'ಜಾನ್ ಜಾನಿ ಜನಾರ್ಧನ್' ಸಿನೆಮಾದ ಸ್ಟಿಲ್
ಬೆಂಗಳೂರು: ಉತ್ತರ ಕರ್ನಾಟಕವನ್ನು ಗುರಿಯಾಗಿಸಿಕೊಂಡು ಪ್ರಚಾರ ಪ್ರವಾಸಕ್ಕೆ ತೆರಳಿದ್ದ 'ಜಾನ್ ಜಾನಿ ಜನಾರ್ಧನ್' ಚಿತ್ರತಂಡ, ತಮ್ಮ ಕಾರ್ಯಕ್ರಮಗಳು ಯಶಸ್ವಿಯಾದದ್ದಕ್ಕೆ ಸಂತಸದಲ್ಲಿದೆ. ಬಿಡುಗಡೆಗೆ ಮುಂಚಿತವಾಗಿ ಮಾಡುವ ಯಾವುದೇ ಚಟುವಟಿಕೆ ಸಿನೆಮಾಗೆ ಸಹಾಯ ಮಾಡಲಿದೆ ಎಂದು ನನಗೆ ಗೋಚರವಾಯಿತು ಎನ್ನುತ್ತಾರೆ ನಿರ್ಮಾಪಕರಲ್ಲಿ ಒಬ್ಬರಾದ ಎಲ್ ಪದ್ಮನಾಭನ್.
"ನಮ್ಮ ಈ ಪ್ರವಾಸದಲ್ಲಿ ಕಾಲೇಜುಗಳಿಗೆ ಭೇಟಿ ನೀಡಿ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಎಂದರು 5000 ವಿದ್ಯಾರ್ಥಿಗಳನ್ನು ಭೇಟಿ ಮಾಡಿದೆವು. ಅವರಿಗೆ ತಾರೆಯರ ಜೊತೆಗೆ ಸಂವಹಿಸುವುದಕ್ಕೆ ಬಹಳ ಖುಷಿಯಾಯಿತು ಮತ್ತು ನಮಗೆ ಪ್ರೇಕ್ಷಕರ ನಾಡಿಮಿಡಿತ ಸಿಕ್ಕಿತು. ಅವರಿಗೆ ಈ ಸಿನೆಮಾ ಬಲವಾಗಿ ಕನೆಕ್ಟ್ ಆಗಲಿದೆ ಎಂದು ನಂಬಿದ್ದೇನೆ" ಎನ್ನುತ್ತಾರೆ ಪದ್ಮನಾಭ್.
ಸಿನೆಮಾ ನಿರ್ಮಾಪಕರು ತಿಳಿಸುವ ಮತ್ತೊಂದು ಸಂತಸದ ಸುದ್ದಿಯಲ್ಲಿ ಬಿಡುಗಡೆಗೆ ಮುಂಚಿತವಾಗಿಯೇ ಸಿನೆಮಾದ ಟಿವಿ ಪ್ರಸಾರ ಹಕ್ಕುಗಳನ್ನು ಮಾರಾಟ ಮಾಡಲಾಗಿದೆಯಂತೆ. "ನಾವೀಗ ಸೆನ್ಸಾರ್ ಮಂಡಳಿ ಮುಂದೆ ಹೋಗುತ್ತಿದ್ದೇವೆ ಮತ್ತು ನವೆಂಬರ್ 11 ಕ್ಕೆ ಸಿನೆಮಾ ಬಿಡುಗಡೆ ಮಾಡಲಿದ್ದೇವೆ" ಎನ್ನುತ್ತಾರೆ.
ಅಜಯ್ ರಾವ್, ಯೋಗಿ, ಕೃಷ್ಣ ಮತ್ತು ಕಾಮ್ನ ರಣಾವತ್ ಈ ಸಿನೆಮಾದ ಮುಖ್ಯ ಭೂಮಿಕೆಯಲ್ಲಿದ್ದಾರೆ.