ನಟ ರಣಬೀರ್ ಕಪೂರ್ (ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

ನಾನು ರಣಬೀರ್ ಗರ್ಲ್ ಫ್ರೆಂಡ್ ಅಲ್ಲ: ಗಾಸಿಪ್ ಗಳಿಗೆ ತೆರೆ ಎಳೆದ ಭಾರತಿ

ನಾನು ರಣಬೀರ್ ಗರ್ಲ್ ಫ್ರೆಂಡ್ ಅಲ್ಲ. ರಣಬೀರ್ ಅವರನ್ನು ಎಂದಿಗೂ ಭೇಟಿ ಮಾಡಿಲ್ಲ. ನಮ್ಮಿಬ್ಬರಿಗೂ ಯಾವುದೇ ಸಂಬಂಧವಿಲ್ಲ ಎಂದು ಭಾರತಿ ಮಲ್ಹೋತ್ರಾ ಅವರು ಹೇಳಿದ್ದಾರೆ...

ಮುಂಬೈ: ನಾನು ರಣಬೀರ್ ಗರ್ಲ್ ಫ್ರೆಂಡ್ ಅಲ್ಲ. ರಣಬೀರ್ ಅವರನ್ನು ಎಂದಿಗೂ ಭೇಟಿ ಮಾಡಿಲ್ಲ. ನಮ್ಮಿಬ್ಬರಿಗೂ ಯಾವುದೇ ಸಂಬಂಧವಿಲ್ಲ ಎಂದು ಭಾರತಿ ಮಲ್ಹೋತ್ರಾ ಅವರು ಹೇಳಿದ್ದಾರೆ.

ಕತ್ರಿನಾ ಕಪೂರ್ ಜೊತೆ ಬ್ರೇಕ್ ಅಪ್ ಮಾಡಿಕೊಂಡ ಬಳಿಕ ಬಾಲಿವುಡ್ ನಟ ರಣಬೀರ್ ಕಪೂರ್ ಅವರು ಮತ್ತೊಂದು ಯುವತಿಯ ಜೊತೆ ಪ್ರೀತಿಗೆ ಬಿದ್ದಿದ್ದಾರೆಂಬ ಸುದ್ದಿ ಸಾಮಾಜಿಕ ಜಾಲತಾಣದಾದ್ಯಂತ ಹರಿದಾಡತೊಡಗಿತ್ತು. ಇದರಂತೆ ಆ ಯುವತಿ ಭಾರತಿ ಮಲ್ಹೋತ್ರಾ ಎಂದು ಹೇಳಲಾಗುತ್ತಿತ್ತು.

ಇದೀಗ ಈ ಗಾಸಿಪ್ ಗಳಿಗೆ ಖುದ್ದು ಭಾರತಿ ಮಲ್ಹೋತ್ರಾ ಅವರೇ ತೆರೆ ಎಳೆದಿದ್ದು, ಈ ಬಗ್ಗೆ ಮಾಧ್ಯಮವೊಂದರ ಜೊತೆ ಸಂದರ್ಶನದಲ್ಲಿ ಮಾತನಾಡಿದ್ದಾರೆ. ನಾನು ರಣಬೀರ್ ಅವರೊಂದಿಗೆ ಡೇಟ್ ಮಾಡುವುದು ದೂರದ ಮಾತು. ನಾನು ಅವರ ಅಭಿಮಾನಿ ಕೂಡ ಅಲ್ಲ. ಅವರನ್ನು ಎಂದಿಗೂ ಭೇಟಿಯಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.

ಕಳೆದ ವಾರವಷ್ಟೇ ಈ ಕುರಿತಂತೆ ನನ್ನ ಸ್ನೇಹಿತರೊಬ್ಬರು ನನಗೆ ಕರೆ ಮಾಡಿದ್ದರು. ನನಗೆ ಬಾಲಿವುಡ್ ಪರಿಚಯವೇ ಇಲ್ಲ, ಇನ್ನು ರಣಬೀರ್ ಅವರನ್ನು ಎಂದಿಗೂ ಭೇಟಿಯಾಗಿಲ್ಲ. ಹೀಗಿದ್ದ ಪಕ್ಷದಲ್ಲಿ ಅವರೊಂದಿಗೆ ಡೇಟಿಂಗ್ ಮಾಡಲು ಹೇಗೆ ಸಾಧ್ಯ. ನನ್ನ ಜೀವನದಲ್ಲಿ ಆಟವಾಡಲು ಕೆಲವರು ಈ ರೀತಿ ಮಾಡುತ್ತಿದ್ದಾರೆಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT