು" ಎನ್ನುತ್ತಾರೆ.

'ಯು-ಟರ್ನ್' ಚಿತ್ರ ಹಾರರ್ ಸಿನೆಮಾ ಎನ್ನುವ ವದಂತಿಗಳ ನಡುವೆ ಇದು ನಿಗೂಢ-ಥ್ರಿಲ್ಲರ್ ಸಿನೆಮಾ ಎನ್ನುವ ಪವನ್ "ಈ ಸಿನೆಮಾ ಜನರನ್ನು ಹೆದರಿಸಿದರೆ ಅದು ಹಾರರ್ ಕೂಡ" ಎಂದು ನಕ್ಕು "ನನಗೆ ಡ್ರಾಮಾ ಪ್ರಾಕಾರ ಕೂಡ ಇಷ್ಟ, ಈ ಸಿನೆಮಾದ ನಂತರ ಮಾಡುವಾಸೆ ಇದೆ" ಎನ್ನುತ್ತಾರೆ.

ಈ ಚಿತ್ರದ ಮೂಲಕ ಮುಖ್ಯ ಪಾತ್ರಧಾರಿಯಾಗಿ ಶ್ರದ್ಧಾ ಶ್ರೀನಾಥ್ ಪಾದಾರ್ಪಣೆ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT