'ಹೆಬ್ಬುಲಿ' ಚಿತ್ರದಲ್ಲಿ ಸುದೀಪ್ 
ಸಿನಿಮಾ ಸುದ್ದಿ

ಚಿತ್ರೀಕರಣಕ್ಕಾಗಿ ಹಬ್ಬಗಳನ್ನು ತಪ್ಪಿಸಿಕೊಂಡ ಹೆಬ್ಬುಲಿ ಚಿತ್ರತಂಡ

ಸುದೀಪ್ ಮತ್ತು ಅಮಲಾ ಪೌಲ್ ಮುಖ್ಯ ಭೂಮಿಕೆಯಲ್ಲಿರುವ 'ಹೆಬ್ಬುಲಿ' ಚಿತ್ರ ಕೊನೆಯ ಹಂತದ ಚಿತ್ರೀಕರಣದಲ್ಲಿದೆ. ಎಸ್ ಕೃಷ್ಣ ನಿರ್ದೇಶನದ 70 ಸದಸ್ಯರ ಹೆಬ್ಬುಲಿ ಚಿತ್ರತಂಡ ಸಿನೆಮಾದ ಕ್ಲೈಮ್ಯಾಕ್ಸ್

ಬೆಂಗಳೂರು: ಸುದೀಪ್ ಮತ್ತು ಅಮಲಾ ಪೌಲ್ ಮುಖ್ಯ ಭೂಮಿಕೆಯಲ್ಲಿರುವ 'ಹೆಬ್ಬುಲಿ' ಚಿತ್ರ ಕೊನೆಯ ಹಂತದ ಚಿತ್ರೀಕರಣದಲ್ಲಿದೆ. ಎಸ್ ಕೃಷ್ಣ ನಿರ್ದೇಶನದ 70 ಸದಸ್ಯರ ಹೆಬ್ಬುಲಿ ಚಿತ್ರತಂಡ ಸಿನೆಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕಾಗಿ ಸದ್ಯಕ್ಕೆ ಮಂಗಳೂರಿನಲ್ಲಿದ್ದು, ಶನಿವಾರದ ವೇಳೆಗೆ ಚಿತ್ರೀಕರಣ ಸಂಪೂರ್ಣಗೊಳಿಸಲಿದೆ. 
ಡಿಸೆಂಬರ್ ನಲ್ಲಿ ಸಿನೆಮಾ ಬಿಡುಗಡೆ ಮಾಡುವ ಇರಾದೆ ಹೊಂದಿರುವ ನಿರ್ಮಾಪಕರು ಯಾವುದೇ ವಿರಾಮ ತೆಗೆದುಕೊಳ್ಳದೆ, ಹಬ್ಬದ ಸಮಯದಲ್ಲಿ ಕೂಡ ನಿರಂತರವಾಗಿ ಕೆಲಸ ಮಾಡಿದ್ದಾರೆ. "ಗಣೇಶ ಚತುರ್ಥಿ ಸಮಯದಲ್ಲಿ ತಂಡ ಕಾಶ್ಮೀರದಲ್ಲಿತ್ತು. ದಸರಾ ಸಮಯದಲ್ಲಿ ನಾವು ಸ್ವಿಟ್ಸರ್ ಲ್ಯಾಂಡ್ ನಲ್ಲಿದ್ದೆವು ಮತ್ತು ಈಗ ದೀಪಾವಳಿಯಲ್ಲಿ ಮಂಗಳೂರಿನಲ್ಲಿ ಚಿತ್ರೀಕರಣ ನಡೆಸಿದ್ದೆವು" ಎನ್ನುವ ನಿರ್ದೇಶಕ "ಗುರಿಯನ್ನು ನಿಗದಿತ ಸಮಯಕ್ಕೆ ತಲುಪಲು ಹಗಲು ರಾತ್ರಿ ಎನ್ನದೆ ಚಿತ್ರ ತಂಡ ದುಡಿಯುತ್ತಿದೆ" ಎನ್ನುತ್ತಾರೆ. 
ಈಮಧ್ಯೆ ಇತ್ತೀಚೆಗಷ್ಟೇ 'ಹೆಬ್ಬುಲಿ'ಯ ಮತ್ತೊಂದು ಪೋಸ್ಟರ್ ಬಿಡುಗಡೆಯಾಗಿದ್ದು, ಅಭಿಮಾನಿಗಳನ್ನು ಇನ್ನಷ್ಟು ಸೆಳೆದಿದೆಯಂತೆ. 
ರವಿಚಂದ್ರನ್ ಕೂಡ ಮುಖ್ಯ ಪಾತ್ರವೊಂದರಲ್ಲಿ ನಟಿಸಿರುವ ಈ ಸಿನೆಮಾದಲ್ಲಿ ರವಿ ಶಂಕರ್, ಕಬೀರ್ ದುಹಾನ್ ಸಿಂಗ್, ರವಿ ಕಿಶನ್ ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರಕ್ಕೆ ಎ ಕರುಣಾಕರ್ ಛಾಯಾಗ್ರಹಣವಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ, ಶಾ ಭಯಗೊಂಡಿದ್ದು ನಮ್ಮ ಹೋರಾಟದಲ್ಲಿ ಅರ್ಧ ಗೆದ್ದಿದ್ದೇವೆ, CEC ರಾಜೀನಾಮೆ ನೀಡುವವರೆಗೆ ಹಿಂಜರಿಯುವುದಿಲ್ಲ': ಇಂದು CJP ಪ್ರತಿಭಟನೆ ಮುಂದುವರಿಕೆ

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

CJP ಪ್ರತಿಭಟನೆಗೆ ದೇಶವಿರೋಧಿ ಶಕ್ತಿಗಳ ಸಾಥ್‌: ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ..!

ಬರದಿಂದ ರೈತರು ಕಂಗಾಲಾಗಿದ್ದರೂ ಸಿಎಂ ಡಿಕೆಶಿಗೆ ಮಾತ್ರ ಸ್ಟಿಂಗ್ ಆಪರೇಷನ್'ನದ್ದೇ ಚಿಂತೆ: HDK ವ್ಯಂಗ್ಯ