ಜಿಗರ್ಥಂಡ ಸಿನೆಮಾದಲ್ಲಿ ನಟ ರವಿಶಂಕರ್ 
ಸಿನಿಮಾ ಸುದ್ದಿ

ರವಿಶಂಕರ್ ರಿಂದ, ಅವರಿಗಾಗಿಯೇ, ಅವರಿಗೋಸ್ಕರ ಜಿಗರ್ಥಂಡ ಹಾಡು

ಸಿನೆಮಾದಲ್ಲಿ ವಿಲನ್ ಗಳಿಗಾಗಿಯೇ ಹಾಡುಗಳನ್ನು ಗಿಟ್ಟಿಸಿಕೊಳ್ಳುವುದು ಅತಿ ವಿರಳ. ಆದರೆ ತಮಿಳು ಚಿತ್ರದ ಕನ್ನಡ ರಿಮೇಕ್ 'ಜಿಗರ್ಥಂಡ' ಸಿನೆಮಾದಲ್ಲಿ ಮುಖ್ಯ ಖಳನಾಯಕ ರವಿಶಂಕರ್ ಅವರಿಗಾಗಿಯೇ

ಬೆಂಗಳೂರು: ಸಿನೆಮಾದಲ್ಲಿ ವಿಲನ್ ಗಳಿಗಾಗಿಯೇ ಹಾಡುಗಳನ್ನು ಗಿಟ್ಟಿಸಿಕೊಳ್ಳುವುದು ಅತಿ ವಿರಳ. ಆದರೆ ತಮಿಳು ಚಿತ್ರದ ಕನ್ನಡ ರಿಮೇಕ್ 'ಜಿಗರ್ಥಂಡ' ಸಿನೆಮಾದಲ್ಲಿ ಮುಖ್ಯ ಖಳನಾಯಕ ರವಿಶಂಕರ್ ಅವರಿಗಾಗಿಯೇ ಹಾಡೊಂದನ್ನು ಸೇರಿಸಿಕೊಂಡಿರುವುದು ವಿಶೇಷ. ಈ ಸಿನೆಮಾದ ನಾಯಕ ನಟ ರಾಹುಲ್.

ಅರ್ಜುನ್ ಸಂಗೀತ ನೀಡಿರುವ ಈ ಹಾಡು ರವಿಶಂಕರ್ ರಿಂದ, ಅವರಿಗಾಗಿಯೇ, ಅವರಿಗೋಸ್ಕರವಂತೆ. ಮೊದಲ ಬಾರಿಗೆ ನಟ ಹಾಡಿರುವುದಲ್ಲದ, ಅದರ ಸಾಹಿತ್ಯವಾಗಿ ಅವರ ಇತರ ಸಿನೆಮಾಗಳ ಜನಪ್ರಿಯ ಸಂಭಾಷಣೆಗಳನ್ನು ಸೇರಿಸಲಾಗಿದೆಯಂತೆ. ಅವುಗಳಲ್ಲಿ ಬಹುತೇಕ ರವಿಶಂಕರ್ ಅವರಿಗೆ ಜನಪ್ರಿಯತೆ ತಂದುಕೊಟ್ಟ 'ಕೆಂಪೇಗೌಡ' ಸಿನೆಮಾದ ಸಂಭಾಷಣೆ.

'ಜಿಗರ್ಥಂಡ' ದಲ್ಲಿ ತಮ್ಮ ಪಾತ್ರದ ಬಗ್ಗೆ ಸಂತಸ ವ್ಯಕ್ತಪಡಿಸುವ ರವಿಶಂಕರ್ "ಇದು ನನ್ನ ಕನಸಿನ ಪಾತ್ರ. ಸಾಮಾನ್ಯವಾಗಿ ನನಗೆ ಖಳನಾಯಕ ಪಾತ್ರ ಸಿಗುತ್ತದೆ ಆದರೆ ಈ ಪಾತ್ರದಲ್ಲಿ ಋಣಾತ್ಮಕ ಛಾಯೆ ಇದ್ದರೂ, ಮನರಂಜನಾತ್ಮಕವಾದದ್ದು ಕೂಡ. 'ಕೆಂಪೇಗೌಡ' ಸಿನೆಮಾದಲ್ಲಿ ಅರ್ಮುಗ ಕೋಟೆ ಪಾತ್ರದಿಂದ ನನಗೆ ಜನಪ್ರಿಯತೆ ಬಂದಿದ್ದರಿಂದ, ಇಲ್ಲೂ ಕೂಡ ನಿರ್ದೇಶಕರು ನನಗೆ ಅದೇ ಹೆಸರನ್ನು ಉಳಿಸಿಕೊಂಡಿದ್ದಾರೆ. ನಾನು ಒಂದು ಹಾಡು ಕೂಡ ಹಾಡಿದ್ದೇನೆ. ನನ್ನು ಸಂತಸ ವಿವರಿಸಲು ಕಷ್ಟ. ಇದು ದೇವರ ದಯೆ" ಎನ್ನುತ್ತಾರೆ.

ಈ ಸಿನೆಮಾದಲ್ಲಿ ಚಿಕ್ಕಣ್ಣ. ಸಂಯುಕ್ತ ಹೊರನಾಡ, ಸಾಧು ಕೋಕಿಲಾ ಕೂಡ ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

FlyDubai ವಿಮಾನ ಹಾರಾಟಕ್ಕೆ ಒಮಾನ್ ನಲ್ಲಿ ನಿಷೇಧ: ಪತನಕ್ಕೆ ಯತ್ನಿಸಿದ್ದ ಸಹ ಪೈಲಟ್‌ ಉಗ್ರವಾದ ಹಿನ್ನಲೆಯವನೇ?

ಏಷ್ಯನ್ ಗೇಮ್ಸ್ 2026: 'ರಿಕರ್ವ್ ಆರ್ಚರಿಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಮೊಹೋದ್ ಕುಂಕುಮ್!

ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿ, ಮುಂಬೈನಲ್ಲಿ ಬೃಹತ್ ಪ್ರತಿಭಟನೆ; 700 ಮಂದಿ ವಶಕ್ಕೆ

FlyDubai ಘಟನೆ ಹಿಂದೆ ಯಾವುದೇ ಶಕ್ತಿಯ ಕೈವಾಡವಿದ್ದರೂ ಡೋಂಟ್ ಕೇರ್; 'ಭಾರಿ ಬೆಲೆ' ತೆರಬೇಕಾಗುತ್ತೆ- ಇಸ್ರೇಲ್ ಪ್ರಧಾನಿ ನೆತನ್ಯಾಹು ಎಚ್ಚರಿಕೆ

ಬಿಹಾರ ಪ್ರವಾಹ: ವಾಯುಪಡೆಯ ಹೆಲಿಕಾಪ್ಟರ್‌ನಿಂದ ಪರಿಹಾರ ಸಾಮಗ್ರಿಯ ಪ್ಯಾಕೆಟ್ ಬಿದ್ದು ವೃದ್ಧ ಸಾವು!