ನಟಿ ಪ್ರೇಮ 
ಸಿನಿಮಾ ಸುದ್ದಿ

17 ವರ್ಷಗಳ ನಂತರ ಮತ್ತೆ ಒಟ್ಟಾಗಿ ನಟಿಸಲಿರುವ ಉಪೇಂದ್ರ-ಪ್ರೇಮ

'ಕಲ್ಪನಾ-೨', 'ಮುಕುಂದ ಮುರಾರಿ' ಸಿನೆಮಾಗಳ ನಂತರ ನಟ-ನಿರ್ದೇಶಕ ಉಪೇಂದ್ರ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಶೀರ್ಷಿಕೆ ಎಂದಿನಂತೆ ವಿಚಿತ್ರವಾಗಿದೆ. 'ಉಪೇಂದ್ರ ಮತ್ತೆ ಹುಟ್ಟಿ ಬಾ, ಇಂತಿ ಪ್ರೇಮ'

ಬೆಂಗಳೂರು: 'ಕಲ್ಪನಾ-೨', 'ಮುಕುಂದ ಮುರಾರಿ' ಸಿನೆಮಾಗಳ ನಂತರ ನಟ-ನಿರ್ದೇಶಕ ಉಪೇಂದ್ರ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಶೀರ್ಷಿಕೆ ಎಂದಿನಂತೆ ವಿಚಿತ್ರವಾಗಿದೆ. 'ಉಪೇಂದ್ರ ಮತ್ತೆ ಹುಟ್ಟಿ ಬಾ, ಇಂತಿ ಪ್ರೇಮ' ಎಂಬ ಉದ್ದದ ಹೆಸರಿನ ಈ ಚಿತ್ರ ತೆಲುಗು ಸಿನೆಮಾ 'ಸೊಗ್ಗದೆ ಚಿನ್ನಿ ನಯನ'ದಿಂದ ಸ್ಫೂರ್ತಿ ಪಡೆದಿದೆಯಂತೆ. ಕನ್ನಡದಕ್ಕೆ ಕಥೆ ಉಪೇಂದ್ರ ಅವರೇ ಬರೆದಿದ್ದು, ಅರುಣ್ ಲೋಕನಾಥ್ ನಿರ್ದೇಶನದ ಜವಾಬ್ದಾರಿ ಹೊರಲಿದ್ದಾರೆ. ಈ ಹಿಂದ ಪ್ರಿಯಾಂಕಾ, ಪ್ರಭುದೇವ ಮತ್ತು ಉಪೇಂದ್ರ ನಟನೆಯ ಎಚ್೨ಒ ಸಿನೆಮಾ ಕೂಡ ಇವರೇ ನಿರ್ದೇಶಿಸಿದ್ದರು.

'ಉಪೇಂದ್ರ ಮತ್ತೆ ಹುಟ್ಟಿ ಬಾ.. ' ಸಿನೆಮಾದಲ್ಲಿ ಉಪೇಂದ್ರ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಪ್ರೇಮಾ ಮೊದಲ ಬಾರಿಗೆ ಉಪೇಂದ್ರ ನಿರ್ದೇಶನದ 'ಓಂ' ಸಿನೆಮಾದಲ್ಲಿ ನಟಿಸಿದ್ದರು ನಂತರ 'ಉಪೇಂದ್ರ' ಸಿನೆಮಾದಲ್ಲೂ ಕೂಡ ಉಪೇಂದ್ರ ಜೊತೆಗೆ ನಟಿಸಿದ್ದರು. ೨೦೦೯ರಲ್ಲಿ 'ಶಿಶಿರ' ಸಿನೆಮಾದ ನಂತರ ನಟನೆಯಿಂದ ದೂರ ಉಳಿದಿದ್ದರು.

"೧೭ ವರ್ಷಗಳ ನಂತರ ಉಪೇಂದ್ರ ಜೊತೆಗೆ ಒಟ್ಟಿಗೆ ನಟಿಸಲಿದ್ದಾರೆ ಪ್ರೇಮ" ಎಂದು ಮೂಲಗಳು ತಿಳಿಸಿವೆ.

ಉಪೇಂದ್ರ ಅವರ ಕೆಲಸಗಳನ್ನು ನಿರ್ವಹಿಸುವ ಶ್ರೀರಾಮ್ ಈ ಸಿನೆಮಾದ ನಿರ್ಮಾಪಕರಂತೆ. ಎಲ್ಲವೂ ಸುಸೂತ್ರವಾಗಿ ನೆರವೇರಿದರೆ ಜೂನ್ ಎರಡನೇ ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ.

ಸದ್ಯಕ್ಕೆ ನಂದ ಕಿಶೋರ್ ನಿರ್ದೇಶನದ 'ಮುಕುಂದ ಮುರಾರಿ' ಸಿನೆಮಾದ ಚಿತ್ರಿಕರಣದ ಮುಕ್ತಾಯ ಹಂತದಲ್ಲಿ ಉಪೇಂದ್ರ ಭಾಗಿಯಾಗಿದ್ದು, ಅನಂತ ರಾಜು ನಿರ್ದೇಶನದ 'ಕಲ್ಪನಾ-೨' ಸಿನೆಮಾದ ಹಾಡಿನ ಚಿತ್ರೀಕರಣದಲ್ಲಿ ಕೂಡ ತೊಡಗಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT